ಸುದ್ದಿವಿಜಯ, ಜಗಳೂರು: ತೀವ್ರ ಮೈಕೈನೋವು, ಜ್ವರದಿಂದ ಬಳಲುತ್ತಿರುವ ತಾಲೂಕಿನ ಕಾನನಕಟ್ಟೆ ಗ್ರಾಮಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಜನರ ಆರೋಗ್ಯವನ್ನು ಶಾಸಕ ಎಸ್.ವಿ.ರಾಮಚಂದ್ರ ವಿಚಾರಿಸಿದರು. ಅಗತ್ಯ ಆರೋಗ್ಯ ವ್ಯವಸ್ಥೆ ಕಲ್ಪಸಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದರ ಅವರು, ಗ್ರಾಮದಲ್ಲಿ ಬಹುತೇಕ ಜನರು ಜ್ವರ, ಕೆಮ್ಮು, ನೆಗಡಿ, ಮೈ ಕೈ ಸುಸ್ತು, ಸೇರಿದಂತೆ ವಿವಿದ ಖಾಯಿಲೆಗಳು ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆಯವರ ಜೊತೆ ಹಾಗೂ ಸಂಬಂಧಪಟ್ಟ ಅಧಿಕಾರಿಗೊಳಿಂಗೆ ಚರ್ಚಿಸಿದ್ದೇನೆ.
ಸೂಕ್ತ ಚಿಕಿತ್ಸೆ, ಔಷಧೋಪಚಾರ ಹಾಗೂ ನೈರ್ಮಲ್ಯ ಕಾಪಾಡುವಂತೆ ದಿನನಿತ್ಯ ಜನರ ತಪಾಸಣೆ ಮಾಡಿ ಚಿಕಿತ್ಸೆ ನೀಡಬೇಕೆಂದು ಸೂಚಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಧಿಕಾರಿಗಳು, ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಪಲ್ಲಾಗಟ್ಟೆ ಎಚ್.ಸಿ.ಮಹೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.