ಅರಿಯೋಣ ಪ್ರೊ.ಜೆ.ಎ.ಸೀತಾರಾಂ ಅಂತಃಶಕ್ತಿ

Suddivijaya
Suddivijaya July 24, 2024
Updated 2024/07/24 at 10:31 AM

suddivijayanews24/07/2024

ಸುದ್ದಿವಿಜಯ, ಜಗಳೂರು:1990ರ ದಶಕದಿಂದ ಆರಂಭವಾದ ಬಯಲು ಸೀಮೆಯ ಜ್ಞಾನಗಂಗೋತ್ರಿ ಎಂದರೆ ಜಗಳೂರು ಪಟ್ಟಣದ ಹೋ.ಚಿ.ಬೋರಯ್ಯ ಪ್ರಥಮ ದರ್ಜೆ ಮಹಾವಿದ್ಯಾಲಯ. ಪದವಿ ಓದಬೇಕಾದ ವಿದ್ಯಾರ್ಥಿಗಳು ಚಿತ್ರದುರ್ಗ ಇಲ್ಲವೇ ದಾವಣಗೆರೆ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಿತ್ತು.

ಜಗಳೂರು ಪಟ್ಟಣದಲ್ಲಿ ಆರಂಭವಾದ ಹೋ.ಚಿ.ಬೋರಯ್ಯ ಕಾಲೇಜು ಬಡ ವಿದ್ಯಾರ್ಥಿಗಳ ಪಾನಿನ ಯೂನಿವರ್ಸಿಸಿ ಎಂದರೆ ತಪ್ಪಾಗಲಿಕ್ಕಿಲ್ಲ.

ಪ್ರಸ್ತುತ ಈ ಕಾಲೇಜಿನಲ್ಲಿ ಓದಿದ ಅದೆಷ್ಟೊ ವಿದ್ಯಾರ್ಥಿಗಳು ಸರಕಾರಿ ನೌಕರಿ, ಬ್ಯಾಂಕ್ ಉದ್ಯೋಗಿಗಳು, ಐಎಎಸ್, ಐಪಿಎಸ್, ಪತ್ರಕರ್ತರು ಹೀಗೆ ಸಾಕಷ್ಟು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ.

ಹೋಚಿ ಬೋರಯ್ಯ ಕಾಲೇಜಿನ ಅಂತಃಶಕ್ತಿಗಳಲ್ಲಿ ಪ್ರೊ.ಜೆ.ಎ.ಸೀತಾರಾಂ ಸಹ ಒಬ್ಬರು. ಇಂಗ್ಲಿಷ್ ಉಪನ್ಯಾಸಕರಾಗಿದ್ದ ಅವರು ಕಾಲೇಜಿಗೆ ಸೇರಿದ್ದು 1997ರಲ್ಲಿ.

ಪ್ರತಿಯೊಬ್ಬರ ವಿದ್ಯಾರ್ಥಿಯ ಆತ್ಮೀಯ ಗುರುಗಳು ಹೌದು. ಮತ್ತೊಂದೆಡೆ ಎಲ್ಲರೊಂದಿಗೆ ಸ್ನೇಹ ಸೌಜನ್ಯದಿಂದ ಬೆರೆಯುತ್ತಿದ್ದ ಸ್ನೇಹ ಜೀವಿಯೂ ಹೌದು. ಅವರಿದ್ದರೆ ಕಾಲೇಜ್ ಕ್ಯಾಂಪಸ್ ನಲ್ಲಿ ಏನೋ ಒಂಥರಾ ಕಳೆ ಬರುತ್ತಿತ್ತು.

ನಗುಮೊಗದ ಪ್ರೊಫೇಸರ್ ಎಂದೇ ಖ್ಯಾತಿಯಾಗಿದ್ದರು. ನಗರ ಮತ್ತು ಗ್ರಾಮೀಣ ಪತ್ರಿಭೆಗಳಿಗೆ ಇಂಗ್ಲಿಷ್ ಕಲಿಸುವ ಮಾರ್ಗದರ್ಶಕ, ವಿದ್ಯಾರ್ಥಿ ಸ್ನೇಹಿ ಅವರಾಗಿದ್ದರು.

