suddivijayanews23/08/2024
ಸುದ್ದಿವಿಜಯ, ಜಗಳೂರು: ರಂಗಯ್ಯನ ದುರ್ಗ ವನ್ಯಜೀವಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ತಾಲೂಕಿನ ಕಿಲಾ ಕಣ್ವಕುಪ್ಪೆ ಗ್ರಾಮದಲ್ಲಿ ಕರಡಿ ದಾಳಿಯಿಂದ ಬೆಳೆ ಬೆಳೆದ ರೈತರು ನಲುಗಿ ಹೋಗಿದ್ದಾರೆ.
ಗ್ರಾಮದ ದುರುಗಮ್ಮ ಎಂಬ ರೈತ ಮಹಿಳೆಯ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೊಳದ ಫಸಲಿಗೆ ಕರಡಿಗಳು ರಾತ್ರೋ ರಾತ್ರಿ ನುಗ್ಗಿ ತಿಂದು ನಾಶಮಾಡಿವೆ.
ವಿಪರೀತ ಮಳೆಯಿಂದ ಒಂದೆಡೆ ಬೆಳೆ ಹಾನಿಯಾಗಿದ್ದರೆ ಮತ್ತೊಂದೆಡೆ ಕಾಡುಪ್ರಾಣಿಗಳಾದ ಕರಡಿ ಮತ್ತು ಹಂದಿಗಳ ಹಾವಳಿಯಿಂದ ಮೆಕ್ಕೆಜೋಳ ಬೆಳೆದ ರೈತರು ನಷ್ಟ ಅನುಭವಿಸುವಂತಾಗಿದೆ.
ವಿಸ್ತಾರವಾದ ರಂಗಯ್ಯನದುರ್ಗ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹಂದಿ, ಕರಡಿಗಳು ಹೆಚ್ಚಾಗಿದ್ದು ಗ್ರಾಮಗಳಿಗೂ ನುಗ್ಗುತ್ತಿವೆ. ಗ್ರಾಮದ ಅನೇಕ ರೈತರ ಹೊಲಗಳಲ್ಲಿ ಬೆಳೆದಿರುವ ಮೆಕ್ಕೆಜೋಳ,
ಶೇಂಗ ಸೇರಿದಂತೆ ಅನೇಕ ಬೆಳೆಗಳನ್ನು ನಾಶಮಾಡುತ್ತಿದ್ದು ನಿಯಂತ್ರಣಕ್ಕೆ ಸೋಲಾರ್ ಫೆನ್ಸಿಂಗ್ ಅಳವಡಿಸಬೇಕು ಮತ್ತು ಜೆಸಿಬಿಯಲ್ಲಿ ಬೃಹತ್ ಟ್ರಂಚಿಂಗ್ ತೋಡಿಸಬೇಕು ಹಾಗೂ ಕರಡಿಗಳ ದಾಳಿಯಿಂದ ನಷ್ಟವಾಗಿರುವ ಬೆಳೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ನಷ್ಟ ಭರಿಸಬೇಕು ಎಂದು ಮಹಿಳೆ ದರುಗಮ್ಮ ಆಗ್ರಹಿಸಿದ್ದಾರೆ.