ಜಗಳೂರು ಪಪಂ ನೂತನ ಅಧ್ಯಕ್ಷ ನವೀನ್ ಕುಮಾರ್, ಉಪಾಧ್ಯಕ್ಷರಾಗಿ ಲೋಕಮ್ಮ ಅವಿರೋಧ ಆಯ್ಕೆ

Suddivijaya
Suddivijaya September 4, 2024
Updated 2024/09/04 at 10:03 AM

suddivijayanews4/09/2024

ಸುದ್ದಿವಿಜಯ, ಜಗಳೂರು: ಇಲ್ಲಿನ ಪಟ್ಟಣ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಬುಧವಾರ ನಡೆಯಿತು.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯರಾದ ಕೆ.ಎಸ್.ನವೀನ್ ಕುಮಾರ್ ಮತ್ತು ಜಿ.ಬಿ.ಲೋಕಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿಗಳೂ ಆದ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, 15ನೇ ವಾರ್ಡ್ ಸದಸ್ಯ ಕೆ.ಎಸ್.ನವೀನ್‍ಕುಮಾರ್ ಅಧ್ಯಕ್ಷರಾಗಿ ಮತ್ತು 2ನೇ ವಾರ್ಡ್ ಸದಸ್ಯರಾದ ಜಿ.ಬಿ.ಲೋಕಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂಬಂಧ ಬಿಜೆಪಿ ಸದಸ್ಯರಲ್ಲೇ ಬಾರಿ ಪೈಪೋಟಿ ಇತ್ತಾದರೂ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ ಮತ್ತು ಎಚ್.ಪಿ.ರಾಜೇಶ್ ಹಾಗೂ ಜಿಲ್ಲಾ ಬಿಜೆಪಿ ಮುಖಂಡರ ಒಮ್ಮತದ ತೀರ್ಮಾನದಂತೆ ನವೀನ್‍ಕುಮಾರ್, ಜಿ.ಬಿ.ಲೋಕಮ್ಮ ಅವರನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರಿಂದ ಚುನಾವಣೆ ನಡೆಯಲಿಲ್ಲ.ಜಗಳೂರು ಪಪಂ ಅಧ್ಯಕ್ಷರಾಗಿ ನವೀನ್‍ಕುಮಾರ್, ಉಪಾಧ್ಯಕ್ಷರಾಗಿ ಲೋಕಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದ ಹಿನ್ನೆಲೆ ಮಾಜಿ ಶಾಸಕರಾದ ಎಚ್.ಪಿ.ರಾಜೇಶ್, ಎಸ್.ವಿ.ರಾಮಚಂದ್ರ ಸಿಹಿ ಹಂಚಿ ಅಭಿನಂದಿಸಿದರು. ಜಗಳೂರು ಪಪಂ ಅಧ್ಯಕ್ಷರಾಗಿ ನವೀನ್‍ಕುಮಾರ್, ಉಪಾಧ್ಯಕ್ಷರಾಗಿ ಲೋಕಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದ ಹಿನ್ನೆಲೆ ಮಾಜಿ ಶಾಸಕರಾದ ಎಚ್.ಪಿ.ರಾಜೇಶ್, ಎಸ್.ವಿ.ರಾಮಚಂದ್ರ ಸಿಹಿ ಹಂಚಿ ಅಭಿನಂದಿಸಿದರು.

ನೂತನ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ ಮತ್ತು ಎಚ್.ಪಿ.ರಾಜೇಶ್ ಸೇರಿದಂತೆ ಎಲ್ಲ ನಾಯಕರು ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.

ಪಟ್ಟಣದ ಪ್ರಗತಿಗೆ ಶ್ರಮಿಸುತ್ತೇನೆ. ಜನರಿಗೆ ಮೂಲ ಸೌಕರ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ನೂತನ ಅಧ್ಯಕ್ಷ ನವೀನ್ ಅವರ ಆಯ್ಕೆ ಎಲ್ಲರ ಒಮ್ಮತದ ತೀರ್ಮಾನವಾಗಿದೆ. ಪಕ್ಷದಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ.

ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಅವನ್ನೆಲ್ಲಾ ಬದಿಗೊತ್ತಿ ಒಮ್ಮತದಿಂದ ಅವಿರೋಧವಾಗಿ ನವೀನ್ ಅವರನ್ನು ಆಯ್ಕೆ ಮಾಡಿದ್ದೇವೆ. ಎಲ್ಲರ ವಿಶ್ವಾಸ ಗಳಿಸಿ ಜನ ಮೆಚ್ಚುವಂತಹ ಕಾರ್ಯಮಾಡಿ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್, ಅವಿರೋಧವಾಗಿ ಆಯ್ಕೆಯಾಗಿರುವ ನವೀನ್, ಲೋಕಮ್ಮ ಅವರಿಗೆ ಅಭಿನಂದನೆಗಳು. ಎಲ್ಲ 11 ಜನ ಸದಸ್ಯರಿಗೂ ಅಧ್ಯಕ್ಷ, ಉಪಾಧ್ಯಕ್ಷರಾಗುವ ಅರ್ಹತೆಯಿತ್ತು.ವರಿಷ್ಠರ ಸೂಚನೆ ಮೇರೆಗೆ ಒಮ್ಮತದ ತೀರ್ಮಾನದಂತೆ ಆಯ್ಕೆ ಮಾಡಿದ್ದೇವೆ. ಎಲ್ಲರಿಗೂ ಅಧ್ಯಕ್ಷರಾಗುವ ಉತ್ಸಾಹ ಇದ್ದೇ ಇರುತ್ತೆ. ಬಿಜೆಪಿ ಸದಸ್ಯರ ಬಹು ಮತವಿದೆ. ಪಟ್ಟಣದ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು.

ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಡೇಂಘಿ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಿ. ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ಹೇಳಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಜಶೇಖರ್ ನಾಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಪಪಂ ಸದಸ್ಯ ಸಹೋದರ ಸುನೀಲ್, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್,

ಮಾಜಿ ಪಪಂ ಅಧ್ಯಕ್ಷ ನಾಗರಾಜ್, ಸತೀಶ್‍ನಾಯ್ಕ್, ಧರ್ಮಾ ನಾಯ್ಕ್, ಲೋಕೇಶ್, ಮಹೇಶ್, ಜೆಡಿಎಸ್ ಮುಖಂಡರಾದ ಮೋಹನ್, ಲುಕ್ಮಾನ್ ಉಲ್ಲಾ ಖಾನ್, ಕೌಸರ್, ಮಂಜಮ್ಮ,

ಅಶೋಕ್, ಎ.ಎಂ. ಮರುಳಾರಾಧ್ಯ, ಸದಸ್ಯರಾದ ಎಂಎಲ್‍ಎ ತಿಪೇಸ್ವಾಮಿ, ದೇವರಾಜ್, ಪಾಪಲಿಂಗಪ್ಪ, ನಿರ್ಮಲಾ ಕುಮಾರಿ, ಸರೋಜಮ್ಮ, ಲೋಕಮ್ಮ, ರೇವಣಸಿದ್ದಪ್ಪ, ಲಲಿತಾ ಶಿವಣ್ಣ ಸೇರಿದಂತೆ ಅನೇಕರು ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!