ಐದು ದಿನದ ಹಸುಗೂಸು ಬಿಟ್ಟು ಹೋದ ತಾಯಿ!

Suddivijaya
Suddivijaya June 3, 2022
Updated 2022/06/03 at 8:09 AM
newborn-baby-found-jagalur(1)

ಜಗಳೂರು: ತಾಯಿಗೆ ಮಗು ಭಾರವೇ? ಬಳ್ಳಿಗೆ ಕಾಯಿ ಭಾರವೇ? ಎಂಬ ಗಾದೆ ಸುಳ್ಳಾಗಿದೆ. ತಾಲೂಕಿನ
ಗೋಪಗೊಂಡನಹಳ್ಳಿ ಗುರುವಾರ ಗ್ರಾಮದಲ್ಲಿರುವ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ೫ ದಿನದ ಹಸುಗೂಸನ್ನು ತಾಯಿಯೊಬ್ಬರು ಬಿಟ್ಟು ಹೋಗಿದ್ದಾರೆ.
ಮಗುವಿನ ಆರ್ಥನಾದ!

ಜಗಳೂರು ಬಿದರಕೆರೆ ರಸ್ತೆಗೆ ಹೊಂದಿಕೊAಡAತಿರುವ ಗೋಪಗೊಂಡಹಳ್ಳಿ ಗ್ರಾಮ ದೇವತೆ ಚೌಡಮ್ಮ ದೇವಸ್ಥಾನವಿದ್ದು, ದೇವಸ್ಥಾನದ ಆವರಣದಲ್ಲಿ ಬೆಳ್ಳಂಬೆಳಿಗ್ಗೆ ಮಗುವೊಂದರ ಅಳುವಿನ ಶಬ್ದಕೇಳುತ್ತಿದ್ದಂತೆ ಗ್ರಾಮಸ್ಥರು ಗುಂಪುಸೇರಿದ್ದಾರೆ. ಮಗು ಯಾರದ್ದು, ಯಾರು ತಂದು ಬಿಟ್ಟರು ಎನ್ನುವಷ್ಟರಲ್ಲಿ ಮಕ್ಕಳಿಲ್ಲದ ಅದೇ ಗ್ರಾಮಸ್ಥರೊಬ್ಬರು ಆ ಮಗುವನ್ನು ಎತ್ತಿಕೊಂಡು ಮನೆಗೆ ಹೋಗಿದ್ದಾರೆ ಎಂದು ಹೆಸರೇಳಲು ಇಚ್ಛಿಸದ ಗ್ರಾಮಸ್ಥದ ಮುಖಂಡ ಮಾಹಿತಿ ನೀಡಿದ್ದಾರೆ.

ಸರಕಾರದ ವಶಕ್ಕೆ ಮಗು

ಗುರುವಾರ ಬೆಳಗಿನ ಜಾವ ಚೌಡಮ್ಮನ ದೇವಸ್ಥಾನದಲ್ಲಿ ನವಜಾತ ಶಿಶು ಅಳುತ್ತಿದ್ದು ಅದನ್ನು ಗಮನಿಸಿದ ಗ್ರಾಮಸ್ಥರಲ್ಲಿ ಒಬ್ಬರಾದ ಸುಭದ್ರಮ್ಮ ನಾಗರಾಜ್ ಎಂಬುವರು ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಈ ವಿಷಯಕ್ಕೆ ಸಂಬAಧಿಸಿದAತೆ ಆಶಾ ಕಾರ್ಯಕರ್ತೆ ಅವರ ಮನೆಗೆ ಹೋಗಿ ಮಾಹಿತಿ ಕಲೆಹಾಕಿ ನಮ್ಮ ಗಮನಕ್ಕೆ ತಂದಿದ್ದಾರೆ. ಶುಕ್ರವಾರ ಗೋಪಗೊಂಡನಹಳ್ಳಿ ಸುಭದ್ರಮ್ಮ ಅವರ ನಿವಾಸಕ್ಕೆ ತೆರಳಿ ಸರಕಾರದ ವಶಕ್ಕೆ ಪಡೆಯಲಾಗುವುದು.
– ರೇಖಾ ನಾಡಿಗೇರ್, ಪ್ರಭಾರಿ ಶಶುಅಭಿವೃದ್ಧಿ ಯೋಜನಾಧಿಕಾರಿ, ಜಗಳೂರು

Share this Article
Leave a comment

Leave a Reply

Your email address will not be published. Required fields are marked *

error: Content is protected !!