ಸುದ್ದಿವಿಜಯ, ದಾವಣಗೆರೆ: ಹಿಂಗಾರಿಯ ಪ್ರಮುಖ ದ್ವಿದಳ ದಾನ್ಯ ಬೆಳೆಯಾಗಿರುವ ಕಡಲೆಯಲ್ಲಿ ವಿಶೇಷ ತಳಿಯಾಗಿರುವ ಜಾಕಿ 9218, ಜೆಜಿ 14 ಬೀಜಗಳನ್ನು ಬಿತ್ತನೆ ಮಾಡಿದರೆ ರೈತರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ.ಬಿ.ಓ.ಮಲ್ಲಿಕಾರ್ಜುನ ರೈತರಿಗೆ ಸಲಹೆ ನೀಡಿದರು.
ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಗುಚ್ಛ ಗ್ರಾಮಗಳ 50 ರೈತರಿಗೆ ಕಡಲೆ ಬೆಳೆಗೆ ಮುಂಚೂಣಿ ಪ್ರಾತ್ಯಕ್ಷತೆ ಕಾರ್ಯಕ್ರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕಡಲೆಯಲ್ಲಿ ಅಧಿಕ ಇಳುವರಿ ಕೊಡುವ ತಳಿಗಳಾದ ಜಾಕಿ 9218, ಜೆ ಜಿ 14 , ಪ್ರತಿ ಎಕರೆಗೆ 25 ಕೆಜಿ ಬೀಜ, ಏಕಕಾಲದಲ್ಲಿ ಗೊಬ್ಬರ ಮತ್ತು ಬೀಜವನ್ನು ಬಿತ್ತುವ ಕೂರಿಗೆ ಮುಖಾಂತರ ಜೈವಿಕ ಗೊಬ್ಬರಗಳಿಂದ ಬಿಜೋಪಚಾರ ಮಾಡುವ ಪದ್ಧತಿ ಪ್ರತ್ಯಕ್ಷತೆಯನ್ನು ಅವರು ರೈತರಿಗೆ ತೋರಿಸಿಕೊಟ್ಟರು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಕೇಂದ್ರದ ಮುಖ್ಯಸ್ಥರಾದ ಡಾ. ದೇವರಾಜ್ ಟಿಎನ್ ಮಾತನಾಡಿ, ವಿಜ್ಞಾನಿಗಳು ಹೇಳಿದ ನವೀನ ತಾಂತ್ರಿಕತೆಗಳನ್ನು ಬಳಸಿಕೊಂಡು ಬೆಳೆಗಳನ್ನು ಬೆಳೆದರೆ ರೈತರು ಹೆಚ್ಚಿನ ಇಳುವರಿ ಪಡೆಯಬಹುದು. ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡಿದರೆ ರೋಗಬಾಧೆ ಕಾಣಿಸಿಕೊಳ್ಳು ಪ್ರಮಾಣ ಕಡಿಮೆಯಾಗುತ್ತದೆ ಎಂದು ರೈತರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಬಿಸ್ತುವಳ್ಳಿ ನಾಗರಾಜ್, ಎಸ್.ಎಂ. ಸೋಮನಗೌಡ, ಚೇತನ್ ಕುಮಾರ್, ಆದರ್ಶ್, ಮನೋಜ್ ಹಾಗೂ ಪವನ್ ಪಾಟೀಲ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ರೈತ ಬಾಂಧವರಿಗೂ ಜೈವಿಕ ಗೊಬ್ಬರಗಳಾದ ರೈಸೋಬಿಯಂ, ರಂಜಕ್ ಕರಗಿಸುವ ಗೊಬ್ಬರ ಹಾಗೂ ಜೈವಿಕ ಪೀಡೆನಾಶಕ ಟ್ರೈಕೋಡರ್ಮ ನೀಡಿ ಬೀಜೋಪಚಾರ ಮಾಡುವ ವಿಧಾನ ತಿಳಿಸಿಕೊಡಲಾಯಿತು.