ಮಹಲಿಂಗರಂಗ ಸಮಾಧಿ ಪ್ರವಾಸಿ ತಾಣವಾಗಿ ಅಭಿವೃದ್ಧಿ: ಶಾಸಕ ಬಿ.ದೇವೇಂದ್ರಪ್ಪ ಭರವಸೆ

Suddivijaya
Suddivijaya August 6, 2024
Updated 2024/08/06 at 12:00 PM

suddivijayanews6/08/2024

ಸುದ್ದಿವಿಜಯ, ಜಗಳೂರು: ತಾಲೂಕಿನ ಐತಿಹಾಸಕ ಕೊಣಚಗಲ್ ಶ್ರೀ ರಂಗನಾಥ ಸ್ವಾಮಿ ಕ್ಷೇತ್ರದ ತಪ್ಪಲಿನಲ್ಲಿರುವ 17ನೇ ಶತಮಾನದ ಅನುಭಾವ ಕವಿ ಮಹಲಿಂಗರಂಗದ ಸಮಾಧಿ ಸೇರಿದಂತೆ ಕೊಣಚಗಲ್ ಬೆಟ್ಟವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸಲು ಬದ್ಧ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ತಾಲೂಕಿನ ಕೊಣಚಗಲ್ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ಹಿರಿಯ ಸಾಹಿತಿ ಎಸ್.ಮಲ್ಲಿಕಾರ್ಜುನಪ್ಪ ಬರೆದಿರುವ ಅನುಭಾವಾಮೃತಕ ಕೃತಿಯ ಅಮರ ಕನ್ನಡ ಕವಿ! ಮಹಲಿಂಗರಂಗ! ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ರವಿ ಕಾಣದ್ದನ್ನು ಕವಿ ಕಂಡಂತೆ ಮಲ್ಲಿಕಾರ್ಜುನಪ್ಪನವರು ನಾವು ಕಾಣದ 17 ಶತಮಾನದ ಅನುಭಾವ ಕವಿ ಮಹಲಿಂಗರಂಗರ ಕನ್ನಡ ಭಾಷೆಗೆ ಕೊಟ್ಟ ಕೊಡುಗೆಯನ್ನು ತಿಳಿಸಿದ್ದಾರೆ.

 ಜಗಳೂರು ತಾಲೂಕಿನ ಕೊಣಚಗಲ್ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಹಿರಿಯ ಸಾಹಿತಿ ಎಸ್.ಮಲ್ಲಿಕಾರ್ಜುನಪ್ಪ ಬರೆದಿರುವ ಅನುಭಾವಾಮೃತಕ ಕೃತಿಯ ಅಮರ ಕನ್ನಡ ಕವಿ! ಮಹಲಿಂಗರಂಗ! ಕೃತಿ ಲೋಕಾರ್ಪಣೆಗೊಳಿಸಲಾಯಿತು.
 ಜಗಳೂರು ತಾಲೂಕಿನ ಕೊಣಚಗಲ್ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಹಿರಿಯ ಸಾಹಿತಿ ಎಸ್.ಮಲ್ಲಿಕಾರ್ಜುನಪ್ಪ ಬರೆದಿರುವ ಅನುಭಾವಾಮೃತಕ ಕೃತಿಯ ಅಮರ ಕನ್ನಡ ಕವಿ! ಮಹಲಿಂಗರಂಗ! ಕೃತಿ ಲೋಕಾರ್ಪಣೆಗೊಳಿಸಲಾಯಿತು.

ಅವರ ಸಮಾಧಿ ಅನ್ವೇಷಣೆ ಮಾಡಿ 5 ಕೃತಿಗಳನ್ನು ಸಂಶೋಧನಾತ್ಮಕವಾಗಿ ಹೊರತಂದಿದ್ದಾರೆ. ಸಮಾಧಿ ಸ್ಥಳ ಅಭಿವೃದ್ಧಿಯಾಗಬೇಕಾದರೆ ಒಂದು ಸಮಿತಿ ರಚನೆಯಾಗಬೇಕು.

ಇಲ್ಲಿ ಏನು ಬೇಕು ಎಂಬದನ್ನು ಪಟ್ಟಿ ಮಾಡಿ ಸುದೀರ್ಘ ಚರ್ಚೆ ಮಾಡಿ ವರದಿ ಕೊಟ್ಟರೆ ಅದನ್ನು ಅಭಿವೃದ್ಧಿ ಮಾಡಲು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.

ಪುಸ್ತಕರ ಕುರಿತು ವಿಶ್ರಾಂತ ಪ್ರಾಚಾರ್ಯ ಡಾ.ಎಲ್.ಎಂ.ಪ್ರಭಾಕರ್ ಲಕ್ಕೊಳ್ ಮಾತನಾಡಿ, ಹಿರಿಯ ಸಾಹಿತಿ ಎಸ್.ಮಲ್ಲಿಕಾರ್ಜುನಪ್ಪ ಹೊರತಂದಿರುವ ಕೃತಿ ನಿಜಕ್ಕೂ ವಾಸ್ತವ ಅಂಶವನ್ನು ಪ್ರತಿಪಾದಿಸುತ್ತದೆ.

