ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರ ಗುರುತು ತೆಂಗಿನ ತೋಟವಾಗಿದೆ.
ಸ್ವಾಭಿಮಾನ ಪಣಕ್ಕಿಟ್ಟು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅವರಿಗೆ ಕಲ್ಪವೃಕ್ಷದ (ತೆಂಗಿನ) ಮರಗಳನ್ನು ಗುರುತಾಗಿ ನೀಡಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಶತಾಯ ಗತಾಯ ಗೆದ್ದೇ ಗೆಲ್ಲುತ್ತೇನೆ ಎಂದು ಪ್ರಮುಖ ರಾಜಕೀಯ ಪಕ್ಷಗಳಿಗೆ ಎದುರಾಳಿಯಾಗಿ ಸ್ಪರ್ಧಿಸಿರುವ
ಎಚ್.ಪಿ.ರಾಜೇಶ್ ಅವರು ಕಳೆದ ಭಾನುವಾರ ಬಸವಜಯಂತಿಯಂದು ಐತಿಹಾಸಿಕ ಕಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.
ಈಗಾಗಲೇ ಅನೇಕ ಬೆಂಬಲಿಗರೊಂದಿಗೆ ಮತ ಕೇಳಲು ತೆರಳುತ್ತಿದ್ದಾರೆ. ಸೋಮವಾರ ಚುನಾವಣಾ ಅಧಿಸೂಚನೆಯ ಪ್ರಕಾರ ನಾಮಪತ್ರ ವಾಪಾಸ್ ಪಡೆಯಲು ಕಡೆಯದಿನವಾಗಿತ್ತು. ಆದರೆ ಅವರು ವಾಪಸ್ ಪಡೆಯದೇ ಪಕ್ಷೇತರ ಅಭ್ಯರ್ಥಿಯಾಗಿ ತೆಂಗಿನ ತೋಟದ ಗುರುತನ್ನು ಆಯ್ಕೆ ಮಾಡಿಕೊಂಡು ಸ್ಪರ್ಧೆಗೆ ರೆಡಿಯಾಗಿದ್ದಾರೆ.