suddivijayannews2/8/2024
ಸುದ್ದಿವಿಜಯ, ಜಗಳೂರು: ಹಿರಿಯ ಸಾಹಿತಿ ಎಸ್.ಮಲ್ಲಿಕಾರ್ಜುನಪ್ಪ ಬರೆದಿರುವ ‘ಅನುಭಾವಾಮೃತ ಕೃತಿಯ ಅಮರ ಕನ್ನಡ ಕವಿ! ಮಹಲಿಂಗರಂಗ!’ ಪುಸ್ತಕ (Book release-program) ಲೋಕಾರ್ಪಣೆ ಕಾರ್ಯಕ್ರಮ ಆ.6 ರಂದು ಮಂಗಳವಾರ ಬೆಳಿಗ್ಗೆ 11.30ಕ್ಕೆ ಕೊಣಚಗಲ್ ರಂಗಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.
ಮಹಲಿಂಗರಂಗ ವೇದಿಕೆಯ ಹಜರತ್ ಅಲಿ ಮಾತನಾಡಿ, 17ನೇ ಶತಮಾನದಲ್ಲಿ ಕನ್ನಡದ ಹಿರಿಮೆಯನ್ನು ಸಾರಿದವರು ದಾರ್ಶನಿಕ ಮಹಾನ್ ಕವಿ ಅನುಭವಾಮೃತ ಕೃರ್ತೃ ಮಹಲಿಂಗರ ರಂಗರ ಕುರಿತು ಸಾಕಷ್ಟು ಸಂಶೋಧನೆಗಳು ನಡೆದಿವೆ.ಅದ್ವೈತ ಸಿದ್ಧಾಂತವನ್ನು ‘ಅನುಭವಾಮೃತ’ವಾಗಿ ಕನ್ನಡಿಗರಿಗೆ ಉಣಬಡಿಸಿದವರು ಮಹಲಿಂಗರಂಗರು. ಆದರೆ ಅವರ ಸಮಾಧಿ ಕೊಣಚಗಲ್ ರಂಗಸ್ವಾಮಿ ಬೆಟ್ಟದ ತಪ್ಪಲಿನಲ್ಲಿದ್ದು ಅದು ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಅಷ್ಟೇ ಅಲ್ಲ ಅವರ ಸಮಾಧಿ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ದಾವಣಗೆರೆಯ ಹಿರಿಯ ಸಾಹಿತಿ ಎಸ್.ಮಲ್ಲಿಕಾರ್ಜುನಪ್ಪ ಸಂಶೋಧನಾ ಕೃತಿಯಾಗಿ ‘ಅನುಭಾವಾಮೃತ ಕೃತಿಯ ಅಮರ ಕನ್ನಡ ಕವಿ! ಮಹಲಿಂಗರಂಗ! ಕೃತಿಯಲ್ಲಿ ದಾಖಲೆಗಳ ಸಹಿತ ಉಲ್ಲೇಖಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಶಾಸಕ ಬಿ.ದೇವೇಂದ್ರಪ್ಪ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಎನ್.ಟಿ.ಎರ್ರಿಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುಸ್ತಕದ ಕುರಿತು ವಿಶ್ರಾಂತ ಪ್ರಾಚಾರ್ಯ ಡಾ.ಎಲ್.ಎಂ. ಪ್ರಭಾಕರ್ ಲಕ್ಕೋಳ್ ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಚ್.ಪಿ.ರಾಜೇಶ್, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಡಿಡಿ ರವಿಚಂದ್ರ, ನಿಕಟಪೂರ್ವ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ್ ಕುರ್ಕಿ,
ಶಿಕಾರಿಪುರ ಮೂಲದವರಾದ ಹಿರಿಯ ಸಾಹಿತಿ ಎಚ್.ಎಲ್.ಹಾಲೇಶ್, ಲೇಖಕ ಎಸ್.ಮಲ್ಲಿಕಾರ್ಜುನಪ್ಪ ಮತ್ತು ಮಾಜಿ ಯೋಧ ಆರ್. ಸತೀಶ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.