ಜಗಳೂರು: ದಲಿತ ಯುವಕನ ಕೊಲೆ ಆರೋಪಿಗೆ ಗಲ್ಲಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ

Suddivijaya
Suddivijaya August 21, 2024
Updated 2024/08/21 at 9:47 AM

suddivijaya21/08/2024

ಸುದ್ದಿವಿಜಯ, ಜಗಳೂರು: ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಸಂಗನಾಳ ಗ್ರಾಮದಲ್ಲಿ ನಡೆದಿರುವ ದಲಿತ ಯುವಕನ ಹತ್ಯೆಯು ಇಡೀ ರಾಜ್ಯವೇ ಬೆಚ್ಚಿ ಬೀಳುವಂಥ ಘಟನೆಯಾಗಿದ್ದು, ಸಂಗನಾಳ ಗ್ರಾಮದ ಯಮನೂರಪ್ಪ ಈರಪ್ಪ ಬಂಡಿಹಾಳ(23) ಎಂಬ ದಲಿತ ಯುವಕ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಗೆ ಜಾರಿಯಾಗಬೇಕು ಎಂದು ದಸಂಸ ಸಂಘಟನೆಯಿಂದ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣದ) ವತಿಯಿಂದ ನಡೆದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ದಲಿತ ನಾಯಕರು ಪ್ರತಿಭಟನೆ ನಡೆಸಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ತಾಲೂಕು ಸಂಚಾಲಕ ಮಲೆಮಾಚಿಕೆರೆ ಬಿ.ಸತೀಶ್ ಮಾತನಾಡಿ, ದಲಿತ ಯುವಕನನ್ನು ಜಾತಿನಿಂದನೆ ಮಾಡಿ ಹತ್ಯೆಗೈದಿರುವ ಆರೋಪಿಯನ್ನು ಗಲ್ಲಿಗೇರಿಸಬೇಕು.

ಕೊಲೆಯಾದ ಯಮನೂರಪ್ಪ ಈರಪ್ಪ ಬಂಡಿಹಾಳ ಪರಿಶಿಷ್ಟ ಜಾತಿ ಮಾದಿಗ ಸಮುದಾಯಕ್ಕೆ ಸೇರಿದವನಾಗಿದ್ದು, ಆ.17ರಂದು ಅದೇ ಗ್ರಾಮದ ಮುದುಕಪ್ಪ ಅಂದಪ್ಪ ಹಡಪದ ಎಂಬುವನ ಕ್ಷೌರದ ಅಂಗಡಿಗೆ ಹೇರ್ ಕಟಿಂಗ್ ಮಾಡಿಸಲು ಹೋಗಿದ್ದ ಸಂದರ್ಭದಲ್ಲಿ ದಲಿತ ಯುವಕ ಯಮನೂರಪ್ಪನಿಗೆ ನೀನು ಕೆಳ ಜಾತಿಯವನು ನಿನ್ನ ಜಾತಿಯವರಿಗೆ ನಾವು ಕಟಿಂಗ್ ಮಾಡುವುದಿಲ್ಲ ಎಂದು ಹೇಳಿದ್ದಾನೆ.  ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ದಸಂಸ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗ್ರೇಡ್-2 ಮಂಜನಾಂದ ಅವರಿಗೆ ಮನವಿ ಸಲ್ಲಿಸಲಾಯಿತು.ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ದಸಂಸ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗ್ರೇಡ್-2 ಮಂಜನಾಂದ ಅವರಿಗೆ ಮನವಿ ಸಲ್ಲಿಸಲಾಯಿತು.

ಆಗ ದಲಿತ ಯುವಕ ಪ್ರಶ್ನಿಸಿದಕ್ಕೆ ಮಾತಿಗೆ ಮಾತು ಬೆಳೆದು ಕ್ಷೌರಿಕ ಮುದುಕಪ್ಪನು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಪದಗಳನ್ನು ಬಳಸಿದಲ್ಲದೆ ಕತ್ತರಿಯಿಂದ ಯಮನೂರಪ್ಪನಿಗೆ ಇರಿದು ಕೊಲೆ ಮಾಡಿದ್ದಾನೆ.

ಈ ಘಟನೆಯಿಂದ ಇಡೀ ದಲಿತ ಸಮುದಾಯವೇ ಆತಂಕಕ್ಕೆ ಒಳಗಾಗಿದ್ದು ಕಾನೂನು ಹಾಗೂ ಅಸ್ಪøಶ್ಯತೆ ಆಚರಣೆ ನಿಷೇಧ ಕಾಯ್ದೆ ಇದ್ದರೂ ಸಹ ಇಂತಹ ಮನುವಾದಿ ಮನಸ್ಥಿತಿಯ ವ್ಯಕ್ತಿಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡು ಸಮಾಜದಲ್ಲಿ ಕೋಮುವಾದವನ್ನು ಬಿತ್ತುತ್ತಿರುವ ಈ ಉಗ್ರ ಮನಸ್ಥಿತಿಯ ಮುದುಕಪ್ಪ ಅಂದ ಹಡಪದ ಇವನಿಗೆ ಗಲ್ಲು ಶಿಕ್ಷೆ ವಿಧಿಸಬೇಕು.

ಹಾಗೂ ಕೊಲೆಗೀಡಾಗಿರುವ ಯಮನೂರಪ್ಪ ಈರಪ್ಪ ಬಂಡಿಹಾಳ ಕುಟುಂಬದವರಿಗೆ ಸರಕಾರಿ ನೌಕರಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡ ಗ್ಯಾಸ್ ಓಬಣ್ಣ, ಗೌರಿಪುರ ಕುಬೇರಪ್ಪ, ನಗರ ಘಟಕ ಅಧ್ಯಕ್ಷ ಕರಿಬಸಪ್ಪ, ಸಂಘಟನಾ ಸಂಚಾಲಕರಾದ ತಿಪ್ಪಣ್ಣ ಸಾಗಲಗಟ್ಟೆ,

ಕ್ಯಾಸನಹಳ್ಳಿ ಹನುಮಂತಪ್ಪ, ಉಮೇಶ್ ಹೆಚ್.ಎಂ.ಹೊಳೆ, ಮಾಧ್ಯಮ ಸಲಹೆಗಾರ ಜಗಜೀವನ್ ರಾಮ್ ಆರ್.ಎಲ್, ತಿಪ್ಪೇಸ್ವಾಮಿ, ಸಣ್ಣನಾಗಪ್ಪ, ಹಳವದಂಡಿ ಕೋಟಿ, ಮಡ್ರಳ್ಳಿ ಮಂಜಪ್ಪ, ಪರಶುರಾಮ, ತಿಪ್ಪೇಸ್ವಾಮಿ ಸಿದ್ದಿಹಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!