ಸುದ್ದಿವಿಜಯ, ಜಗಳೂರು:ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಪ್ರೌಢಶಾಲಾ ಅವರಣದಲ್ಲಿ ಶುಕ್ರವಾರ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಬಾಳೆಹಣ್ಣು ವಿತರಣೆ ಮಾಡಿದರು.
ಮಕ್ಕಳಲ್ಲಿ ಪೌಷ್ಠಿಕಾಂಶ ವೃದ್ಧಿ ಮಾಡುವ ಕೇಂದ್ರ ಮತ್ತು ರಾಜ್ಯ ಸರಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲಿ ಬಾಳೆಹಣ್ಣು, ಮೊಟ್ಟೆ ಮತ್ತು ಚಿಕ್ಕಿಗಳನ್ನು ವಿತರಣೆ ಮಾಡುವ ಆದೇಶದ ಹಿನ್ನೆಲೆ ಬಾಳೆಹಣ್ಣುಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.
ಶ್ರಾವಣ ಮಾಸ ಹಿನ್ನೆಲೆ ಕೆಲ ವಿದ್ಯಾರ್ಥಿಗಳು ತಿನ್ನುವುದಿಲ್ಲ. ಹೀಗಾಗಿ ಈ ತಿಂಗಳು ಮೊಟ್ಟೆ ಬದಲಿಗೆ ಬಾಳೆಹಣ್ಣು ವಿತರಣೆ ಮಾಡುತ್ತಿದ್ದೇವೆ ಎಂದು ಮುಖ್ಯ ಶಿಕ್ಷಕ ಕೆ.ಬಸವರಾಜಪ್ಪ ತಿಳಿಸಿದರು.
ಈ ವೇಳೆ ನಿವೃತ್ತ ಮುಖ್ಯ ಶಿಕ್ಷಕರಾದ ಎಲ್.ಟಿ.ಬಸವರಾಜ್, ವಿನಯ್‍ಕುಮಾರ್, ಶಿಕ್ಷಕರಾದ ಪಿ.ತಿಪ್ಪೇಸ್ವಾಮಿ, ಮಂಜುನಾಥ್ ಮಮತಾ, ಅಖಿಲಾ ಸೇರಿದಂತೆ ಅನೇಕರು ಇದ್ದರು.