ಸುದ್ದಿವಿಜಯ, ಜಗಳೂರು: ಚುನಾವಣಾ ಪ್ರಚಾರದ ವೇಳೆ ನನ್ನನ್ನು ರೌಡಿ ಎಂದು ಬಿಂಬಿಸಿದರು. ನಾನೊಬ್ಬ ಸಾತ್ವಿಕ ವ್ಯಕ್ತಿತ್ವ ಉಳ್ಳವನು. ಶರಣ ಸಂಸ್ಕøತಿಯಲ್ಲಿ ನಂಬಿಕೆಯಿಟ್ಟವನು ಆದರೆ ನನ್ನಂತವನನ್ನು ರೌಡಿ ಎಂದು ಅಪಪ್ರಚಾರ ಮಾಡಿದವರನ್ನು ಎಂದಿಗೂ ಸಹಿಸುವುದಿಲ್ಲ ಎಂದು ಶಾಸಕ ದೇವೇಂದ್ರಪ್ಪ ಹೇಳಿದರು.
ಅರಸಿಕೆರೆ ಗ್ರಾಮದ ಕೋಲಶಾಂತೇಶ್ವರ ಮಠದ ಆವರಣದಲ್ಲಿ ಚುನಾವಣೆಗೆ ಗೆದ್ದ ಹಿನ್ನೆಲೆ ಕಾರ್ಯಕರ್ತರಿಗೆ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ನನನ್ನು ರೌಡಿ ಎಂದು ಬಿಂಬಿಸಿದರು. ಅವರು ನನ್ನ ಒಂದು ಮುಖ ನೋಡಿದ್ದಾರೆ.
ಇನ್ನೊಂದು ಮುಖ ನೀವು ನೋಡಿಲ್ಲ. ಒಳ್ಳೆಯವರಿಗೆ ಒಳ್ಳೆಯವನಾಗಿರುತ್ತೇನೆ ಆದರೆ ಪಕ್ಷ ದ್ರೋಹಿ ಚಟುವಟಿಕೆ ಮಾಡಿದ ವ್ಯಕ್ತಿಗಳನ್ನು ಕ್ಷಮಿಸುವುದಿಲ್ಲ ಎಂದು ಕುಟುಕಿದರು. ಅರಸಿಕೆರೆ ಭಾಗದಲ್ಲಿ ಕಲ್ಲು ಕ್ವಾರಿಗಳು ಜಾಸ್ತಿಯಾಗಿವೆ.
ಓವರ್ ಲೋಡ್ ಹಾಕಿ ರಸ್ತೆ ಹಾಳು ಮಾಡುತ್ತಿದ್ದಾರೆ ಎಂಬ ದೂರು ಬಂದಿವೆ. ಶೀಘ್ರವೇ ಚಕ್‍ಪೋಸ್ಟ್ ಮಾಡುತ್ತೇವೆ. ನನಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಬೆನ್ನಿಗಿದ್ದಾರೆ.
ಅಕ್ರಮಗಳನ್ನು ಸಹಿಸುವುದಿಲ್ಲ. ಅರಿಸಿಕೆರೆಯಲ್ಲಿ ಶಾಸಕರ ಜನ ಸಂಪರ್ಕ ಕಚೇರಿ ಆರಂಭಿಸಿ ಇಲ್ಲಿಯ ಜನತೆಗೆ ಕಷ್ಟಗಳಿಗೆ ಕೈಜೋಡಿಸುತ್ತೇನೆ. ಇಲ್ಲಿಯೇ ಕೆಡಿಪಿ ಸಭೆ ಮಾಡುವ ಮೂಲಕ ಜನರ ಬೇಡಿಕೆಗಳನ್ನು ಸ್ಥಳದಲ್ಲೇ ಬಗೆಹರಿಸುತ್ತೇವೆ ಎಂದರು.