ತಿಂಗಳಿಗೊಮ್ಮೆ ಪೌರ ಕಾರ್ಮಿಕರ ಜೊತೆ ಕಸಗುಡಿಸುವೆ: ಶಾಸಕ ಬಿ.ದೇವೇಂದ್ರಪ್ಪ

Suddivijaya
Suddivijaya June 10, 2023
Updated 2023/06/10 at 1:34 PM

ಸುದ್ದಿವಿಜಯ,ಜಗಳೂರು:ಐದು ವರ್ಷಗಳ ಅವದಿಯಲ್ಲಿ ತಿಂಗಳಿಗೊಮ್ಮೆ ಪೌರಕಾರ್ಮಿಕರ ಜತೆಗೂಡಿ  ಮುಂಜಾನೆ  ಕೈಯಲ್ಲಿ ಪೊರಕೆ ಹಿಡಿದು ಪಟ್ಟಣದ ಬೀದಿಗಳಲ್ಲಿ ಕಸ ಗೂಡಿಸಿ ಸ್ವಚ್ಛಗೊಳಿಸುವ ಮೂಲಕ ಪಟ್ಟಣದ ಉತ್ತಮ ಆರೋಗ್ಯಕ್ಕೆ ಒತ್ತು ನೀಡುತ್ತೇನೆ.

ನನ್ನ 34 ವರ್ಷಗಳ ಕಾಲ ಕಾಲೇಜಿನಲ್ಲಿ ಕಸ ಹೊಡೆದು, ಗಂಟೆ ಬಾರಿಸಿದ್ದೇನೆ. ಈಗ ಶಾಸಕನಾಗಿ ಸೇವೆ ಮಾಡುತ್ತೇನೆ  ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪೌರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

 ಪೌರಕಾರ್ಮಿಕರಿಗೆ ಚಳಿಗಾಲದಲ್ಲಿ ಸ್ವೆಟ್ಟರ್, ಟೋಪಿ ಹಾಗೂ ಮಳೆಗಾಲದಲ್ಲಿ ರೈನ್ ಕೋಟ್ ಕೊಡಿಸಲಾಗುವುದು. ವರ್ಷಕ್ಕೆ ಎರಡು ಬಾರಿ ನನ್ನ ಸಂಬಳದಲ್ಲಿ ಉಡುಗೊರೆ ಕೊಡುತ್ತೇನೆ.

ಪ.ಪಂ ಸ್ವಯಂ ಸೇವಕರಿಗೆ ಪ್ರತಿ ತಿಂಗಳು ಒಂದು ಸಾವಿರ ಪ್ರೋತ್ಸವಧನ ನೀಡುತ್ತೇನೆ. ಆದರೆ ಕಳ್ಳಾಟ, ಮೈಗಳ್ಳರಿಗೆ ಅವಕಾಶ ಇರುವುದಿಲ್ಲ.

ಮುಕ್ತವಾಗಿ ಕೆಲಸ ಮಾಡಬೇಕು. ಐದು ವರ್ಷ ನನ್ನನ್ನು ಉಪಯೋಗಿಸಿಕೊಳ್ಳಿ. ನನ್ನ ಜೀವನದಲ್ಲಿ ಸಮಯ ಮತ್ತು ಕಾಯಕಕ್ಕೆ ಒತ್ತು ನೀಡುತ್ತೇನೆ.

ಸಿರಿಗರೆಯ ಡಾ. ಶಿವಮೂರ್ತಿ ಶ್ರೀಗಳು ಸಮಯಕ್ಕೆ ಒತ್ತು ಕೊಡುತ್ತಾರೆ ಹಾಗೇಯೇ ಬಸವಣ್ಣನವರು ಕಾಯಕಕ್ಕೆ ಬೆಲೆ ಕೊಡುತ್ತಿದ್ದರು.

