ನಾಗರಿಕರಿಗೆ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಕರ್ತವ್ಯ: ಲೋಕಾ SP, M.S. ಕೌಲಾಪೂರೆ

Suddivijaya
Suddivijaya June 13, 2024
Updated 2024/06/13 at 2:12 PM

ಸುದ್ದಿವಿಜಯ, ಜಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳು ಈಡೇರಬೇಕಾದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸರಕಾರಿ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯ ಎಂದು ಲೋಕಾಯುಕ್ತ ಎಸ್‍ಪಿ ಎಂ.ಎಸ್. ಕೌಲಾಪೂರೆ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಗುರುವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಚೇರಿಗೆ ಬರುವ ನೊಂದವರಿಗೆ ಮುಗ್ದರಿಗೆ ಸುಖಾಸುಮ್ಮನೆ ಅಲೆದಾಡಿಸದೆ ಅವರ ಕಾರ್ಯಗಳನ್ನು ಸಕಾಲದಲ್ಲಿ ಮಾಡಿ ಕೊಡಿ ಎಂದರು.

ತಾಲೂಕಿನಲ್ಲಿ ಕೆರೆ ಒತ್ತುವಾರಿಗೆ ಸಂಬಂಧಿಸಿದ ಪ್ರಕರಣಗಳು ಇವೆಯೆ ಎಂದು ತಹಶೀಲ್ದಾರ್ ಕಲಿಮುಲ್ಲಾರನ್ನು ಪ್ರಶ್ನಿಸಿದಾಗ, ಕೆಲವು ಪ್ರಕರಣಗಳು ಇದ್ದವು ಅವುಗಳನ್ನು ಬಗೆಹರಿಸಲಾಗಿದೆ ಎಂದಾಗ ಕೆರೆಗಳಲ್ಲಿ ಮಣ್ಣು ಸಾಗಿಸುವ ಪ್ರಕರಣಗಳ ಬಗ್ಗೆ ಏನು ಹೇಳುತ್ತಿರಿ ಎಂದು ಲೋಕಯುಕ್ತ ಎಸ್ . ಪಿ ಪ್ರಶ್ನಿಸಿದರು.

 ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಯುಕ್ತರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ನಡೆಯಿತು.
 ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಯುಕ್ತರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ನಡೆಯಿತು.

ಮಣ್ಣು ತೆಗೆಯಲು ಅವಕಾಶವಿಲ್ಲ ಅಂತವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಕಾನೂನಿನ ಅಡಿಯಲ್ಲಿ ಅವಕಾಶವಿದೆ ಎಂದು ತಹಶೀಲ್ದಾರ್ ಸ್ಪಷ್ಟನೆ ನೀಡಿದರು.

ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ರಸ್ತೆಗೆ ಕಟ್ಟಡ ನಿರ್ಮಿಸಿ ಅಂಗಡಿ ಮಾಡಿದ್ದಾರೆ. ಇದು ಸರಕಾರಿ ಜಾಗ ಈ ರೀತಿ ಮಾಡಬಾರದು ಎಂದು ಅವರಿಗೆ ಮನವರಿಕೆ ಮಾಡಿದರು ಸಹ ಪ್ರಯೋಜನವಾಗಿಲ್ಲ ಇದರ ಬಗ್ಗೆ ಗ್ರಾಪಂ ದೂರು ನೀಡಲಾಗಿದೆ.

ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರಾದ ಶಿವಣ್ಣ, ಶಾಂತಪ್ಪ, ಮಂಜಣ್ಣ ದೂರಿದರು. ಪಿಡಿಓ ಶಶಿಧರ್ ಪಾಟೇಲ್ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ತಹಶೀಲ್ದಾರ್ ವ್ಯಾಪ್ತಿಗೆ ಬರುತ್ತದೆ ಎಂದು ಸಮಜಾಯಿಸಿ ನೀಡಿದರು.ಇದಕ್ಕೆ ಅಸಮಾಧಾನಗೊಂಡ ಎಸ್‍ಪಿ ಕಚೇರಿಯಲ್ಲಿ ನೊಂದವಣೆ ಪುಸ್ತಕ ನಿರ್ವಹಿಸಿದ್ದಿರ ಎಂದು ಪ್ರಶ್ನಿಸಿದರು. ಇಲ್ಲ ಎಂದು ಪಿಡಿಓ ಹೇಳಿದಾಗ ಮೊದಲು ಆಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದರು.

ಶಾಲೆಗಳು ಪ್ರಾರಂಭವಾಗಿದ್ದು ಕಟ್ಟಡಗಳ ಸ್ಥಿತಿ ಹೇಗಿದೆ ಎಂದು ಬಿಇಒ ಪ್ರಶ್ನಿಸಿದಾಗ, ತಾಲೂಕಿನಲ್ಲಿ 65 ಕಟ್ಟಡಗಳ ದುರಸ್ಥಿಗೆ ಅನುದಾನ ಬಿಡುಗಡೆಯಾಗಿದ್ದು ದುರಸ್ಥಿ ಕಾರ್ಯ ಮಾಡಲಾಗುತ್ತಿದೆ ಎಂದು ಸಭೆಯ ಗಮನಕೆ ತಂದರು. ಸುರೇಶ್ ಎಂಬುವವರು ಬಸ್ ವ್ಯವಸ್ಥೆ ಬಗ್ಗೆ ಕೇಳಿಕೊಂಡರು.

ಈ ಸಂಧರ್ಭದಲ್ಲಿ ಪ್ರಭಾರಿ ಇಒ ಮಿಥನ್ ಕೀಮಾವತ್, ಬಿಇಓ ಹಾಲಮೂರ್ತಿ, ಬಿಆರ್‍ಸಿ ಡಿ.ಡಿ.ಹಾಲಪ್ಪ, ಪಿಎಸ್ ಐ. ಆಶಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!