ಸುದ್ದಿವಿಜಯ, ಜಗಳೂರು: ತಾಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿಯ ಆಡಳಿತದಲ್ಲಿ ಯಾವುದೇ ವೈಫಲ್ಯವಿಲ್ಲ. ಸಣ್ಣಪುಟ್ಟ ತೊಂದರೆಗಳಿದ್ದರೆ ಸರಿಪಡಿಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷೆ ಕೆ.ಸಿ ಗಾಯತ್ರಮ್ಮ ಹನುಮಂತಪ್ಪ ತಿಳಿಸಿದರು.
ಸೋಮವಾರ ಪಟ್ಟಣದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗುಣಮಟ್ಟದ ರಸ್ತೆ, ಚರಂಡಿಗಳನ್ನು ಮಾಡಲಾಗಿದೆ. ಕುಡಿಯುವ ನೀರಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿದೆ. ಆರ್‌ಒ ಘಟಕಗಳು ದುರಸ್ಥಿಗೆ ಕ್ರಮಕೈಗೊಳ್ಳಲಾಗುವುದು, ಘಟಕ ಜವಾಬ್ದಾರಿ ಹೊತ್ತ ಏಜೆನ್ಸಿಗಳ ನಿರ್ಲಕ್ಷದಿಂದ ಹಾಳಾಗಲು ಕಾರಣವಾಗಿದೆ. ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪಲ್ಲಾಗಟ್ಟೆ, ಗೋಡೆ, ತಾರೇಹಳ್ಳಿ, ಮರಿಕುಂಟೆ ಸೇರಿದಂತೆ ಎಲ್ಲಾ ಗ್ರಾಮಗಳ ಶುದ್ದಕುಡಿಯುವ ನೀರು, ಓವರ್ ಟ್ಯಾಂಕ್‌ನ್ನು ತಿಂಗಳಿಗೊಮ್ಮೆ ಸ್ವಚ್ಚತೆ, ಚರಂಡಿ ಸ್ವಚ್ಚತೆ, ಪಲ್ಲಾಗಟ್ಟೆಯಲ್ಲಿ ನಡೆಯುವ ಸಂತೆಯ ಮರುದಿನವೇ ಮೈದಾನದ ಸ್ವಚ್ಚತೆ ಮಾಡುವಂತೆ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಲಾಗಿದೆ. ಇ-ಸ್ವತ್ತಿಗಾಗಿ ಜನರನ್ನು ಅಲೆದಾಡಿಸುವುದಿಲ್ಲ. ಇ-ಸ್ವತ್ತು ಪಡೆಯುವಾಗ ಕಂದಾಯ ಕಟ್ಟಿಸಲಾಗುತ್ತದೆ. ಅದನ್ನು ಲಂಚ ಅಂತ ಪರಿಗಣಿಸಬಾರದು ಪಂಚಾಯಿತಿಯಿAದ ರಸೀದಿ ಕೊಡಲಾಗುತ್ತದೆ. ಈಗಾಗಲೇ ಮೊದಲ ಆದ್ಯತೆಯಾಗಿ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಶೇಖರಪ್ಪ, ಒಕ್ಕೂಟದ ಅಧ್ಯಕ್ಷ ಬಿ.ವಿ.ವೀರಪ್ಪ, ಕೆ.ಇ.ಶೇಖರಪ್ಪ, ದಿವ್ಯ ಸತೀಶ್, ವಿರುಪಾಕ್ಷಪ್ಪ, ರೇಣುಕಾ ಗುರುಮೂರ್ತಿ, ಯಲ್ಲಮ್ಮ ಕೆ.ಟಿ.ಬಸಣ್ಣ, ಮುರಿಗೇಶ್, ವಿರುಪಾಕ್ಷಪ್ಪ ಇದ್ದರು.
ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ನಮ್ಮ ಪಂಚಾಯಿತಿ ಅಡಿ ಬರುವ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಮಾಹಿತಿ ಕೊರತೆಯಿಂದ ಕೆಲವಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
–ಶಶಿಧರ್ ಪಾಟೀಲ್, ಪಿಡಿಒ, ಪಲ್ಲಾಗಟ್ಟೆ ಗ್ರಾಪಂ