ಜಗಳೂರು: ಜ.20 ಸರಕಾರಿ ನಿವೃತ್ತ ನೌಕರರ ಸುವರ್ಣ ಮಹೋತ್ಸವ!

Suddivijaya
Suddivijaya January 14, 2023
Updated 2023/01/14 at 11:47 AM

ಸುದ್ದಿವಿಜಯ, ಜಗಳೂರು: ಇದೇ ಜ.20 ರಂದು ಪಟ್ಟಣದ ದೇವೆಗೌಡ ಬಡಾವಣೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು ಪಿಂಚಣಿದಾರರು ಕುಟುಂಬ ಸಮೇತ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಸರಕಾರಿ ನಿವೃತ್ತ ಸಂಘದ ತಾಲೂಕು ಅಧ್ಯಕ್ಷ ಎ.ಪಾಲಯ್ಯ ಹೇಳಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದಿಂದ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಖಾಲಿ ನಿವೇಶನಕ್ಕೆ ದೇಣಿಗೆ ನೀಡಿದ 75 ವರ್ಷ ವಯಸ್ಸು ಪೂರ್ಣಗೊಂಡ ಪಿಂಚಣಿದಾರರಿಗೆ ಹಾಗೂ ಒಬ್ಬ ಸಾಹಿತಿ ಸನ್ಮಾನಿಸಲಾಗುವುದು.

1982 ರನಂತರ ಮಹಾರಾಷ್ಟ್ರದ ನಾಕರ ಅವರ ಹೋರಾಟದಫಲವಾಗಿ ಕಾಲ ಕಾಲಕ್ಕೆ ಪಿಂಚಣಿ ಬಡ್ತಿ ಪಾವತಿಯಾಗುತ್ತಿದೆ. ಇದರ ಸ್ಮರಣೆಗಾಗಿ ನಿವೃತ್ತ ನೌಕರರ ದಿನಾಚರಣೆ ಆಚರಿಸುವ ಮೂಲಕ ಭಾವಚಿತ್ರ ಅನಾವರಣಗೊಳಿಸಲಾಗುವುದು ಎಂದು ಮಾಹಿತಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಮಸ್ಯೆಗಳ ಜೊತೆಗೆ 7ನೇ ವೇತನ ಪರಿಷ್ಕರಣೆ, ಎನ್‍ಪಿಎಸ್ ರದ್ದುಪಡಿಸುವುದು, ಅಂತ್ಯಸಂಸ್ಕಾರ ಭತ್ಯೆ, ಆರೋಗ್ಯ ಸಂಜೀವಿನಿ ಯೋಜನೆ, ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಸರಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ನಿವೃತ್ತ ನೌಕರರ ಭವನದಲ್ಲಿ ಪಿಂಚಣಿದಾರರಿಗೆ ವಸತಿಗಾಗಿ ಕೊಠಡಿಗಳನ್ನು ನಿರ್ಮಿಸಲಾಗುವುದು. ನಿವೃತ್ತಿ ನಂತರ ಹಣವನ್ನು ಕುಟುಂಬಕ್ಕೆ ಹಂಚಿ ಕುಟುಂಬದ ಸದಸ್ಯರಿಂದ ದೂರವಾಗಿ ವೃದ್ದಾಶ್ರಮ, ಅನಾಥಾಶ್ರಮದತ್ತ ಮುಖಮಾಡುವುದನ್ನು ನಿಯಂತ್ರಿಸಬೇಕು ಎಂದು ತಿಳಿಸಿದರು.

ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ,ಉಪಾಧ್ಯಕ್ಷ ನಜೀರ್ ಅಹಮ್ಮದ್,ರಾಜ್ಯಪರಿಷತ್ ಸದಸ್ಯ ಟಿ.ಕೆ. ಮಂಜುನಾಥ್,ಖಜಾಂಚಿ ಮಲ್ಲಿಕಾರ್ಜುನ್, ಪದಾಧಿಕಾರಿಗಳಾದ ಜಯರಾಮಯ್ಯ, ಗುರುಮೂರ್ತಿ, ಮಹಾಬಲೇಶ್, ಹುಚ್ಚಲಿಂಗಯ್ಯ ಸೇರಿದಂತೆ ಅನೇಕರು ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!