ಸುದ್ದಿವಿಜಯ,ದಾವಣಗೆರೆ : ಪಕ್ಷೇತರ ಅಭ್ಯರ್ಥಿಯೊಬ್ಬರ ಚುನಾವಣಾ ಪ್ರಚಾರಕ್ಕೆ ಚುನಾವಣಾ ಅಧಿಕಾರಿಯೊಬ್ಬ ಅಡ್ಡಿಪಡಿಸಿ, ಬ್ಯಾನರ್ ಹರಿದು ಹಾಕಿ, ಬಾವುಟವನ್ನು ಕಿತ್ತು ಕ್ರೂರತೆ ಮೆರೆದಿರುವ ಘಟನೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸ್ಸಾಪುರ ಗ್ರಾಮದ ಬಳಿಯ ಚೆಕ್ ಪೋಸ್ಟ್ ಬಳಿ ಬುಧವಾರ ರಾತ್ರಿ ನಡೆದಿದೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸವಿತಾಬಾಯಿ ಮಲ್ಲೇಶ್ ನಾಯ್ಕ್ ಸ್ಫರ್ಧಿಸಿದ್ದು,ಬಸಾಪುರ ಗ್ರಾಮಕ್ಕೆ ಎಂದಿನಂತೆ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ. ಅಲ್ಲಿ ಚುನಾವಣಾ ಪ್ರಚಾರ ಮುಗಿಸಿ ಬರುತ್ತಿರುವಾಗ ಬಸಾಪುರ ಗ್ರಾಮದ ಚೆಕ್ ಪೋಸ್ಟ್ ಬಳಿ ಚುನಾವಣಾಧಿಕಾರಿ ದುರ್ಗಪ್ಪ ತಡೆದಿದ್ದಾರೆ.
ಸಮಯವಕಾಶ ಮುಗಿದಿದ್ದರೂ ಪ್ರಚಾರ ಮಾಡುತ್ತಿದ್ದೀರಾ ಎಂದು ಕಿರಿಕ್ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗಾದ ಅವರು ಬ್ಲೇಡ್ ನಿಂದ ಬ್ಯಾನರ್ ಹರಿದಿದ್ದಾರೆ. ಅಲ್ಲದೇ ವಾಹನ ಮೇಲಿದ್ದ ಬಾವುಟ ಕಿತ್ತಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸವಿತಾಬಾಯಿ ಚುನಾವಣಾ ಆಯೋಗ ಪ್ರಚಾರಕ್ಕೆ ರಾತ್ರಿ ಹತ್ತರತನಕ ಸಮಯವಕಾಶವಿದೆ. ಈಗ ಘಂಟೆ 9.30 ಈಗಲೇ ಏಕೆ ತಡೆ ಮಾಡುತ್ತಿದ್ದೀರಿ, ಅದು ಹೋಗಲಿ ಬ್ಯಾನರ್ ಹರಿದಿದ್ದು ಏಕೆ? ಬಾವುಟ ಕಿತ್ತಿದ್ದೇಕೆ ಎಂದು ಸವಿತಾಬಾಯಿ ಪ್ರಶ್ನಿಸಿದ್ದಾರೆ.
ಬಡವರು ಮಕ್ಕಳು ಅಂದ್ರೆ ಹೀಗೇನಾ, ಒಬ್ಬರಿಗೊಂದು, ಇನ್ನೊಬ್ಬರಿಗೊಂದು ನ್ಯಾಯ ಮಾಡುತ್ತಿದ್ದೀರಿ..ಹೆಣ್ಣಿನ ಮೇಲೆ ದರ್ಪ, ದೌರ್ಜನ್ಯ ಏಕೆ ಮಾಡುತ್ತೀರಿ. ಸಮಯವಕಾಶವಿದ್ದರೂ, ಪರ್ಮಿಷನ್ ಲೇಟರ್ ಇದ್ದರೂ, ಹೀಗೇಕೇ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಮೊದಲಿಂದಲೂ ನನಗೆ ಹೀಗೆ ದೌರ್ಜನ್ಯವಾಗುತ್ತಿದೆ..ನಮ್ಮ ನೋವು ಕೇಳೋರ್ಯಾರು, ಮೇಲಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ.
ಕೇವಲ ಒಂದು ಪಕ್ಷದಡಿ ಕೆಲಸ ಮಾಡುವವರನ್ನು ಚೆಕ್ ಪೋಸ್ಟ್ ನಲ್ಲಿ ನೇಮಿಸಲಾಗಿದೆ. ಎಲ್ಲಿದೆ ನ್ಯಾಯ ಎಂದು ಸವಿತಾಬಾಯಿ ಆಕ್ರೋಶ ವ್ಯಕ್ತಪಡಿಸಿದರು. ಇಷ್ಟೆಲ್ಲ ಆದ ಮೇಲೆ ಚುನಾವಣಾ ಅಧಿಕಾರಿ ದುಗ್ಗಪ್ಪವರಿಗೆ ಚಳಿ ಬಿಡಿಸಿ, ಸವಿತಾಬಾಯಿ ತಮ್ಮ ಪಾಡಿಗೆ ಹೊರಟರು.