ಆದ್ದರಿಂದ ಈ ಇಬ್ಬರು ನನಗೆ ಆದರ್ಶವಾಗಿದ್ದಾರೆ ಅವರ ದಾರಿಯಲ್ಲಿ ನಾನು ನಡೆಯುತ್ತಿದ್ದೇನೆ ಎಂದರು.

ಪಟ್ಟಣದಲ್ಲಿ 19 ಅಧಿಕೃತ 13 ಅನಧೀಕೃತ ಸೇರಿದಂತೆ 32 ಬಡಾವಣೆಗಳಿವೆ, ಇದರಲ್ಲಿ 19 ಬಡಾವಣೆಗಳಿಗೆ ಮಾತ್ರ ಸರಕಾರದ ಸೌಲಭ್ಯಗಳು ಸಿಗುತ್ತವೆ.

ಉಳಿದವುಗಳಿಗೆ ಯಾವುದೇ ಸೌಲಭ್ಯವು ಇಲ್ಲದೇ ನಿವೇಶನಗಳು ನೋಂದಾಣಿಯಾಗದೇ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಶೀಘ್ರವೇ ಸಂಬಂಧಿಸಿ ಸಚಿವರ ಜತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಪಡೆಯುವ ಪ್ರಯತ್ನ ಮಾಡುತ್ತೇನೆ ಎಂದರು.

ಪಟ್ಟಣಕ್ಕೆ ಯುಜಿಡಿ ಅವಶ್ಯಕವಾಗಿದೆ, ಹಳೆ ಬಸ್ ನಿಲ್ದಾಣದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೂ ರಸ್ತೆ ಚಿಕ್ಕದಾಗಿದ್ದು, ರಸ್ತೆ ವಿಭಜನೆ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ನೀಡಬೇಕು.

ಶಾಂತಿಸಾಗರದ ನೀರು ಸಮರ್ಪಕವಾಗಿ ವಾರ್ಡ್ ಗಳಿಗೆ ಪೂರೈಕೆಯಾಗುತ್ತಿಲ್ಲ, ಕೆರೆ ನಿವಾಸಿಗಳಿಗೆ ನಿವೇಶನ ನೀಡಬೇಕು, ಪಟ್ಟಣ ಪಂಚಾಯಿತಿ ಕಚೇರಿ ದೂರವಾಗುವುದರಿಂದ  ಜನರಿಗೆ ಕಂದಾಯ ಕಟ್ಟಲು ತುಂಬ ತೊಂದರೆಯಾಗುತ್ತಿದೆ ಪರ್ಯಾಯವಾಗಿ ಬೇರೆ ವ್ಯವಸ್ಥೆ ಮಾಡಬೇಕು  ಎಂದು ಮಾಜಿ ಪ.ಪಂ ಅಧ್ಯಕ್ಷ  ಆರ್.ತಿಪ್ಪೇಸ್ವಾಮಿ ಶಾಸಕರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್ವರಪ್ಪ, ಪ.ಪಂ ಮುಖ್ಯಾಧಿಕಾರಿ ಲೋಕ್ಯನಾಯ್ಕ, ಪ.ಪಂ ಸದಸ್ಯರಾದ ರಮೇಶ್, ಮಂಜುನಾಥ್.

ಲುಕ್ಮಾನ್, ಆರ್ ತಿಪ್ಪೇಸ್ವಾಮಿ, ಮಹಮದ್, ದೇವರಾಜ್, ರೇವಣಸಿದ್ದಪ್ಪ, ರವಿಕುಮಾರ್, ಮಹಾಲಿಂಗಪ್ಪ, ಶಕೀಲ್, ಲಲೀತ ಶಿವಣ್ಣ, ಸರೋಜಮ್ಮ.

ವಿಶಾಲಾಕ್ಷಿ, ಮಂಜಮ್ಮ, ಲೋಕಮ್ಮ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮಹಮದ್ ಗೌಸ್, ಆರೋಗ್ಯ ನಿರೀಕ್ಷಕ ಕಿಫಾಯತ್ ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!