ಸುದ್ದಿವಿಜಯ,ಜಗಳೂರು: ಭೈರನಾಯಕನಹಳ್ಳಿ ಮತ್ತು ಪೇಟೆಕಣ್ವಕುಪ್ಪೆ ಗ್ರಾಮಗಳಲ್ಲಿ ತುಂಬಾ ವರ್ಷಗಳಿಂದ ಅಕ್ರಮವಾಗಿ 13 ಗೂಡಂಗಡಿಗಳಲ್ಲಿ ಮದ್ಯಮಾರಾಟ ಮಾಡುತ್ತಿದ್ದು ಪೊಲೀಸರು ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ನೂರಾರು ಮಹಿಳೆಯರು ಪುರುಷರು ಮಕ್ಕಳ ಜೊತೆ ಸೋಮವಾರ ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಕುಡುಕರಿಂದ ಊರಿನಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಳ ದೌರ್ಜನ್ಯ, ಹೆಂಡತಿ ಮಕ್ಕಳ ಜಗಳವಾಗುತ್ತಿದೆ. ಅಷ್ಟೇಅಲ್ಲ ಕುಡಿದ ಅಮಲಿನಲ್ಲಿ ಕೆಲವರು ಶಾಲಾ ಶಿಕ್ಷಕರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ನಮ್ಮ ಗ್ರಾಮದಲ್ಲಿ ಶಾಂತಿಯಿಲ್ಲದೇ ಅಶಾಂತಿಗೆ ಕಾರಣವಾಗಿದ್ದು ಗ್ರಾಮದಲ್ಲಿ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯಮಾರಾಟವು ಎಗ್ಗಿಲ್ಲದೇ ನಡೆಯುತ್ತಿದೆ.
ಚಿಕ್ಕಮಕ್ಕಳಿಂದ ವೃದ್ದರವರೆಗೆ ಮದ್ಯಪಾನ ಸೇವನೆ ಜೊತೆಗೆ ಊರಿನಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಳ ದೌರ್ಜನ್ಯ, ಹೆಂಡತಿ ಮಕ್ಕಳ ಜಗಳವಾಗುತ್ತಿದೆ. ಅಷ್ಟೇಅಲ್ಲ ಕುಡಿದ ಅಮಲಿನಲ್ಲಿ ಕೆಲವರು ಶಾಲಾ ಶಿಕ್ಷಕರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ನಮ್ಮ ಗ್ರಾಮದಲ್ಲಿ ಶಾಂತಿಯಿಲ್ಲದೇ ಅಶಾಂತಿಗೆ ಕಾರಣವಾಗಿದ್ದು ಗ್ರಾಮದಲ್ಲಿ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಂಬಂಧ ದಾವಣಗೆರೆ ಜಿಲ್ಲೆಯ ಅಬಕಾರಿ ಕಚೇರಿಗೂ ತೆರೆಳಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಹಿಳೆಯರಾದ ಮಂಜಮ್ಮ, ಹನುಮಕ್ಕ, ಶಾಂತಮ್ಮ, ನಾಗರಾಜ್ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದರು.
ಅಬಕಾರಿ ಇಲಾಖೆ ಪೊಲೀಸರು ಇಷ್ಟೆಲ್ಲಾ ನಡೆದರೂ ಗೊತ್ತಿದ್ದು ಗೊತ್ತಿಲ್ಲದಂತೆ ಜಾಣ ಮೌನವಹಿಸಿದ್ದಾರೆ. ಗ್ರಾಮಕ್ಕೆ ಆಗಮಿಸಿ ಅಕ್ರಮ ಮದ್ಯ ಮಾರಾಟಮಾಡುವವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಸ್ತೆ ತಡೆದು ಉಗ್ರಹೋರಾಟ ಮಾಡುತ್ತೇವೆ.
ಈ ತಕ್ಷಣವೇ ದಾವಣಗೆರೆ ಅಬಕಾರಿ ಪೊಲೀಸರು ಸ್ಥಳಕ್ಕೆ ಬರುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಮನವಿ ಸ್ವೀಕರಿಸಿ ತಕ್ಷಣವೇ ಸಿಪಿಐ ಮಂಜುನಾಥ್ ಪಂಡಿತ್ ಮತ್ತು ಪಿಎಸ್‍ಐ ಮಹೇಶ್ ಹೊಸಪೇಟ ಅವರನ್ನು ಗ್ರಾಮಕ್ಕೆ ಕಳುಹಿಸಿ ಅಕ್ರಮ ಮದ್ಯಮಾರಾಟಗಾರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ನಿಲ್ಲದ ಆಕ್ರೋಶ: ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಭರವಸೆ ನೀಡಿದರೂ ಸಹ ತಣ್ಣಗಾಗದ ಪ್ರತಿಭಟನಾಕಾರರು ಸರಕಾರದ ವಿರುದ್ಧ ದಿಕ್ಕಾರ ಕೂಗಿದರು. ಆಗ ಸಿಪಿಐ ಮಂಜುನಾಥ್ ಪಂಡಿತ್ ತಕ್ಷಣವೇ ಪೊಲೀಸರನ್ನು ಗ್ರಾಮಕ್ಕೆ ಕಳುಹಿಸಿ ಮಾರಾಟಗಾರನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಭೈರನಾಯಕನಹಳ್ಳಿ ಗ್ರಾಮದ ಸರಾಯಿ ಓಬಯ್ಯ, ಮಂಜಮ್ಮ, ಪಾಲಮ್ಮ, ಹನುಮಂತಪ್ಪ, ಹನುಮಂತಪ್ಪ, ಪೇಟೆಕಣ್ವಕುಪ್ಪೆ ಗ್ರಾಮದ ರೇಣುಕಮ್ಮ, ಹನುಮಂತಪ್ಪ, ಶಿವಣ್ಣ ಇವರು ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದಾರೆ ಎಂದು ತಹಶೀಲ್ದಾರ್ ಅವರಿಗೆ ಲಿಖಿತ ದೂರು ನೀಡುವ ಮೂಲಕ ಮನವಿ ಸಲ್ಲಿಸಿದರು.