suddivijayanews27/06/2024
ಸುದ್ದಿವಿಜಯ, ಜಗಳೂರು: ದೇಶದ ಪ್ರತಿಯೊಬ್ಬ ಪ್ರಜೆಗೂ ಒಂದೇ ಕಾನೂನು ಅದನ್ನು ಎಲ್ಲರೂ ಗೌರವಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಗುರುವಾರ ನಡೆದ ಜನ ಸಂಪರ್ಕ ಸಭೆ, ಹೆಲ್ಮೆಟ್ ವಿತರಣೆ ಹಾಗೂ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಸಿಬ್ಬಂದಿಗೆ ಹೆಲ್ಮೆಟ್ ನೀಡಿದ ಉದ್ದೇಶ ಮೊದಲು ನಮ್ಮ ಸಿಬ್ಬಂದಿಗಳು ಕಾನೂನು ಪಾಲನೆ ಮಾಡಲಿ ಎಂಬುದು. ಹೆಲ್ಮೆಟ್ ಧರಿಸಿದರೆ ಅಪಘಾತ ಸಂಭವಿಸಿದಾಗ ಪ್ರಾಣಕ್ಕೆ ಹೆಚ್ಚು ಅಪಾಯ ಆಗುವುದಿಲ್ಲ ಹಾಗಾಗಿ ಎಲ್ಲರೂ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಹಾಕಿ ಎಂದು ಮನವಿ ಮಾಡಿದರು.
ಜನ ಸಾಮಾನ್ಯರ ಸೇವೆಗೆ ಸದಾ ನಾವು ಬದ್ಧರಿರುತ್ತೇವೆ. ಪಟ್ಟಣದಲ್ಲಿ ಇತ್ತೀಚೆಗೆ 16ಜನಕ್ಕೆ ಗಾಂಜಾ ಪರೀಕ್ಷೆ ಮಾಡಿದಾಗ ಅದರಲ್ಲಿ 3ಪ್ರಕರಣಗಳು ಬೆಳಕಿಗೆ ಬಂದಿದೆ.
ಇಂತಹ ಮಾದಕ ಸೇವೆನೆಯಿಂದ ಆರೋಗ್ಯ ಹಾಳಾಗುವುದಲ್ಲದೆ ಸಮಾಜದಲ್ಲಿ ಅಶಾಂತಿ ಉಂಟಾಗಲು ಕಾರಣವಾಗಬಹುದು, ಯುವ ಪೀಳಿಗೆ ದುಷ್ಚಟಗಳಿಂದ ದೂರವಿರಬೇಕೆಂದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ ಅದರಿಂದ ಎಲ್ಲರೂ ಜಾಗೃತರಾಗಿ ಎಂದು ಹೇಳಿದರು. 1ಸಾವಿರಕ್ಕೂ ಹೆಚ್ಚು ಕಳೆದ ಮೊಬೈಲ್ ಅನ್ನು ಪತ್ತೆ ಹಚ್ಚಿ ಅದರ ಮಾಲೀಕರಿಗೆ ನೀಡಿದ್ದೇವೆ ಎಂದು ತಿಳಿಸಿದರು.
ಆ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು. ರಸ್ತೆ ಬದಿಯಲ್ಲಿರುವ ಗೂಡಂಗಡಿಗಳಿಗೆ, ಬೀದಿಬದಿ ವ್ಯಾಪಾರಸ್ತರಿಗೆ ಸ್ಥಳಾಂತರಿ ಸಹಕರಿಸುವಂತೆ ಸಂಬಂಧಪಟ್ಟ ಪಪಂ ಚೀಫ್ ಆಫೀಸರ್‍ಗೆ ಸೂಚನೆ ನೀಡಲಾಗಿದೆ ಎಂದರು.
ಪೊಲೀಸ್ಉಪ ಅಧೀಕ್ಷಕ ಬಸವರಾಜ್ ಮಾತನಾಡಿ, ನಮ್ಮ ಸಿಬ್ಬಂದಿಗಳು ಸಹ ಹೆಲ್ಮೆಟ್ ಧರಿಸದೆ ಇರುವ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಟೀಕೆಗಳು ಕೇಳಿಬರುತ್ತಿವೆ. ಸಿಬ್ಬಂದಿಗಳು ಸುರಕ್ಷಿತವಾಗಿರಬೇಕಾದರೆ ಮೊದಲು ಹೆಲ್ಮೆಟ್ ಧರಿಸಿ ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಹೆಲ್ಮೆಟ್ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಸಿಪಿಐ ಶ್ರೀನಿವಾಸ್ ರಾವ್, ಪಿಎಸ್‍ಐ ಸಾಗರ್, ಸಿಬ್ಬಂದಿಗಳಾದ ಶಿವಪ್ರಸಾದ್, ಮಂಜುನಾಥ್, ಮಾರುತಿ, ಪ್ರಶಾಂತ್, ನಾಗರಾಜ್, ಲಕ್ಷ್ಮೀದೇವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.