ಸುದ್ದಿವಿಜಯ, ಜಗಳೂರು: ಪಟ್ಟಣದ ಬಯಲು ರಂಗಮಂದಿರದ ಆವಣರಣದಲ್ಲಿ ಡಿ.26ರ ಮಂಗಳವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಗಿರಿಜನ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಉತ್ಸವ ಸಂಪೂರ್ಣ ಎಸ್ಟಿ ಜನಾಂಗದವರಿಗೆ ಸಂಬಂಧಿಸಿದ್ದಾಗಿದೆ.
ಹಾಗಾಗಿ ವಿವಿಧ ಜಿಲ್ಲೆಗಳಿಂದ ಡೊಳ್ಳುಕುಣಿತ, ಬೇಡರ ಪಡೆ, ವೀರಗಾಸೆ, ವಾದ್ಯ ಸಂಗೀತ, ಗಾರಡಿಗೊಂಬೆ, ಕೋಲು ಕುಣಿತ, ಸುಗಮ ಸಂಗೀತ, ಕಲಾತಂಡಗಳು ಭಾಗವಹಿಸಲಿವೆ.
ನಶಿಸಿ ಹೋಗುವ ಕಾಲಘಟ್ಟದಲ್ಲಿ ಕಲೆಗಳನ್ನು ಇನ್ನು ಜೀವಂತವಾಗಿ ಉಳಿಸಿರುವುದು ಕನ್ನಡ ಸಂಸ್ಕøತಿ ಇಲಾಖೆಯಾಗಿದೆ. ಈ ಇಲಾಖೆಗೆ ಸರಕಾರದಿಂದ ಸಾಕಷ್ಟು ಅನುದಾನವನ್ನು ನೀಡಲಾಗುತ್ತಿದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಕಲಾವಿದರಿಂದ ಕಲೆಯನ್ನು ಪ್ರದರ್ಶಿಸುವ ಉತ್ತಮವಾದ ಕೆಲಸ ಮಾಡುತ್ತಿದೆ ಎಂದರು.ಅಂದು ರಾತ್ರಿ ಮದಕರಿ ನಾಯಕನ ನಾಟಕ ಪ್ರದರ್ಶನ ಕೂಡ ನಡೆಯಲಿದೆ. ತಾಲೂಕಿನ ಪ್ರತಿ ಹಳ್ಳಿಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಹಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಜಾನಪದ ಕಲಾ ಪ್ರಕಾರಗಳ ಉಳಿವು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಶಾಸಕರನ್ನು ಅಧ್ಯಕ್ಷತೆ ವಹಿಸುವಂತೆ ಕೋರಿಕೊಂಡಿದ್ದೇವೆ.
ಉತ್ಸವಕ್ಕೆ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಚಾಲನೆ ನೀಡಲಿದ್ದಾರೆ. ತಾಪಂ ಇಒ ಕೆ.ಟಿ.ಕರಿಬಸಪ್ಪ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಕಸಾಪ ತಾಲೂಕು ಅಧ್ಯಕ್ಷೆ ಸುಜಾತಮ್ಮ ರಾಜು, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎನ್.ಟಿ.ಎರ್ರಿಸ್ವಾಮಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.
ಈ ವೇಳೆ ಸಾಹಿತಿ ಎನ್.ಟಿ ಎರ್ರಿಸ್ವಾಮಿ, ಬಿಇಒ ಹಾಲುಮೂರ್ತಿ, ಕಾಂಗ್ರೆಸ್ ಮುಖಂಡ ಬಿ. ಮಹೇಶ್ವರ್, ದೈಹಿಕ ನಿರ್ದೇಶಕ ಸುರೇಶ್‍ರೆಡ್ಡಿ, ಪ.ಪಂ ಸದಸ್ಯ ಸಣ್ಣ ತಾನಾಜಿ ಗೋಸಾಯಿ, ಮುಖಂಡರಾದ ಕಾನನಕಟ್ಟೆ ಪ್ರಭು, ಮಾಳಮ್ಮನಹಳ್ಳಿ ವೆಂಕಟೇಶ್, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಸಂಘದ ಅಧ್ಯಕ್ಷ ಮಾರುತಿ,ಜಯ್ಯಣ್ಣ, ಬಡಪ್ಪ ಸೇರಿದಂತೆ ಮತ್ತಿತರರಿದ್ದರು.