ಹಳೆ ವಿದ್ಯಾರ್ಥಿಗಳಾದ ಧನ್ಯಕುಮಾರ್ ಹೇಳುವ ಪ್ರಕಾರ, ನಮ್ಮಂತಹ ಬಡ ಗ್ರಾಮೀಣ ವಿದ್ಯಾರ್ಥಿಗಳು ಪದವಿ ಹಂತಕ್ಕೆ ಬರುವುದೇ ದೊಡ್ಡ ಸಾಹಸದ ಕೆಲಸ ಎಸ್‌ಎಸ್‌ಎಲ್‌ಸಿ ಪಿಯುಸಿ ಯಲ್ಲಿ ಹೇಗೋ ಇಂಗ್ಲಿಷ್ ವಿಷಯದಲ್ಲಿ 35-40ಅಂಕ ತೆಗೆದುಕೊಂಡು ಪಾಸಾಗಿದ್ದೇ ಹೆಚ್ಚು.

ಆದರೆ ಪದವಿಯಲ್ಲಿ 70-80 ಅಂಕಗಳು ಇಂಗ್ಲಿಷ್ ವಿಷಯದಲ್ಲಿ ತೆಗಿತೀವಿ ಅಂತ ಕನಸ್ಸು ಮನಸ್ಸಲ್ಲೂ ಅಂದುಕೊಂಡಿರಲಿಲ್ಲ. ಇದಕ್ಕೆಲ್ಲಾ ಕಾರಣ ಪ್ರೊ.ಸೀತಾರಾಂ ಎಂದು ಸ್ಮರಿಸಿಕೊಳ್ಳುತ್ತಾರೆ.

ಕಠಿಣವಾದ ಇಂಗ್ಲೀಷ್ ಭಾಷೆಯನ್ನ ಸುಲಭವಾಗಿ ಅರ್ಥೈಸುವಂತೆ ಬೋದಿಸಿ ಅದೆಷ್ಟೋ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ ಅವರು ಪಾಠ ಬೋಧನೆ ಮಾಡುವ ರೀತಿ ಎಂಥವರಿಗೂ ಖುಷಿಯಾಗುತ್ತಿತ್ತು.

ಬೋರಾಗದಂತೆ ವಿದ್ಯಾರ್ಥಿಗಳನ್ನ ನಗಿಸುವುದು ಇಂಗ್ಲೀಷ್ ಭಾಷೆಯ ಉತ್ತಮ ಕಾದಂಬರಿ, ಕಥೆ, ಪ್ರಸ್ತುತ ಘಟನಾವಳಿ ಬಗ್ಗೆ ಆಗಾಗ ಮಾಹಿತಿ ತಿಳಿಸುತ್ತಿದ್ದವರಲ್ಲಿ ಇವರೇ ಮೊದಲಿಗರು.

ಅಂದಿನ ಸಾಮಾಜಿಕ ಜಾಲತಾಣ ಬಳಕೆ ಗೊತ್ತಿರಲಿಲ್ಲ ವಿದ್ಯಾರ್ಥಿಗಳಿಗೆ ಸೀತಾರಾಮ್ ಸರ್ ಇ-ಮೇಲ್, ಜಿ-ಮೇಲ್, ಪೇಸ್‌ಬುಕ್ ಬಗ್ಗೆ ಮಾಹಿತಿ ನೀಡುತ್ತಿದ್ದರು. ಕಮ್ಯೂನಿಕೇಷನ್ ಎಂದರೇನು ಎಂದು ಗೊತ್ತಿಲ್ಲದ ವಿದ್ಯಾರ್ಥಿಗೆ ಅವರು ಸರಳೀಕರಿಸುವ ಬಗೆ ನಿಜಕ್ಕೂ ಅದ್ಭುತ.

ಕಾಲೇಜಿನಲ್ಲಿ ಎನ್‌ಎಸ್‌ಎಸ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಗಾರ, ಸಮಾವೇಶ, ಕ್ರೀಡೆ ಹೀಗೆ ಯಾವುದೇ ಕಾರ್ಯಕ್ರಮ ನಡೆದರೂ ಇವರದೇ ನೇತೃತ್ವ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳಿಸುವ ಧೀಶಕ್ತಿ ಅವರಲ್ಲಿತ್ತು.

ಅವರಿಂದ ಶಿಕ್ಷಣ ಪಡೆದ ಅದೆಷ್ಟೋ ವಿದ್ಯಾರ್ಥಿಗಳಿಗೆ ಪ್ರೊ.ಸೀತಾರಾಂ ಇನ್ನಿಲ್ಲ ಎಂಬ ನೋವು ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರನ್ನು ಪ್ರಾರ್ಥಿಸೋಣ.

Share this Article
Leave a comment

Leave a Reply

Your email address will not be published. Required fields are marked *

error: Content is protected !!