ಸುದ್ದಿವಿಜಯ, ದಾವಣಗೆರೆ: ತಾಲೂಕಿನ ತಾಯಿಟೋಣಿ ಗ್ರಾಮದ ವಸತಿ ವ್ಯವಸ್ಥೆ ಜಾಗವಿಲ್ಲದ ಕಾರಣ ಇರುವ ಕಣಗಳಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಿ ಎಂದು ಮಾದಿಗ ಸಮುದಾಯದ ಮುಖಂಡರು ಅಪರ ಜಿಲ್ಲಾಧಿಕಾರಿ ಸಿ.ಎನ್.ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.
ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಗೆ ಬುಧವಾರ ಭೇಟಿ ನೀಡಿ ಅಪರ ಜಿಲ್ಲಾಧಿಕಾರಿ ಸಿ.ಎನ್.ಲೋಕೇಶ್ ಅವರಿಗೆ ಮನವಿ ಪತ್ರ ನೀಡಿದರು.
ಗ್ರಾಮದಲ್ಲಿ ದಲಿತ ಮಾದಿಗ ಜನಾಂಗದವರು ಸುಮಾರು 20 ರಿಂದ 30 ಮನೆಗಳಿವೆ ಸ್ವಾತಂತ್ರ್ಯ ಬಂದು ಸುಮಾರು 40 ರಿಂದ 50 ವರ್ಷಗಳು ಕಳೆದರೂ ಇಲ್ಲಿಯವರೆಗೂ ಒಂದು ಮನೆಯಲ್ಲಿ.
4-5 ಕುಟುಂಬಗಳು ವಾಸ ಮಾಡುವುದಕ್ಕೆ ಬಹಳ ಕಷ್ಟವಾಗಿದೆ. ನಮ್ಮ ಮಾದಿಗ ಜನಾಂಗದವರಿಗೆ ಬೇರೆ ಕಡೆ ಮನೆಗೆ ಕಟ್ಟಿ ಕೊಳ್ಳಲು ಜಾಗವಿರುವುದಿಲ್ಲ. ಸುಮಾರು 70 ರಿಂದ 80 ವರ್ಷಗಳಿಂದ ಸ್ವಾಧೀನದಲ್ಲಿರುವ ತಮ್ಮ ಗ್ರಾಮದ ಹೊರವಲಯದಲ್ಲಿ ನಮ್ಮ ಪೂರ್ವಜರು ಒಕ್ಕಲುತನ ಮಾಡಲು ಕಣಗಳಿವೆ.
ಆದರೆ ಕಣಗಳು ನಮ್ಮ ಹೆಸರಿನಲ್ಲಿ ಇಲ್ಲ. ಆದ್ದರಿಂದ ಆ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಅನುಮತಿ ಕೊಡಬೇಕೆಂದು ಡಾ.ಬಿ.ಆರ್ ಸ್ವಾಭಿಮಾನಿ ಸೇನೆ ವತಿಯಿಂದ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ .ಬಿ.ಆರ್ ಸ್ವಾಭಿಮಾನಿ ಸೇನೆ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಕೆ.ರಾಮಚಂದ್ರ. ಪದಾಧಿಕಾರಿಗಳಾದ ತಿಪ್ಪೇಸ್ವಾಮಿ. ವೃಷಭೇಂದ್ರ ಬಾಬು.ರಾಘವೇಂದ್ರ.ಜಿಲ್ಲಾ ದಲಿತ ಮುಖಂಡ ಹೆಗ್ಗೆರೆ ರಂಗಪ್ಪ. ಗ್ರಾಮಸ್ಥರಾದ ಟಿ.ಆರ್ ಬಾಬು ರಾಜೇಂದ್ರ ಪ್ರಸಾದ್. ಮಂಜಣ್ಣ. ನಿವೃತ್ತ ಪೆÇಲೀಸ್ ಬೋರಣ್ಣ.ಪಿ ತಿಪ್ಪೇಸ್ವಾಮಿ. ಟಿ.ಜಿ ಹನುಮಂತ್ ರೆಡ್ಡಿ.ಅರವಿಂದ್ ಪಾಟೀಲ್. ಲೋಕೇಶ್. ಪ್ರಹಲ್ಲಾದ್ ರಡ್ಡಿ.ರುದ್ರಮುನಿ.ಯಲ್ಲಪ್ಪ. ವೀರಭದ್ರೇಶ್.ಬಾಬು. ಗಂಗಣ್ಣ. ಚಂದ್ರಪ್ಪ.ಲಕ್ಷ್ಮಣ ಸ್ವಾಮಿ.ಸೇರಿದಂತೆ ಗ್ರಾಮಸ್ಥರು ಇದ್ದರು.