ಸುದ್ದಿವಿಜಯ, ಜಗಳೂರು: ಭಾನುವಾರ ಬೆಳಿಗ್ಗೆ ಇಂದಿರಾ ಕ್ಯಾಂಟ್ ನಲ್ಲಿ ಉಪಹಾರ ಸೇವಿಸಿದ ನಂತರ ಸರಕಾರಿ ಆಸ್ಪತ್ರೆ ಭೇಟಿ ನೀಡಿದ ಶಾಸಕ ದೇವೇಂದ್ರಪ್ಪ ಇಷ್ಟೊತ್ತಿಗೇನ್ರಿ ಕಸ ಗುಡಿಸೋದು, ಎಂಟು ಗಂಟೆ ಆದ್ರೂ ಸ್ವಚ್ಛಗೊಳಿಸದಿದ್ರೆ ಹೇಗೆ ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಆಸ್ಪತ್ರೆ ಯಲ್ಲಿ ರೋಗಿಯ ನರಳಾಟಕ್ಕೆ ಶೀಘ್ರ ಚಿಕಿತ್ಸೆ:
ಆಸ್ಪತ್ರೆ ವಾರ್ಡ್ ಗಳಲ್ಲಿ ಸ್ವಚ್ಛತೆ ವೀಕ್ಷಿಸುವ ವೇಳೆ ಮಹಿಳಾ ರೋಗಿಯೊಬ್ಬರ ನರಳಾಟ ವೀಕ್ಷಿಸಿದ ಶಾಸಕರು ವೈದ್ಯರನ್ನು ಕರೆದು ಚಿಕಿತ್ಸೆ ಕೊಡಿಸಿದರು. ನಂತರ ಐಸಿಯು, ಜನರಲ್ ವಾರ್ಡ್ ಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಈವೇಳೆ ಪಪಂ ಸದಸ್ಯ ರಮೇಶ್‍ರೆಡ್ಡಿ, ಲುಕ್ಮಾನ್ ಉಲ್ಲಾಖಾನ್, ರವಿಕುಮಾರ್, ಅರಿಶಿಣಗುಂಡಿ ಮಂಜುನಾಥ್, ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಅನೇಕರು ಇದ್ದರು.