suddivijayanews28/08/2024
ಸುದ್ದಿವಿಜಯ, ಜಗಳೂರು: ಇತ್ತೀಚೆಗೆ ಸುರಿದ ಭಾರಿ ಮಳೆಗೆ ತಾಲೂಕಿನ ರಂಗಯ್ಯನದುರ್ಗ ಕೊಂಡುಕುರಿ ಅರಣ್ಯ ವ್ಯಾಪ್ತಿಯ ಕೆಳಗೋಟೆ ಗ್ರಾಮದ ಕೆರೆ ಕೋಡಿ ಬಿದ್ದ ಹಿನ್ನೆಲೆ ಬುಧವಾರ ಶಾಸಕ ಬಿ. ದೇವೇಂದ್ರಪ್ಪ ಭೇಟಿ ನೀಡಿ ವೀಕ್ಷಣೆ ಮಾಡಿದರು.
ನಂತರ ಮಾತನಾಡಿ, ಕೆಳಗೋಟೆ ಗ್ರಾಮ ಪ್ರಕೃತಿ ಸೌಂದರ್ಯದ ಮಡಿಲಿಲ್ಲಿದೆ. ಸುತ್ತಲು ಬೆಟ್ಟ,ಗುಡ್ಡ, ಕಾಡು ಪ್ರಾಣಿ, ಪಕ್ಷಿಗಳಿಂದ ಕೂಡಿದೆ. ಇದೀಗ ಮಲೆನಾಡು ನಾಚಿಸುವಂತೆ ಕಂಗೊಳಿಸುತ್ತಿದೆ.
ಜತಗೆ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಮಳೆಯಿಂದ ಎರಡು ಕೆರೆಗಳಿಗೆ ತುಂಬಿ ಕೋಡಿ ಬಿದ್ದಿರುವುದು ತುಂಬ ಸಂತಸವಾಗಿದೆ ಎಂದರು.
ಮಳೆಗಾಲದಲ್ಲಿ ಕರಡಿ, ಹಂದಿ ಸೇರಿದಂತೆ ಕಾಡು ಪ್ರಾಣಿಗಳು ಜಮೀನುಗಳಲ್ಲಿ ಆಹಾರಕ್ಕಾಗಿ ಬರುತ್ತವೆ. ಎಚ್ಚರಿಕೆಯಿಂದ ಇರಬೇಕು, ಕಾಡಿನಲ್ಲಿ ಒಂಟಿಗರಾಗ ಓಡಾಡಬೇಡಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕರಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಕೆಚ್ಚೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಪಿ. ಲಕ್ಷ್ಮಮ್ಮ ಮಾರಪ್ಪ, ಜಿ.ಪಂ ಮಾಜಿ ಸದಸ್ಯ ಕೆ.ಪಿ ಪಾಲಯ್ಯ,
ಪ.ಪಂ ಮಾಜಿ ಅಧ್ಯಕ್ಷ ಮಂಜುನಾತ್, ಮುಖಂಡರುಗಳಾದ ಕಾಂತರಾಜ್, ಪ್ರಕಾಶ್ ಗೌಡ್ರು, ಬಸವರಾಜ್ ಗೌಡ, ಶ್ರೀನಿವಾಸ್, ಚಂದ್ರಪ್ಪ, ಪಿ.ಲೋಕೇಶ್. ಗಾದ್ರಪ್ಪ, ಮೀಸೆ ಗುರುಸಿದ್ದಪ್ಪ, ಬಿ.ಮಹೇಶ್ವರಪ್ಪ, ಚಿಕ್ಕಮ್ಮನಹಟ್ಟಿ ಹನುಮಂತಪ್ಪ, ಹಟ್ಟಿ ತಿಪ್ಪೇಸ್ವಾಮಿ, ಕಾಂತರಾಜು,
ಎಂ.ಎಸ್.ಪಾಟೀಲ್, ಪಲ್ಲಾಗಟ್ಟೆ ಶೇಖರಪ್ಪ, ಮಹಮದ್ ಗೌಸ್, ಗುತ್ತಿಗೆದಾರ ದೀಪಕ್ ಪಾಟೀಲ್ ಸೇರಿದಂತೆ ಮತ್ತಿತರರಿದ್ದರು.