suddivijayanews15/08/2024
ಸುದ್ದಿವಿಜಯ,ಜಗಳೂರು: ಪಟ್ಟಣದ ತುಮಾಟಿ ಬಡಾವಣೆ ಕ್ಷೇಮಾಭೀವೃದ್ಧಿ ಸಂಘದಿಂದ ಗುರುವಾರ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಣೆ ಮಾಡುವ ಮೂಲಕ ನಡೆದ 78ನೇ ಸ್ವಾತಂತ್ರೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು.
ತುಮಾಟಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಕೆ.ಕುಮಾರ್‍ಗೌಡ ಮಾತನಾಡಿ, ಕಳೆದ ಎರಡು ವರ್ಷಗಳಿಂದಲೂ ನಮ್ಮ ಸಂಘದಿಂದ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಸ್ವಾತಂತ್ರೋತ್ಸವದ ದಿನದಂದ ಹಮ್ಮಿಕೊಂಡು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದೇವೆ.ಜಗಳೂರು ತಾಲೂಕಿನ ತುಮಾಟಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದಿಂದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸಲಾಯಿತು.
ಸಾಮಾಜ ಸದೃಢವಾಗಬೇಕಾದರೆ ಜತ್ಯಾತೀತ ತತ್ವಗಳಿಗೆ ಬದ್ಧವಾಗಿ, ಅಂಬೇಡ್ಕರ್ ಸ್ಥಾಪಿಸಿರುವ ಸಂವಿಧಾನಕ್ಕೆ ವಿಧೇಯರಾಗಿರಬೇಕು. ಬಲಹೀನರಿಗೆ, ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿದಾಗಷ್ಟೇ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಡಾ.ಷಣ್ಮುಖ ಮಾತನಾಡಿದರು. ಈ ವೇಳೆ ಸಂಘದ ಉಪಾಧ್ಯಕ್ಷರಾದ ಹನುಮಂತಪ್ಪ, ನಿರ್ದೇಶಕರಾದ ಗಣೇಶ್, ಮಂಜುನಾಥ್, ನಾಗರಾಜ್, ಗುರುಮೂರ್ತಿಶೆಟ್ಟಿ, ಮಾದವರೆಡ್ಡಿ,
ವಕೀಲರಾದ ಡಿ.ವಿ.ನಾಗಪ್ಪ, ನಿವೃತ್ತ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ನಾಗರಾಜ್, ಶಿವಣ್ಣ, ಹೇಮಣ್ಣ, ಆಸ್ಪತ್ರೆ ಸಿಬ್ಬಂದಿಗಳಾದ ಏಕಾಂತಮ್ಮ ಸೇರಿದಂತೆ ಅನೇಕರು ಇದ್ದರು.