suddivijayanews27/06/2024
ಸುದ್ದಿವಿಜಯ, ಜಗಳೂರು: ವಿಜಯನಗರ ಸಾಮ್ರಾಜ್ಯದ ಆಡಳಿತದಿಂದ ಪ್ರಭಾವಿತರಾಗಿದ್ದ ಶ್ರೀ ನಾಡಪ್ರಭು ಕೆಂಪೇಗೌಡರ ಆಡಳಿತವು ಇಂದಿಗೂ ಮಾದರಿಯಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಗುರುಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರವರ 515 ನೇ ಜಯಂತ್ಯೋತ್ಸವ ಕಾರ್ಯಕ್ರಮವನನ್ನು ಉದ್ಘಾಟಿಸಿ ನಂತರ ಮಾತನಾಡಿದರು.
ಕೆಂಪೇಗೌಡರು ತಮ್ಮ ಆಡಳಿತದ ಅವಧಿಯಲ್ಲಿ ನೀರಿನ ಹಾಗೂ ಮಣ್ಣಿನ ಮಹತ್ವ ತಿಳಿಸಿದ್ದರು. ವೈಜ್ಞಾನಿಕವಾಗಿ ಕೆರೆಗಳನ್ನು ಕಟ್ಟಿಸಿ ಸರ್ವಧರ್ಮಿಯರು ನಾಡನ್ನಾಗಿ ಮಾಡಿದರು.
ಬಹುತೇಕ ಎಲ್ಲಾ ವರ್ಗದವರು ಬೆಂಗಳೂರಿನಲ್ಲಿ ನೆಲಸಿ ತಮ್ಮ ವ್ಯಾಪಾರ ವಹಿವಾಟು ನಡೆಸಲು ಅನುವು ಮಾಡಿಕೊಟ್ಟಿದ್ದರು ಎನ್ನುವುದಕ್ಕೆ ಉಪ್ಪರಪೇಟೆ, ಮಂಡಿ ಪೇಟೆ, ಬಳೆ ಪೇಟೆ, ತರಗುಪೇಟೆ, ಕುಂಬಾಗಲ್ಲಿ ಸೇರಿದಂತೆ ವರ್ಗವಾರು ಹೆಸರುಗಳೆ ಕಾರಣವಾಗಿದೆ ಎಂದರು.ಜಗಳೂರು ಪಟ್ಟಣದ ಗುರುಭವನದಲ್ಲಿ ನಾಡಪ್ರಭು ಕೆಂಪೇಗೌಡರವರ 515 ನೇ ಜಯಂತ್ಯೋತ್ಸವ ಅಂಗವಾಗಿ ಕುಂಭ ಮೇಳ ನಡೆಯಿತು.
ಸರ್ಕಾರದಿಂದ ಮಹಾನೀಯರ ಜಯಂತಿಗಳನ್ನು ಆಚರಣೆಮಾಡುತ್ತಿರುವುದು ಅವರ ಕೊಡುಗೆಗಳನ್ನು ಸ್ಮರಿಸಿಕೊಂಡು ಮಕ್ಕಳ ಜೀವನದಲ್ಲಿ ಅಳವಡಿಸಿಕೊಳ್ಳವಂತೆ ಮಾಡಿ ಸಮಾಜಕ್ಕೆ ಮಾದರಿ ವ್ಯಕ್ತಿಗಳನ್ನಾಗಿ ಮಾಡಲು ಎಂಬುದನ್ನು ನಾವೆಲ್ಲರೂ ಅರಿತು ಕೊಳ್ಳಬೇಕಾಗಿದೆ.
ಸರಕಾರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೆಗೌಡ ಅವರ ಹೆಸರು ಇಟ್ಟಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ತಾಲೂಕು ಕಛೇರಿಯಿಂದ ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತದ ಮೂಲಕ ಡೊಳ್ಳುಕುಣಿತ, ವಾಧ್ಯವೃಂದದಮೂಲಕ ಶಾಲಾವಿದ್ಯಾರ್ಥಿಗಳು ಮೆರವಣಿಗೆ ನಡೆಸಲಾಯಿತು.
ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಮಹಿಳಾ ಕಾಂಗ್ರೆಸ್ ನ ಕಲ್ಪನಾ, ಶಿಲ್ಪಾ,
ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಬಿ.ಮಹೇಶ್ವರಪ್ಪ, ವಿಜಯ್ ಕೆಂಚೋಳ್, ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ತಾ.ಪಂ ಪ್ರಭಾರಿ ಇಓ ಮಿಥುನ್ ಕಿಮಾವತ್, ಬಿಇಓ ಹಾಲಮೂರ್ತಿ, ಬಿಆರ್‍ಸಿ ಡಿಡಿ ಹಾಲಪ್ಪ, ಸಿಡಿಪಿಓ ಬಿರೇಂದ್ರಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.