ಸುದ್ದವಿಜಯ, ದಾವಣಗೆರೆ: ಒಂದು ಕಡೆ ಬಿಜೆಪಿಯಲ್ಲಿ ನಮ್ಮ ಸೋಲಿಗೆ ನಮ್ಮವರೇ ಕಾರಣ ಎಂದು ಜಗಳೂರಿನ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರೆ, ಅತ್ತ ಮಾಜಿ ಸಚಿವ ಗೋವಿಂದ ಕಾರಜೋಳ ಕಾರ್ಯಕರ್ತರಿಂದ ಬಿಜೆಪಿ ಸೋತಿಲ್ಲ. ಬದಲಾಗಿ ನಮ್ಮಿಂದಲೇ ಬಿಜೆಪಿ ಸೋತಿದೆ ಎಂದು ಹೇಳಿದ್ದಾರೆ.
ನಗರದ ರೇಣುಕಾ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಗೋವಿಂದ ಕಾರಜೋಳ, ಬಿಜೆಪಿ ನಾಯಕರಿಂದ ಸೋತಿದೆ ಹೊರತು, ಕಾರ್ಯರ್ತರಿಂದ ಸೋತಿಲ್ಲ. ತಂತ್ರಗಾರಿಕೆ ಹೆಸರಿನಲ್ಲಿ 5 ಸುಳ್ಳು ಭರವಸೆಗಳನ್ನು ನೀಡಿ, ಮತದಾರರಿಗೆ ಮೋಸ ಮಾಡಿರುವುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ.
ಅದನ್ನು ಹಗುರುವಾಗಿ ಪರಿಗಣಿಸಿದ್ದು ಬಿಜೆಪಿ ಸೋಲಿಗೆ ಕಾರಣವಾಯಿತು ಎಂದು ಗೋವಿಂದ ಕಾರಜೋಳ ವ್ಯಾಖ್ಯಾನಿಸಿದರು. ಪುಕ್ಸಟೆ ಗ್ಯಾರಂಟಿಗಳನ್ನು ಇನ್ನು ಮೂರು ತಿಂಗಳಲ್ಲಿ ಕಾಂಗ್ರೆಸ್ ಸರಕಾರ ಜಾರಿ ಮಾಡದಿದ್ದರೆ, ಜನ ಬಡಿಗೆ ತಗೊಂಡು ಬೆನ್ನು ಹತ್ತಲಿದ್ದಾರೆ.
ಅಕ್ಕಿಗಾಗಿ ಪ್ರಧಾನಿ ಅಥವಾ ಆಹಾರ ಮಂತ್ರಿಗೆ ಪತ್ರ ಬರೆಯಬೇಕಿದ್ದ ಸಿಎಂ ಸಿದ್ದರಾಮಯ್ಯ, ಗೋದಾಮು ಕಿಪರ್‍ಗೆ ಪತ್ರ ಬರೆದಿದ್ದಾರೆ. ಅವರಿಗೆ ಯಾರೊಂದಿಗೆ ವ್ಯವಹರಿಸಬೇಕೆಂಬ ಜ್ಞಾನವೂ ಇಲ್ಲ. ಯೋಜನೆ ಅನುಷ್ಠಾನಕ್ಕೆ ತರಲಾಗದ ಕಾಂಗ್ರೆಸ್ ಸಚಿವರು-ಶಾಸಕರು, ಬಿಜೆಪಿ ಸರ್ವರ್ ಹ್ಯಾಕ್ ಮಾಡಿಸಿದೆ ಎಂದು ಹುಚ್ಚರಂತೆ ಮಾತಾಡುತ್ತಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸೊದ್ರಲ್ಲಿ ಕಾಂಗ್ರೆಸ್ ನಂಬರ್ ಒನ್ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು. ಕಳೆದ ಚುನಾ ವಣೆಯಲ್ಲಿ ಬಿಜೆಪಿಗೆ ಸೋಲಾಗಿರುವುದು ಕಾರ್ಯಕರ್ತರಿಂದಲ್ಲ.
ಆಡಳಿತದ ಗಂಧವೇ ಗೊತ್ತಿಲ್ಲದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ತಂತ್ರಗಾರಿಕೆ ಮೂಲಕ ಸುಳ್ಳು ಭರವಸೆ ನೀಡಿ, ಜನರಿಗೆ ಮೋಸ ಮಾಡಿದ್ದರಿಂದ ಕಾಂಗ್ರೆಸ್ ಮೋಸದಾಟಕ್ಕೆ ಪಕ್ಷ ಸೋತಿದೆ, ಎಂದು ದೂರಿದರು.
ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕೇಂದ್ರದಿಂದ 1 ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡಿದರೂ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.
ಚುನಾವಣೆಯಲ್ಲಿ ಸೋತಿರಬಹುದು. ಆದರೆ ಕಾರ್ಯಕರ್ತರು ಸೋತಿಲ್ಲ. ಯಾರಲ್ಲೂ ಸೋಲಿನ ಭಾವನೆಗಳು ಬರಬಾರದು. ಇದು 25 ವರ್ಷಗಳು ಹಿಂದಕ್ಕೆ ನಮ್ಮನ್ನು ತಳ್ಳುತ್ತದೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸೋಲಿನ ಬಗ್ಗೆ ಪರಾಮರ್ಶೆ ನಡೆದ ಸಂದರ್ಭದಲ್ಲಿ ಅನೇಕರು ತಮ್ಮದೇ ವ್ಯಾಖ್ಯಾನ ಮಾಡಿದರು. ಈ ಸಂದರ್ಭದಲ್ಲಿ ನಮ್ಮವರೇ ನನ್ನನ್ನು ಸೋಲಿಸಿದರು.