ಚುನಾವಣೆ ಹಿನ್ನೆಲೆ ಅಕ್ರಮವಾಗಿ ಸಾಗಿಸುತ್ತಿದ್ದ 391 ಲೀಟರ್ ಮದ್ಯ ವಶ

Suddivijaya
Suddivijaya April 22, 2023
Updated 2023/04/22 at 12:15 AM

ಸುದ್ದಿವಿಜಯ, ದಾವಣಗೆರೆ: ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಪ್ರತ್ಯೇಕ ಕಾರ್ಯಾಚರಣೆ ನಡೆಸಿ, ಶುಕ್ರವಾರ 3,29,571 ರೂ. ವೌಲ್ಯದ 391 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.

 

ಪ್ರತ್ಯೇಕ ಕಾರ್ಯಾಚರಣೆ ನಡೆಸಿ, ಪೊಲೀಸ್ ಅಧಿಕಾರಿಗಳು 5.22 ಲೀಟರ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು 385.805 ಲೀಟರ್ ಅಕ್ರಮ ಮದ್ಯ ಜಪ್ತು ಮಾಡಿದ್ದಾರೆ. ಅಲ್ಲದೆ, ದಾಖಲೆ ಇಲ್ಲದ 2.5 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ಜಿಲ್ಲಾದ್ಯಂತ ತೆರೆದಿರುವ ನಾನಾ ಚೆಕ್‌ಪೋಸ್ಟ್‌ಗಳಲ್ಲಿ ಇದುವರೆಗೆ 92,11,648 ರೂ. ನಗದು, 2,35,68,475 ರೂ. ವೌಲ್ಯದ 20,186.12 ಲೀಟರ್ ಮದ್ಯ, 71,610 ರೂ. ವೌಲ್ಯದ 3.853 ಕೆಜಿ ಮಾದಕ ವಸ್ತು ಹಾಗೂ 54,26,735 ವೌಲ್ಯದ ಇತರೆ ವಸ್ತುಗಳು ಸೇರಿ ಒಟ್ಟು 3.82 ಕೋಟಿಯಷ್ಟು ನಗದು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!