ಸುದ್ದಿವಿಜಯ, ಜಗಳೂರು: ವೈದ್ಯರು ರೋಗಿಗಳ ರೋಗವಾಸಿ ಮಾಡಿದರೆ ಪೌರಕಾರ್ಮಿಕರು ಸಮಾಜದಲ್ಲಿರುವ ರೋಗಾಣುಗಳನ್ನು ಸ್ವಚ್ಛಗೊಳಿಸುವ ವೈದ್ಯರಿದ್ದಂತೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ಪಪಂ ವತಿಯಿಂದ ಸೋಮವಾರ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಪೌರಕಾರ್ಮಿಕರ ಪಾದ ಪೂಜೆ ಮಾಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಅವರು ರಾಜ್ಯದ 57 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಲು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ನನ್ನ ಕ್ಷೇತ್ರದಲ್ಲಿನ ಪೌರ ಕಾರ್ಮಿಕರಿಗೆ ಗೃಹಭಾಗ್ಯದ ಅಡಿ ನಿವೇಶನ ನೀಡಿದ್ದೇನೆ. ವಿಶೇಷ ಭ್ಯತೆಯ ಜೊತೆಗೆ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಅವರ ಆರೋಗ್ಯ ಮಟ್ಟವನ್ನು ಸುಧಾರಿಸುವ ಕೆಲಸ ಮಾಡುತ್ತಿದ್ದೇನೆ.
ತಾತ್ಕಲಿಕ ಪೌರಕಾರ್ಮಿಕರನ್ನು ಹಂತ ಹಂತವಾಗಿ ಖಾಯಂಗೊಳಿಸುತ್ತೇವೆ. ಪಟ್ಟಣವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ನಿರ್ಲಕ್ಷ್ಯ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ ಮಾತನಾಡಿ, ಪಟ್ಟಣ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಆರೋಗ್ಯ ಕಾಪಾಡಲು ನಾವು ಬದ್ಧರಾಗಿದ್ದೇವೆ. ಕಾರ್ಮಿಕರು ಆರೋಗ್ಯದ ಕಡೆ ಹೆಚ್ಚಿನ ಗಮನಹಿಸಬೇಕು ಎಂದು ಸಲಹೆ ನೀಡಿದರು.
ಪಪಂ ಸದಸ್ಯ ಆರ್.ತಿಪ್ಪೇಸ್ವಾಮಿ ಮಾತನಾಡಿ, ಪೌರಕಾರ್ಮಿಕರು ಪಟ್ಟಣದ ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ದಯಮಾಡಿ ನಿಮ್ಮ ಕರ್ತವ್ಯವವನ್ನು ನೀವು ಪಾಲಿಸಬೇಕು. ಬೇಜಾವಾಬ್ದಾರಿ ನಡೆ ಸಲ್ಲದು ಎಂದು ಖಾರವಾಗಿ ಬುದ್ಧಿಮಾತು ಹೇಳಿದರು.
ಈ ವೇಳೆ ತಾಲೂಕು ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ 10 ಸಾವಿರ ರೂಗಳನ್ನು ಪೌರಕಾರ್ಮಿಕರ ಆರೋಗ್ಯ ತಪಾಸಣೆಗೆ ಸಹಾಯಧನ ನೀಡಿದರು.
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷರಾದ ಸಿ.ವಿಶಾಲಾಕ್ಷಿ ಓಬಳೇಶ್, ಬಿ.ಮಹೇಶ್ವರಪ್ಪ, ಟಿಎಚ್ಒ ಜಿ.ಓ. ನಾಗರಾಜ್, ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ, ಉಪಾಧ್ಯಕ್ಷೆ ಎ.ನಿರ್ಮಲಾಕುಮಾರಿ ಹನುಮಂತಪ್ಪ, ಸದಸ್ಯರಾದ ಆರ್.ತಿಪ್ಪೇಸ್ವಾಮಿ, ಎಸ್.ಸಿದ್ದಪ್ಪ, ಲಲಿತಾಶಿವಣ್ಣ, ಮಂಜಮ್ಮ, ಲೋಕಮ್ಮ, ಎನ್.ಮಹಮದ್ ಅಲಿ, ಶಕೀಲ್ ಅಹಮದ್, ಲುಕ್ಮಾನ್ ಉಲ್ಲಾಖಾನ್, ನಜರತ್ ಉನ್ನೀಸಾ ಶಫಿವುಲ್ಲಾ, ಪೂಜಾರ್ ಸಿದ್ದಪ್ಪ ಪಪಂ ಆರೋಗ್ಯಾಧಿಕಾರಿ ಕಿಫಾಯತ್ ಅಹಮ್ಮದ್, ಎಂಜಿನಯರ್ ಶ್ರುತಿ ಸೇರಿದಂತೆ ಅನೇಕ ಸದಸ್ಯರು ಇದ್ದರು.