ಕಾಂಗ್ರೆಸ್ ಸರಕಾರದಲ್ಲಿ ರಾಜ್ಯದಲ್ಲಿ ಭೀಕರ ಬರ, ಬಿಜೆಪಿ ಸರಕಾರದಲ್ಲಿ ರಾಜ್ಯ ಸುಭೀಕ್ಷ-ಶಾಸಕ ಎಂ.ಚಂದ್ರಪ್ಪ !

Suddivijaya
Suddivijaya October 23, 2022
Updated 2022/10/23 at 12:55 PM

ಸುದ್ದಿವಿಜಯ, ಭರಮಸಾಗರ: ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ವ್ಯಾಪಕ ಮಳೆಯಾಗಿದ್ದು ರಾಜ್ಯದ ಜನರು ಸುಭೀಕ್ಷವಾಗಿದ್ದಾರೆ. ಆದರೆ ಕಾಂಗ್ರೆಸ್ ಸರಕಾರ ಇದ್ದಾಗ ನಾಲ್ಕು ವರ್ಷ ಬರ ಆವರಿಸಿತ್ತು ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು

ಭರಮಸಾಗರ ಹೋಬಳಿಯ ಕಾಲಗೆರೆ ಗ್ರಾಮದ ಕೆರೆ ಕೋಡಿಬಿದ್ದ ಹಿನ್ನೆಲೆಯಲ್ಲಿ ಭಾನುವಾರ ಬಾಗೀನ ಅರ್ಪಿಸಿದ ನಂತರ ಮಾತನಾಡಿದರು. ನನ್ನದು 493 ಹಳ್ಳಿಗಳಿರುವ ಕ್ಷೇತ್ರ. ಶಿವನಿ ಅಜ್ಜಂಪುರದ ಗಡಿ ಇಂದ ಚಿತ್ರದುರ್ಗ ಜಿಲ್ಲೆಯ ನೆಲ್ಲಿಕಟ್ಟೆ ಗ್ರಾಮದವರೆಗೂ ನಾನು 3000 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿ ರಸ್ತೆ, ನೀರು, ಚರಂಡಿ, ಕೆರೆಗಳ ಅಭಿವೃದ್ಧಿ ಮಾಡಿದ್ದೇನೆ. ಆದರೆ ಹಿಂದಿನ ಸರಕಾರದಲ್ಲಿ ಏನು ಅಭಿವೃದ್ಧಿ ಆಗಲೇ ಇಲ್ಲ. ಬರದಿಂದ ಜನ ತತ್ತಿರಿಸಿ ಹೋದರು.

ಅಡಕೆ ತೋಟಗಳು ಒಣಗಿದವು. ಹೆಣ್ಣುಮಕ್ಕಳು ಬಂಗಾರ ಮಾರಿ ಬೋರ್‍ವೆಲ್ ಹಾಕಿಸಿದರೂ ನೀರು ಬರಲಿಲ್ಲ. ಆದರೆ ಬಿ.ಎಸ್. ಯಡಿಯೂರಪ್ಪ ಸಿಎಂ ಆದ ಮೇಲೆ ಮತ್ತು ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆದ ಮೇಲೆ ಉತ್ತಮ ಮಳೆಯಾಗಿದೆ. 565 ಕೋಟಿ ವೆಚ್ಚದ 43 ಕೆರೆ ಏತ ನೀರಾವರಿ ಯೋಜನೆಯನ್ನು ತರಳಬಾಳು ಶ್ರೀಗಳ ನೇತೃತ್ವದಲ್ಲಿ ತಂದ ಫಲವಾಗಿ ಈ ಭಾಗದಲ್ಲಿಅಂತರ್ಜಲ ಮಟ್ಟ ಹೆಚ್ಚಾಗಿದ್ದು ನೀರು ಹರಿಯುವುದನ್ನು ನೋಡಿದರೆ ಉಲ್ಲಾಸವಾಗುತ್ತದೆ ಎಂದರು.

  ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಲಗೆರೆ ಗ್ರಾಮದ ಕೆರೆ ಭಾರಿ ಮಳೆಯಿಂದಾಗಿ ಭರ್ತಿಯಾಗಿದ್ದು ಕೆರೆಗೆ ಶಾಸಕ ಎಂ.ಚಂದ್ರಪ್ಪ ಬಾಗಿನ ಅರ್ಪಿಸಿದರು.
 ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಲಗೆರೆ ಗ್ರಾಮದ ಕೆರೆ ಭಾರಿ ಮಳೆಯಿಂದಾಗಿ ಭರ್ತಿಯಾಗಿದ್ದು ಕೆರೆಗೆ ಶಾಸಕ ಎಂ.ಚಂದ್ರಪ್ಪ ಬಾಗಿನ ಅರ್ಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ನಂತರ 130 ಕೋಟಿ ಜನ ಸಂಖ್ಯೆಯಿರುವ ಭಾರತದಲ್ಲಿ 90 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ ಯೋಜನೆ ಜಾರಿಗೆ ತಂದಿದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಇದು ಸಹಾಯವಾಗುತ್ತಿದೆ.

ಯಾವ ದೇಶದಲ್ಲಿ ಈ ವ್ಯವಸ್ಥೆಯಿಲ್ಲ. ಇದೇ ಬಿಜೆಪಿಯ ಸಾಮಾಜಿಕ ನ್ಯಾಯ. ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದು, ಮುಂದಿನ ಚುನಾವಣೆಯಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಿದ ವ್ಯಕ್ತಿಗೆ ವೋಟ್ ಹಾಕಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗುರು ಶಾಂತಣ್ಣ, ಭರಮಸಾಗರ ಬಿಜೆಪಿ ಮಂಡಲದ ಅಧ್ಯಕ್ಷರಾದ ಶೈಲೇಶ್, ಶೇಖರಣ್ಣ, ಭೀಮಣ್ಣ, ಮಂಜಣ್ಣ, ನಾಗರಾಜ್, ಕೆಂಗಣ್ಣ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು,

Share this Article
Leave a comment

Leave a Reply

Your email address will not be published. Required fields are marked *

error: Content is protected !!