ಸುದ್ದಿವಿಜಯ,ಜಗಳೂರು:ಪಟ್ಟಣದ ಮಲೀನ ನೀರು ಕೆರೆಯ ಮೂಲಕ ಹೊರಗೆ ಹರಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಮಾಣ ಮಾಡುತ್ತಿರುವ ರಾಜ ಕಾಲುವೆಯನ್ನು ಭಾನುವಾರ ಶಾಸಕ ದೇವೇಂದ್ರಪ್ಪ ವೀಕ್ಷಿಸಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಎಇ ಮನೋಜ್ ಅವರಿಗೆ ಸೂಚನೆ ನೀಡಿದರು.
ಕಟ್ಟಿರುವ ತಡೆಗೋಡೆ ಸರಿ ಇಲ್ಲ. ಎತ್ತರವಾಗಿ ನಿರ್ಮಾಣ ಮಾಡಬೇಕು. ಕಾಲುವೆ ಪ್ರವೇಶಿಸುವ ಮಲೀನ ನೀರು ಮಧ್ಯಕ್ಕೆ ನಿಲ್ಲುತ್ತದೆ. ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂದು ಹೇಳಿದರು.
57 ಕೆರೆ ತುಂಬುವ ಯೋಜನೆಯಲ್ಲಿ ಜಗಳೂರು ಕೆರೆ ಭರ್ತಿಯಾದರೆ ನೀರು ನಿರ್ಮಾಣ ಮಾಡಲಾಗಿರುವ ರಾಜ ಕಾಲುವೆ ಮುಚ್ಚಿ ಹೋಗುತ್ತದೆ.
ಅದಕ್ಕೆ ಪ್ಲಾನಿಂಗ್ ಮಾಡಿ. ತಡೆ ಗೋಡೆ ಎತ್ತಿಸಬೇಕು. ತ್ಯಾಜ್ಯ ನೀರು ಕೆರೆ ಸೇರಬಾರದು. ಹಾಗಾದರೆ ಜಲ ಚರಗಳು ಸಾವನ್ನಪ್ಪುತ್ತವೆ ಎಂದರು.