ಸುದ್ದಿವಿಜಯ, ಜಗಳೂರು:(ವಿಶೇಷ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹುಟ್ಟುಹಾಕಿದ ಆಮ್ ಆದ್ಮಿ ಪಕ್ಷ (ಎಎಪಿ)ಜಗಳೂರು ಕ್ಷೇತ್ರದಲ್ಲಿ ಆಫ್ ಆಗಿದೆ.
ಒಂದು ತಿಂಗಳ ಹಿಂದೆ ಕ್ಷೇತ್ರದ ಆಪ್ ಪಕ್ಷದಿಂದ ಅಭ್ಯರ್ಥಿ ಗೋವಿಂದರಾಜು ಎಂದು ಕೇಂದ್ರದ ಮತ್ತು ರಾಜ್ಯದ ವರಿಷ್ಠರು ಘೋಷಣೆ ಮಾಡಿದ್ದರು.
ಆದರೆ ಸಮನ್ವಯ ಕೊರತೆಯಿಂದ ಗೋವಿಂದರಾಜು ಅವರು ಪಕ್ಷದ ವರಿಷ್ಠ ಜೊತೆ ಅಂತರ ಕಾಯ್ದುಕೊಂಡಿದ್ದರಿಂದ ಬೇಸರಗೊಂಡು ಎಎಪಿಗೆ ಪಕ್ಷದಿಂದ ನಾಮಪತ್ರವನ್ನು ಸಲ್ಲಿಸಿದೇ ಚುನಾವಣಾ ರಣರಂಗದಿಂದ ಹಿಂದೆ ಸರಿದಿದ್ದು, ಕ್ಷೇತ್ರದಲ್ಲಿ ಎಎಪಿ ನೆಲೆ ನೆಲಕಚ್ಚಿದಂತಾಗಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ ಚುಗುರುವ ಮುನ್ನವೇ ಮೊಳೆಕೆ ಮಿರಿದಂತಾಗಿದೆ. ಕಳೆದ ಆರು ತಿಂಗಳಿದ ಪಕ್ಷದ ಕಚೇರಿಯನ್ನು ಪಟ್ಟಣದಲ್ಲಿ ತೆರೆದು ಸಾವಿರಾರು ಕಾರ್ಯಕರ್ತರನ್ನು ಹುಟ್ಟು ಹಾಕಿದ್ದ ತಾಲೂಕು ಪ್ರಧಾನ ಕಾರ್ಯದರ್ಶಿ ಕಲ್ಲೇಶ್ ಮತ್ತು ತಾಲೂಕು ಅಧ್ಯಕ್ಷ ಚಿಕ್ಕಅರಕೆರೆ ನಾಗರಾಜ್ ಅವರಿಗೆ ಗೋವಿಂದರಾಜು ನಡೆಯಿಂದ ಬೇಸರಗೊಂಡಿದ್ದಾರೆ.
ಪಂಜಾಬ್, ಗುಜಾರತ್ ವಿಧಾನಸಭೆ ಚುನಾವಣೆ ವೇಳೆ ಶೇ.16ಕ್ಕಿಂತಲೂ ಹೆಚ್ಚು ಮತಪಡೆದುಕೊಂಡು ರಾಷ್ಟ್ರೀಯ ಪಕ್ಷದ ಸ್ಥಾನಮಾನ ಗಿಟ್ಟಿಸಿಕೊಂಡಿರುವ ಎಎಪಿಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಹಿನ್ನಡೆಯಾಗಿದೆ ಎಂಬುದಕ್ಕೆ ಪಕ್ಷದಲ್ಲಿ ಅಶಿಸ್ತು ಮತ್ತು ಸಮನ್ವಯದ ಕೊರತೆಯೇ ಕಾರಣ ಎಂಬುದಕ್ಕೆ ಜಗಳೂರು ಕ್ಷೇತ್ರದ ಅಭ್ಯರ್ಥಿ ಗೋವಿಂದರಾಜು ನಾಮಪತ್ರ ಸಲ್ಲಿಸದೇ ಇರುವುದು ಕಾರಣವಾಗಿದೆ.
ದಿಢೀರನೇ ನಿರ್ಧಾರ ಬದಲಿಸಿದ್ದು ಏಕೆ?
ಚುನಾವಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಕೆಗೆ ಕೇವಲ ಎರಡು ದಿನ ಇರುವಾಗಲೇ ಏ.18 ರಂದು ಗೋವಿಂದರಾಜು ಅವರು ನಾಮಪತ್ರಸಲ್ಲಿಸುವುದಿಲ್ಲ ಎಂದು ಪಕ್ಷದ ಮುಖಂಡರಿಗೆ, ನಾಯಕರಿಗೆ ತಿಳಿಸಿದ್ದಾರೆ.
ಇದರಿಂದ ಮತ್ತೊಬ್ಬ ಅಭ್ಯರ್ಥಿ ನಾಮಮತ್ರ ಸಲ್ಲಿಸಲು ಸಮಯವಿಲ್ಲದಂತೆ ಮಾಡಿದ್ದು ಪಕ್ಷದ ಕಾರ್ಯಕರ್ತರಿಗೆ ಅಸಮಾಧಾನಕ್ಕೆ ಕಾರಣವಗಿದೆ ಎಂದು ಕಾರ್ಯಕರ್ತರು, ಮುಖಂಡರು ದಿಢೀರ್ ಬೆಳವಣಯ ಬಗ್ಗೆ ನೋವು ತೋಡಿಕೊಂಡರು.
ರಾಜ್ಯಮಟ್ಟದ ವಿರಷ್ಠರು ಗೋವಿಂದರಾಜು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಫೋನ್ ಮಾಡಿಲ್ಲ, ಪಕ್ಷದ ಬೆಳವಣಿಗೆಯ ಬಗ್ಗೆ ವಿಚಾರಿಸಿಲ್ಲ ಎಂದು ಬೇಸರಗೊಂಡು ನಾಮಪತ್ರ ಸಲ್ಲಿಸದೇ ಹಿಂದೆ ಸರಿದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.