ಸುದ್ದಿವಿಜಯ ಜಗಳೂರು.
ಗುಣಮಟ್ಟದ ಶಿಕ್ಷಣ ಇರುವ ಕಡೆ ಉತ್ತಮ ಫಲಿತಾಂಶ ಲಭಿಸುತ್ತದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಿ.ಡಿ ಹಾಲೇಶಪ್ಪ ಹೇಳಿದರು.
ತಾಲೂಕಿನ ಬಿಳಿಚೋಡು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರೌಢಶಾಲಾ ಸಹ ಶಿಕ್ಷಕರ ಒಂದು ದಿನದ ಹಿಂದಿ ಕಾರ್ಯಗಾರ ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಠಿಣ ಪರಿಶ್ರಮದಿಂದ ಓದಿದದರೆ ಪರೀಕ್ಷೆಗಳಲ್ಲಿ ಯಾವುದೇ ಭಯ, ಆತಂಕ ಇರುವುದಿಲ್ಲ. ಓದಿದ ಪಾಠಗಳನ್ನು ರಾತ್ರಿ, ಮುಂಜಾನೆ ಮೆಲುಕು ಹಾಕುವುದರಿಂದ ನೆನಪಿನಲ್ಲಿ ಉಳಿದುಕೊಳ್ಳುತ್ತವೆ, ಆಗ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಸಹಕಾರಿಯಾಗುತ್ತದೆ, ಆದರೆ ಕೆಲ ವಿದ್ಯಾರ್ಥಿಗಳು ಆರಂಭದಿಂದಲೂ ಓದಿನ ಕಡೆ ಗಮನಹರಿಸದೇ ಪರೀಕ್ಷೆ ಇನ್ನೇನು ಕೆಲವೇ ದಿನಗಳಿರುವಾಗ ಪುಸ್ತಕ ಕೈಯಲ್ಲಿಡಿಯುತ್ತಾರೆ ಆಗ ಉತ್ತಮ ಫಲಿತಾಂಶ ನಿರೀಕ್ಷೆ ಮಾಡುವುದು ಅಸಾದ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್ ಎಸ್ ಎಲ್ ಪರೀಕ್ಷೆಯಲ್ಲಿ ಜಗಳೂರು ಮೂರು ಬಾರಿಯೂ ಜಿಲ್ಲೆಯಲ್ಲಿ ಪ್ರಥಮಸ್ಥಾನ ಪಡೆಯುತ್ತಾ ಸ್ಥಾನವನ್ನು ಕಾಯ್ದುಕೊಂಡಿದೆ. ಈ ವರ್ಷವೂ ಪ್ರಥಮ ಸ್ಥಾನ ಬರುವಂತೆ ಶಿಕ್ಷಕರಿಗೆ ಕರೆ ನೀಡಿದರು.
ಮಕ್ಕಳಿಗೆ ವಿಶೇಷ ತರಗತಿ ರಸಪ್ರಶ್ನೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪಾಸಿಂಗ್ ಪ್ಯಾಕೇಜ್ ಮುಂತಾದವುಗಳ ಮೂಲಕ ಮಕ್ಕಳನ್ನು ಹೆಚ್ಚಿನ ಅಭ್ಯಾಸದಲ್ಲಿ ತೊಡಗಿಸುವಂತೆ ಸೂಚಿಸಿದರು.
ನಂತರ ಮಧ್ಯಾಹ್ನದ ವೇಳೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ ಉಮಾದೇವಿಯವರು ತರಬೇತಿಯನ್ನು ಪರಿಶೀಲಿಸಿ ಕಾರ್ಯಗಾರದ ಶಿಕ್ಷಕರನ್ನು ಕುರಿತು ಮಕ್ಕಳನ್ನು ಹೆಚ್ಚಿನ ಕಲಿಕೆಯಲ್ಲಿ ತೊಡಗಿಸಿ ವಾರ್ಷಿಕ ಪರೀಕ್ಷೆಯಲ್ಲಿ ಮಕ್ಕಳು ಉತ್ತಮವಾದ ಫಲಿತಾಂಶವನ್ನು ಪಡೆಯುವಂತೆ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಶಿಕ್ಷಕರಿಗೆ ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಸಹ ಶಿಕ್ಷಕಿ ಕೆ.ಎಂ ವೀರಮ್ಮ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಹನುಮಂತಪ್ಪ, ಮುಸ್ಟೂರು ಶಾಲೆಯ ಮುಖ್ಯ ಶಿಕ್ಷಕ ದಿವಾಕರ್, ಮಾರುತಿ ಗ್ರಾಮಾಂತರ ಪ್ರೌಢ ಶಾಲೆ ಸೊಕ್ಕೆ ಮುಖ್ಯ ಶಿಕ್ಷಕ ಕುಮಾರ್ ನಾಯಕ್, ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಚ್ ಬಸವರಾಜ್, ಹಿಂದಿ ಕ್ಲಬ್ ನ ಕಾರ್ಯದರ್ಶಿ ಶ್ರೀ ಸಿದ್ದಪ್ಪ, ಹೊಸಕೆರೆ ಪ್ರೌಢಶಾಲೆಯ ಮಹಮದ್ ಪಾಷಾ, ಶಿಕ್ಷಕಿ ರತ್ನಮಾಲ ಉಪಸ್ಥಿತರಿದ್ದರು.