ಮಹಲಿಂಗರರಂಗ ಕನ್ನಡದ ಶ್ರೇಷ್ಠ ಕವಿ. ಮಹಲಿಂಗರ ರಂಗರದ ಇತಿಹಾಸ ತಿರುಚುವವರಿಗೆ ಈ ಪುಸ್ತಕ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮಹಲಿಂಗರಂಗರ ಸಮಾಧಿ ವಿವಾದ ಮತ್ತು ಜನ್ಮಸ್ಥಳದ ಕುರಿತು ಇರುವ ಗೊಂದಲ, ಶೈವ ಸಂಸ್ಕೃತಿ ಮತ್ತು ಕನ್ನಡದಲ್ಲಿ ಮಹಲಿಂಗರಂಗರ ಬರೆದ ಪದ್ಯಗಳ ಕುರಿತು ದಾಖಲೆ ಸಹಿತಿ ಉತ್ತರಿಸಿದ್ದಾರೆ ಎಂದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಈ ನೆಲದ ಸಂಸ್ಕೃತಿಯ ಮಹಲಿಂಗರಂಗರು ಐಕ್ಯವಾಗಿರುವ ಈ ಜಾಗ ನಿಜಕ್ಕೂ ಪಾವನ. ವಿದ್ಯಾರ್ಥಿಗಳು ಈ ಸೊಬಗನ್ನು ಸವಿಯಬೇಕು. ಬದುಕಿಗೆ ಸಾಹಿತ್ಯ ಸ್ಪೂರ್ತಿ ನೀಡುತ್ತದೆ ಎಂದರು.

ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ್ ಕುರ್ಕಿ, ನಾನು ಕಸಾಪ ಅಧ್ಯಕ್ಷನಾಗಿದ್ದಾಗಲೇ ಮಹಲಿಂಗರಂಗ ಪ್ರಶಸ್ತಿಗೆ 5 ಜನರನ್ನು ಆಯ್ಕೆ ಮಾಡಿದೆ. ಕ್ಷೇತ್ರದ ಅಭಿವೃದ್ಧಿಯಾಗಬೇಕು ಎಂದರೆ ಕನ್ನಡದ ಮನಸ್ಸುಗಳು ಒಂದಾಗಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಿಡಿ ರವಿಚಂದ್ರ ಮಾತನಾಡಿ, ಮಹಲಿಂಗರಂಗರ ಸಮಾಧಿ ಸ್ಥಳ ಅಭಿವೃದ್ಧಿ ಪಡಿಸಲು ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಇಲಾಖೆಯಿಂದ ಅವಕಾಶವಿದೆ.

ಸಾಹಿತ್ಯಾಸಕ್ತರೆಲ್ಲರೂ ಚರ್ಚಿಸಿ ಇಲ್ಲೋಂದು ಭವನ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಿದರೆ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.

ಕೃತಿಯ ಲೇಖಕ, ಹಿರಿಯ ಸಾಹಿತಿ ಎಸ್.ಮಲ್ಲಿಕಾರ್ಜುನಪ್ಪ ಮಾತನಾಡಿ, ನಾಗರೀಕತೆ ಬೆಳೆದಂತೆ ಸಂಸ್ಕøತಿ ಸಂಸ್ಕಾರ ನಾಶವಾಗುತ್ತದೆ. ನಮ್ಮ ಈ ನೆಲದ ಕನ್ನಡದ ಅನುಭವಾವ ಕವಿ ಮಹಲಿಂಗರಂಗರು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನನ್ಯವಾದುದು.

ಮಹಲಿಂಗರಂಗರ ಜನ್ಮಸ್ಥಳ ವಿವಾದ ಮತ್ತು ಸಮಾಧಿ ಸ್ಥಳ ವಿವಾದ ಬಗೆಹರಿಸುವ ಪ್ರಯತ್ನವನ್ನು ಈ ಕೃತಿಯ ಮೂಲಕ ಮಾಡಿದ್ದೇನೆ ಎಂದರು.

ಹಿರಿಯ ಸಾಹಿತಿ ಎನ್.ಟಿ.ಎರ್ರಿಸ್ವಾಮಿ, ಎಚ್.ಎಲ್.ಹಾಲೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಗುತ್ತಿದುರ್ಗ ಗ್ರಾಪಂ ಅಧ್ಯಕ್ಷರಾದ ಮಾನಸ ಲಿಂಗರಾಜ್,

ಕಾಂಗ್ರೆಸ್ ಮುಖಂಡ ಬಿ.ಮಹೇಶ್ವರಪ್ಪ,  ಚುಟುಕು ಸಾಹಿತಿ ಡಾ.ರಾಜಪ್ಪ ನಿಬಗೂರು, ಮಹಲಿಂಗರಂಗ ವೇದಿಕೆ ಹಜರತ್ ಅಲಿ, ಎಸ್.ಎಂ.ಸೋಮನಗೌಡ, ಹಿರಿಯ ಸಾಹಿತಿ ಡಿ.ಸಿ.ಮಲ್ಲಿಕಾರ್ಜುನ್ , ಮರೇನಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ನಜೀರ್ ಅಹಮದ್ಸೇರಿದಂತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!