ಚಿತ್ರದುರ್ಗ: ಫೋಕ್ಸೋ ಪ್ರಕರಣ, ಮುಗುಘಾ ಶ್ರೀ ಅರೆಸ್ಟ್!

Suddivijaya
Suddivijaya September 2, 2022
Updated 2022/09/02 at 12:15 AM

ಸುದ್ದಿವಿಜಯ,ಚಿತ್ರದುರ್ಗ: ಮುರುಘಾ ಮಠದ ಪೀಠಾಧಿಪತಿ ಡಾ.ಶ್ರೀ.ಶಿವಮೂರ್ತಿ ಮುರುಘಾ‌ ಶರಣರನ್ನು ಪೋಕ್ಸೊ ಕಾಯ್ದೆ ಅಡಿ ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತೆಯರ ಮೇಲಿನ ಲೈಂಗಿಕ ಕಿರುಕುಳದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಶ್ರೀಗಳ ಬಂಧನದ ಕುರಿತು ಸುದ್ದಿಗಳು ಹಬ್ಬಿದ್ದವು.

ಗುರುವಾರ ತಡರಾತ್ರಿ ಪೊಲೀಸರು ಶ್ರೀಗಳನ್ನು ಬಂಧಿಸಿದ್ದಾರೆ. ಈ ಕುರಿತು ರಾಜ್ಯಾದ್ಯಂತ ಪರ-ವಿರೋಧ ಪ್ರತಿಭಟನೆಗಳು ತೀವ್ರಗೊಂಡಿದ್ದವು.
ಭವ್ಯ ಪರಂಪರೆ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿ, ನಾಡಿನ ವಿಶಿಷ್ಟ ಮಠವಾಗಿದ್ದ ಮುರುಘಾ ಮಠಕ್ಕೆ ಈ ಪ್ರಕರಣ ಒಂದು ಕಪ್ಪು ಚುಕ್ಕೆಯಾಗಿ ದಾಖಲಾಗಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!