ಸುದ್ದಿವಿಜಯ,ಜಗಳೂರು: ಪಟ್ಟಣದ ತರಳಬಾಳು ಕೇಂದ್ರದಲ್ಲಿ ಜು.12ರಂದು ಬೆಳಗ್ಗೆ 10ಕ್ಕೆ ಕಾಂಗ್ರೆಸ್ ಪಕ್ಷದ ಸಂಘಟನೆ ಸಭೆ ಹಾಗೂ ನನ್ನ 57ನೇ ವರ್ಷದ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಎಚ್.ಪಿ ರಾಜೇಶ್ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಟ್ಟು ಹಬ್ಬದ ಅಂಗವಾಗಿ ಅಂದು ಅಭಿಮಾನಿಗಳು, ಕಾರ್ಯಕರ್ತರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್, ಹಣ್ಣು ವಿತರಣೆ ಮಾಡಲಿದ್ದಾರೆ. ಹೋ.ಚಿ ಬೋರಯ್ಯ ಕಾಲೇಜಿನಲ್ಲಿ ವನಮಹೋತ್ಸವ ಹಾಗೂ ತರಳಬಾಳು ಕೇಂದ್ರದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮಾಜಿ ಸಚಿವರಾದ ಎಸ್.ಎಸ್‍ಮಲ್ಲಿಕಾರ್ಜುನ, ಎಚ್. ಆಂಜನೇಯ, ಸತೀಶ್ ಜಾರಕಿಹೊಳೆ, ಪರಮೇಶ್ವರನಾಯ್ಕ, ಶಾಸಕ ರಘುಮೂರ್ತಿ, ಮಾಜಿ ಶಾಸಕ ಶಾಂತನಗೌಡ, ಶಿವಮೂರ್ತಿ, ಗೋವಿಂದಪ್ಪ, ಮಾಜಿ ಎಂಪಿ ಚಂದ್ರಪ್ಪ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ ಎಂದರು. ನನ್ನ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಎಲ್ಲಾ ಕಾರ್ಯಕರ್ತರು, ಮುಖಂಡರು, ಮತದಾರರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಣೆ:
ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರ ಹುಟ್ಟು ಆಚರಣೆ ಅದ್ಧೂರಿಯಾಗಿ ಆಚರಿಸಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದಾರೆ. ಈಗಾಲೇ ಪಟ್ಟಣದ ತುಂಬೆಲ್ಲಾ ಕಾಂಗ್ರೆಸ್ ಮುಖಂಡರ ಫ್ಲಕ್ಸ್, ಬ್ಯಾನರ್‍ಗಳು ಕಟ್ಟಲಾಗಿದೆ. ಅಷ್ಟೇ ಅಲ್ಲದೇ ಗ್ರಾಮೀಣ ಭಾಗಗಳಲ್ಲೂ ಕಾಂಗ್ರೆಸ್ ಮುಖಂಡರ ಫ್ಲಕ್ಸ್‍ಗಳನ್ನು ಹಾಕಲಾಗಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕ್ಷೇತ್ರ ಉಸ್ತುವಾರಿ ಕಲ್ಲೇಶ್‍ರಾಜ್ ಪಟೇಲ್ ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ ಪಾಲಯ್ಯ, ಮಾಜಿ ತಾ.ಪಂ ಸದಸ್ಯ ಕುಬೇಂದ್ರಪ್ಪ, ಎಸ್ಟಿ ಘಟಕದ ತಾಲೂಕಾಧ್ಯಕ್ಷ ಬಿ.ಲೋಕೇಶ್, ದೇವರಾಜ್, ರೇವಣ್ಣ, ವೆಂಕಟೇಶ್, ತಾನಾಜಿ ಗೋಸಾಯಿ ಸೇರಿದಂತೆ ಮತ್ತಿತರಿದ್ದರು.