ಸುದ್ದಿ ವಿಜಯ, ಜಗಳೂರು: ಸಾರ್ವಜನಿಕರು ವಿದ್ಯುತ್ ಕಳ್ಳತನ ಮಾಡಿದರೆ ಕಾನೂನಿನ ರೀತಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾಗುತ್ತದೆ ಎಂದು ಜಿಲ್ಲಾ ಬೆಸ್ಕಾಂ ಜಾಗೃತ ದಳದ ಸಹಾಯಕ ಕಾರ್ಯನಿರ್ವಹಕರ ಎಂಜಿನಿಯರ್ ಎಚ್.ವೈ. ಪ್ರಶಾಂತ್ ಎಚ್ಚರಿಕೆ ನೀಡಿದರು.
ಸೋಮವಾರ ನಗರದ ಕೆಇಬಿ ವೃತ್ತದ ಗಣೇಶ ದೇವಸ್ಥಾನದ ಬಳಿ ಸಾರ್ವಜನಿಕರಿಗೆ ವಿದ್ಯುತ್ ಬಳಕೆ ಮತ್ತು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯುತ್ ಕಳ್ಳತನ ಮತ್ತು ದುರುಉಪಯೋಗ ವಾದರೆ ಸಾರ್ವಜನಿಕರು ದುಪ್ಪಟ್ಟು ದಂಡದ ಜೊತೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಪ್ರತಿದಿನ ವಿದ್ಯುತ್ ಬಳಕೆ ಹೆಚ್ಚಾಗುತ್ತಿದ್ದು ಜನರು ಮಿತವಾಗಿ ಬಳಸಬೇಕು ಹೀಗಾಗಿ ವಿದ್ಯುತ್ ಉಳಿತಾಯವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ನಾಗರಿಕೆರಿಗೆ ಅರಿವು ಮೂಡಿಸಿದರು.
ಈ ವೇಳೆ ಜಗಳೂರು ವಿಭಾಗದ ಸಹಾಯಕ ಕಾರ್ಯನಿರ್ವಹಕ ಎಂಜಿನಯರ್ ಗಿರೀಶ ನಾಯ್ಕ, ಮಾತನಾಡಿ, ಬೇಸಿಗೆ ಅವಕಯಲ್ಲಿ ಅಕವಾಗಿ ವಿದ್ಯುತ್ ಬಳಕೆಯಾಗುತ್ತದೆ. ನಿಮ್ಮ ಮನೆ ಮತ್ತು ಹೊಲಗಳಲ್ಲಿ ವ್ಯರ್ಥವಾಗಿ ವಿದ್ಯುತ್ ಪೋಲಾಗದಂತೆ ತಡೆಗಟ್ಟಲು ಜಾಗೃತವಹಿಸಿ ಎಂದು ಮನವಿ ಮಾಡಿದರು. ಈ ವೇಳೆ ಜಾಗೃತದಳದ ಪಿಎಸ್‍ಐ ಜೆ.ಇ. ಭಾರತಿ, ಸೇರಿದಂತೆ ಜಗಳೂರು ವಿಭಾಗದ ಬೆಸ್ಕಾಂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.