ಸುದ್ದಿವಿಜಯ, ಜಗಳೂರು: ತಾಲೂಕಿನಾದ್ಯಂತ ನಿನ್ನೆ (ಭಾನುವಾರ)ಸಂಜೆ, ರಾತ್ರಿ ಸುರಿದ ಬಿರುಗಾಳಿ ಮಳೆಯಿಂದ ರೈತರಿಗೆ ಸಾಕಷ್ಟ ನಷ್ಟವಾಗಿದ್ದು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ನೇತೃತ್ವದ ಅಧಿಕಾರಿಗಳು ಅನೇಕ ಪ್ರದೇಶಗಳಿಗೆ ಭೇಟಿ ನೀಡಿ, ಗ್ರಾಮಲೆಕ್ಕಿಗರು, ಸಹಾಯಕರಿಂದ ಮಾಹಿತಿ ಪಡೆದಿದ್ದು ಅಂದಾಜು 20 ಲಕ್ಷಕ್ಕೂ ರೂಗಿಂತ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಲಸಾಗಿದೆ.
ಕಸಬ ಹೋಬಳಿಯಲ್ಲಿ ಅಡಕೆ ಎರಡು ಹೆಕ್ಟೇರ್ ನಾಶವಾಗಿದೆ. 9 ಮನೆಗಳಿಗೆ ಹಾನಿಯಾಗಿದೆ. ಬಿಳಿಚೋಡು ಹೋಬಳಿಯಲ್ಲಿ ಬಾಳೆ2 ಹೆಕ್ಟೇರ್, ಪಪ್ಪಾಯ 1 ಹೆಕ್ಟೇರ್, 2 ಮನೆಗಳಿಗೆ ಹಾನಿಯಾಗಿದೆ. ಸೊಕ್ಕೆ ಹೋಬಳಿಯಲ್ಲಿ ಅಡಕೆ 2 ಹೆಕ್ಟೇರ್, ಬಾಳೆ 5 ಹೆಕ್ಟೇರ್,
ಪಪ್ಪಾಯ ಹತ್ತು ಹೆಕ್ಟೇರ್ ನಾಶವಾಗಿದೆ ಮತ್ತು ಚಂದ್ರಶೇಖರ್ ಸ್ವಾಮಿ ಎಂಬ ಚಿಕ್ಕ ಉಜ್ಜಿನಿ ಗ್ರಾಮದ ರೈತನ ಎತ್ತು ಸಿಡಿಲಿನಿಂದ ಮೃತ ಪಟ್ಟಿದೆ ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಸುದ್ದಿವಿಜಯ ವೆಬ್ ನ್ಯೂಸ್‍ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.