suddivijayanews19/07/2024
ಸುದ್ದಿವಿಜಯ, ಜಗಳೂರು: ಸತತ ಜಿಟಿ ಜಿಟಿ ಮಳೆಯಿಂದಾಗಿ ಮನೆ ಇಕ್ಕೆಲಗಳಲ್ಲಿ ಸ್ವಚ್ಚತೆ ಮಾಡಿಕೊಳ್ಳಿವ ಮೂಲಕ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ತಾಲ್ಲೂಕು ಆರೋಗ್ಯಧಿಕಾರಿ ಡಾ. ವಿಶ್ವನಾಥ್ ಹೇಳಿದರು.
ಪಪಂ ಹಾಗೂ ಆರೋಗ್ಯ ಇಲಾಖೆ ಸಯೋಗದಲ್ಲಿ ಪಟ್ಟಣದ ವಿವಿಧ ವಾರ್ಡ್‍ಗಳಿಗೆ ಭೇಟಿ ನೀಡಿ ಡೇಂಗಿ ಮುಂಜಾಗ್ರತಾ ಹಾಗೂ ಲಾರ್ವ ಸಮೀಕ್ಷೆ ಜನ ಸಾಮಾನ್ಯರಿಗೆ ಜಾಗೃತಿ ಕುರಿತು ಮನೆ ಮನೆಗೆ ಭೇಟಿ ನೀಡಿ ಸ್ವಚ್ಚತಾ ಕುರಿತು ಪರಿಶೀಲಿಸಿ ಮಾತನಾಡಿದ ಅವರು,
ಮನೆ ಸುತ್ತ ಮುತ್ತ ಸ್ವಚ್ಚತೆ ಕಾಪಾಡಿಕೊಳ್ಳದಿದ್ದರೆ ವಿವಿಧ ಸಾಂಕ್ರಾಮಿಕ ರೋಗಗಳು ಬರುತ್ತವೆ. ಡೆಂಗಿಯಂತಹ ಮಾರಕ ರೋಗ ಬಾರದಂತೆ ತಡೆಯಲು ಜಾಗೃತಿ ಅಗತ್ಯವಾಗಿದೆ.
ನಮ್ಮ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಆರೋಗ್ಯ ಕಾಳಜಿ ಹಾಗೂ ಜಾಗೃತಿ ಮೂಡಿಸುತ್ತಿದ್ದಾರೆ.
ಮನೆ ಮುಂದೆ ಹಾಗೂ ಮೇಲ್ಚಾವಣೆ ಮನೆಯ ಪಕ್ಕದ ಚರಂಡಿಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾ ನಾಯ್ಕ್ ಮಾತನಾಡಿ, ವಾತಾವರಣ ವೈಪರಿತ್ಯದಿಂದ ಜಿಟಿ ಮಳೆಯಿಂದ ರಸ್ತೆಯ ತಗ್ಗು ಗುಂಡಿಗಳನ್ನು ಮುಚ್ಚಲಾಗುತ್ತದೆ.
ಚರಂಡಿಗಳಲ್ಲಿ ನೀರು ಸಂಗ್ರವಾಗದಂತೆ ಮತ್ತು ಪ್ಲಾಸ್ಟಿಕ್ ವಸ್ತುಗಳ ತೆಂಗಿನ ಚಿಪ್ಪುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಲಾರ್ವ ಗಳು ಬೆಳೆಯದಂತೆ ಎಚ್ಚರವಹಿಸಿ ನೀರಿನ ತೊಟ್ಟಿಗಳನ್ನ ಸ್ವಚ್ಚಗೊಳಿಸಿ ಮನೆ ಸುತ್ತ ಮುತ್ತ ಘನ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಲುಕ್ಮಾನ್ ಖಾನ್, ಸಮುದಾಯ ಆರೋಗ್ಯ ಕೇಂದ್ರ ಆರೋಗ್ಯ ನಿರೀಕ್ಷಕರು, ಶುಶ್ರೂಷಕರು ಆಶಾ ಕಾರ್ಯಕರ್ತೆ ಹಾಗೂ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರ ಸಂಘದ ಅಧ್ಯಕ್ಷರು ಇದ್ದರು.