ಸುದ್ದಿವಿಜಯ, ಜಗಳೂರು: ಗುತ್ತಿದುರ್ಗ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರು ಪೂರೈಕೆ ನೆಪದಲ್ಲಿ ಸುಮಾರು 10 ಲಕ್ಷ ರೂ ಹಣ ದುರುಪಯೋಗ ಮಾಡಲಾಗಿದೆ ಎಂದು ಮಾಜಿ ಗ್ರಾ.ಪಂ ಸದಸ್ಯ ಚಿಕ್ಕ ಅರಕೆರೆ ನೀಲಪ್ಪ ಆಪಾಧಿಸಿದ್ದಾರೆ.
ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, 2018ರಲ್ಲಿ ಮಾಜಿ ಗ್ರಾ.ಪಂ ಸದಸ್ಯೆ ವೀಣಾ ಅವರ ಪತಿ ಚಿಕ್ಕ ಅರಕೆರೆ ಶಿವಕುಮಾರ್ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದರು.
ಆದರೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸುಮಾರು 420 ಟ್ಯಾಂಕರ್ ಲೋಡ್ ಗಳ ಪೂರೈಕೆ ಮಾಡಿರುವುದಾಗಿ ಸುಮಾರು 10 ಲಕ್ಷ ಹಣವನ್ನು ಪಡೆದು ವಂಚನೆ ಮಾಡಿದ್ದಾನೆ ಎಂದು ದೂರಿದರು.
10 ಲಕ್ಷ ಹಣ ಪಡೆದಿದ್ದಲ್ಲದೇ ಇನ್ನು 9.50 ಲಕ್ಷ ರೂ ಹಣ ಬಾಕಿ ಬರಬೇಕಾಗಿದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಹಣವನ್ನು ನೀಡದೇ ತಡೆ ಹಿಡಿಯಬೇಕು ಎಂದು ಒತ್ತಾಯಿಸಿದರು.
ದುರಂತವೆಂದರೆ ಆಗಿನ ಪಿಡಿಒಗಳಾಗಿದ್ದ ಪ್ರದೀಪ್ ಮತ್ತು ಬಸವರಾಜಪ್ಪ ಇಬ್ಬರ ಸಹಿಗಳನ್ನು ಒಂದೇ ದಿನ ಮಾಡಿಸಿದ್ದಾರೆ. ಅಧ್ಯಕ್ಷೆ ಕವಿತಾ ಮತ್ತು ಶೇಖರಪ್ಪ ಸಹಿಗಳನ್ನು ಇಬ್ಬರು ಅಧ್ಯಕ್ಷರು ಒಮ್ಮಗೆ ಸಹಿ ಮಾಡಿಸಿರುವುದು ಎಷ್ಟು ಸರಿ? ಇದೊಂದು ನಕಲಿ ಸಹಿ ಮಾಡಿ ಸರ್ಕಾರದ ಲಕ್ಷಾಂತರ ರೂಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.ಈಗಾಗಲೇ ಈ ಪ್ರಕರಣವನ್ನು ಲೋಕಯುಕ್ತರಿಗೂ ದೂರು ನೀಡಲಾಗಿದೆ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಸದಸ್ಯ ಮಂಜಪ್ಪ ಇದ್ದರು