ಕೋಡಿಹಳ್ಳಿ ಮಠದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಷಡಕ್ಷರಮುನಿ ಶ್ರೀಗಳ ಆಹ್ವಾನ

Suddivijaya
Suddivijaya October 18, 2023
Updated 2023/10/18 at 1:34 PM

ಸುದ್ದಿವಿಜಯ, ಜಗಳೂರು: ನಾಡ ಹಬ್ಬ ದಸರಾ ಹಿನ್ನೆಲೆ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಮಠದಲ್ಲಿ ಅ.15ರಿಂದ 24ರ ವರೆಗೂ ಶ್ರೀ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಜಗಳೂರು ತಾಲೂಕಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆದಿಜಾಂಬ ಕೋಡಿಹಳ್ಳಿ ಬೃಹನ್ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮ ಹಿನ್ನೆಲೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಅ.22ರಂದು ಪಾರಾಯಣ, ಅ.23 ಆಯುಧಪೂಜೆ, ಅ.24 ವಿಜಯದಶಮಿ, ದೀಪಾರಾಧನೆ, ಚಂಡಿಕಾ ಹೋಮ, ಹಾಗೂ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮಗಳಿರುತ್ತವೆ. ಮಧ್ಯಾಹ್ಮ 12.30ಕ್ಕೆ ಪೂರ್ಣಾಹುತಿ, ಪ್ರಸಾದ ವಿನಿಯೋಗವಿರುತ್ತದೆ ಎಂದು ತಿಳಿಸಿದರು.ಜಗಳೂರಿನ ಪ್ರವಾಸಿ ಮಂದಿರದಲ್ಲಿ ಆದಿಜಾಂಬ ಕೋಡಿಹಳ್ಳಿ ಬೃಹನ್ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮಿ ಅವರಿಗೆ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಸನ್ಮಾನಿಸಿದರು.ಜಗಳೂರಿನ ಪ್ರವಾಸಿ ಮಂದಿರದಲ್ಲಿ ಆದಿಜಾಂಬ ಕೋಡಿಹಳ್ಳಿ ಬೃಹನ್ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮಿ ಅವರಿಗೆ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಸನ್ಮಾನಿಸಿದರು.

ಭಕ್ತರು ಮತ್ತು ಮಠಗಳು ಒಂದು ನಾಣ್ಯದ ಮುಖವಿದ್ದಂತೆ, ಮಠಗಳು ಅಳಿವು, ಉಳಿವು ಭಕ್ತರ ಕೈಯಲಿರುತ್ತದೆ ಎಲ್ಲರು ಸಹಕಾರ ನೀಡಬೇಕು ಎಂದರು.

ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮಾತನಾಡಿ, ಮಠಮಾನ್ಯಗಳಿಂದ ಸಂಸ್ಕೃತಿ, ಸಂಸ್ಕಾರ ಉಳಿಯುತ್ತದೆ. ಕೋಡಿಹಳ್ಳಿ ಆದಿಜಾಂಬವ ಮಠ ಇತಿಹಾಸ ಪರಂಪರೆಯನ್ನು ಹೊಂದಿದೆ. ಅದರ ಅಭಿವೃದ್ದಿ ಕಾರ್ಯಗಳ ನಿರಂತರವಾಗಿ ನೆರವೇರಿಲಿ ಎಂದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಜಿ.ಎಚ್ ಶಂಭುಲಿಂಗಪ್ಪ, ಹಟ್ಟಿ ತಿಪ್ಪೇಸ್ವಾಮಿ, ಪಾಪಣ್ಣ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ. ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಬಿಳಿಚೋಡು ಹಾಲೇಶ್, ಗುತ್ತಿದುರ್ಗ ಮಹಾಂತೇಶ್, ವಿಜಯ್ ಕೆಂಚೋಳ್, ಮಲೆಮಾಚಿಕೆರೆ ಸತೀಶ್, ಪೂಜಾರಿ ಸಿದ್ದಪ್ಪ, ಹನುಮಂತಪ್ಪ, ಕುಬೇಂದ್ರಪ್ಪ ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!