ಸುದ್ದಿವಿಜಯ, ಜಗಳೂರು:ವಿವಿಧ ತಾಂತ್ರಿಕ ನೆಪಗೊಳಡ್ಡಿ ದಶಕಗಳಿಂದ ನೆನಗುದಿಗೆ ಬಿದ್ದಿರುವ 11E ಸಮಸ್ಯೆಗೆ ಪರಿಹಾರ ಒದಗಿಸಿ ಕೌಟುಂಬಿಕ ನೆಮ್ಮದಿ ಹಾಗೂ ಹಳ್ಳಿಗಳಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಆಂದೋಲನ ನೆರವಾಗಲಿದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಇಲ್ಲಿನ ತಾಲೂಕು ಕಚೇರಿಯಲ್ಲಿ ಬುಧವಾರ ಕಂದಾಯ ಇಲಾಖೆಯಿಂದ ಹಮ್ಮಿಕೊಂಡಿದ್ದ 11E/ತತ್ಕಾಲ್ ಹಾಗೂ ಆಲಿನೇಷನ್ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಮಾರು ವರ್ಷಗಳಿಂದಲೂ ಬಾಕಿ ಇರುವ 11E ಸ್ವೀಕರಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಕಡತಗಳನ್ನು ಇತ್ಯರ್ಥಗೊಳಿಸಲು ಸರ್ಕಾರದ ಆದೇಶವಾಗಿದೆ. ಆಯಾ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ.
ನಮ್ಮ ತಾಲೂಕಿನಲ್ಲಿರುವ ಎಲ್ಲಾ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡಿ ಜನರನ್ನು ಸಮಸ್ಯೆಯಿಂದ ದೂರ ಮಾಡಬೇಕು ಎಂದು ಸಲಹೆ ನೀಡಿದರು.
ಕಂದಾಯ ಇಲಾಖೆ ವ್ಯವಸ್ಥೆ ಬ್ರಿಟಿಷರ ಕಾಲದಿಂದಲೂ ಬಂದಿದೆ. ಶೇಕ್‌ದಾರ್, ಅಮಲ್ದಾರ್, ಕಮಿಷನರ್‌ನಿಂದ ಆರಂಭವಾಗಿದೆ, ಈಗ ತಹಸೀಲ್ದಾರ್, ಆರ್‌ಐ, ವಿಎಗಳ ಮೇಲೆ ಇಡಿ ಇಲಾಖೆಯ ಆಡಳಿತ ಜವಾಬ್ದಾರಿ ಇದೆ. ಇಲ್ಲಿಗೆ ತುಂಬ ವಯಸ್ಸಾದವರು, ಜೇಬಿನಲ್ಲಿ ಹಣವಿಲ್ಲದವರು, ದೇಹದಲ್ಲಿ ಶಕ್ತಿ ಇಲ್ಲದವರು ಬರುತ್ತಾರೆ.
ಅವರನ್ನು ಅಲೆದಾಡಿಸುವುದು, ಹಣ ವಸೂಲಿ ಮಾಡುವುದು ಒಳ್ಳೆಯದಲ್ಲಾ, ಸಾದ್ಯವಾದರೇ ಮಾಡಿಕೊಡಿ ಇಲ್ಲವೇ ಹಿಂಬರಹ ಕೊಡಿ ಆದರೆ ಸುಳ್ಳು ಹೇಳಿ ತಪ್ಪಿಸುವುದು ನೌಕರನಿಗೆ ಶೋಭೆ ತರುವುದಿಲ್ಲ.
ಮನಸಾಕ್ಷಿಗೆ ವಿರುದ್ದವಾದ ಕೆಲಸ ಮಾಡಬೇಡಿ ಎಂದು ಗ್ರಾಮಲೆಕ್ಕಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಅರುಣ್‌ಕುಮಾರ್ ಕಾರಗಿ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ, ಸರ್ವೇ ಇಲಾಖೆ ಸಹಾಯೋಗದಲ್ಲಿ 11ಇ ಆಂದೋಲವನ್ನು ಹಮ್ಮಕೊಳ್ಳಲಾಗಿದೆ. ತಾಲೂಕಿನಲ್ಲಿ ವಿವಿಧ ಕಾರಣಗಳಿಂದ ಸುಮಾರು 860 ಅರ್ಜಿಗಳು ಬಾಕಿ ಉಳಿದೆ.
ಒಂದು ದಿನದಲ್ಲಿ ಕನಿಷ್ಠ 300ಕ್ಕೂ ಹೆಚ್ಚು ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ರೂಪ, ಆರ್‌ಐ ಧನಂಜಯ್, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಮಹಮದ್ ಗೌಸ್ ಸೇರಿದಂತೆ ಮತ್ತಿತರಿದ್ದರು.