ಮೃತಪಟ್ಟು 25 ದಿನಗಳ ಬಳಿಕ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವಪತ್ತೆ

Suddivijaya
Suddivijaya July 1, 2023
Updated 2023/07/01 at 2:56 AM

ಸುದ್ದಿವಿಜಯ,ಹೊಳಲ್ಕೆರೆ/ ಜಗಳೂರು: ಕಳೆದ ಜೂನ್ 5 ರಂದು ನಾಪತ್ತೆಯಾಗಿದ್ದ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಕೆ.ಬಿ.ಬಸವಂತಕುಮಾರ್ (37) ಎಂಬ ಯುವಕನ ಶವ ಹೊಳಲ್ಕೆರೆ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದ್ದು ಸಾವಿನ ಸುತ್ತ ಹಲವು ಅನುಮಾನಗಳ ಹುತ್ತ ಬೆಳೆದಿದೆ.

ಘಟನೆಯ ವಿವರ: ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಕೆ.ಎಂ.ಬಸವರಾಜ್ ಎಂಬುವರ ಪುತ್ರ ಕೆ.ಬಿ. ಬಸವಂತಕುಮಾರ್ ವೃತ್ತಿಯಲ್ಲಿ ಲಾರಿ ಡ್ರೈವರ್ ಆಗಿ ಚಿತ್ರದುರ್ಗ ನಗರದ  ಮೀನಾಕ್ಷಿ ಬಿಲ್ಡಿಂಗ್ ಸಲ್ಯೂಷನ್ ಪ್ರೈವೇಟ್ (ಲಿ) ನಲ್ಲಿ ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ.

ಈಚೆಗೆ ಅಂದರೆ ಜೂನ್ 4 ಭಾನುವಾರ ರಂದು ಚಿತ್ರದುರ್ಗ ನಗರದಿಂದ ಹೊಸದುರ್ಗ ಪಟ್ಟಣಕ್ಕೆ ಲೋಡ್ ಆಗಿದ್ದ ಸಿಮೆಂಟ್ ಲಾರಿಯನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಅಜಾಗೂರ ಚಾಲನೆ,

ಅತಿವೇಗದ ಚಾಲನೆ ಮಾಡುತ್ತಿದ್ದಾಗ ಬೊಮ್ಮನಕಟ್ಟೆ ಗ್ರಾಮದ ಕೆರೆ ಏರಿಯ ಕ್ರಾಸ್ ಬಳಿ ಲೋಕದೊಳಲು ಗ್ರಾಪಂ ಸದಸ್ಯ ಮಂಜುನಾಥ್ ಎನ್ನುವವರು ಲಾರಿ ತಡೆದು ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಹೊಳಲ್ಕೆರೆ ಪೊಲೀಸರು ಬಸವಂತ್ ಕು‌ಮಾರ್ ನನ್ನು ಲಾರಿ ಸಹಿತ ಠಾಣೆಗೆ ಕರೆದುಕೊಂಡು ಹೋಗಿ ರ್ಯಾಷ್ ಡ್ರೈವಿಂಗ್ ಕೇಸ್ ಹಾಕಿ ಠಾಣೆಯ ಮುಂದೆ ಲಾರಿ ನಿಲ್ಲಿಸಿ ಅದರಲ್ಲೇ ಮಲಗಲು ಸೂಚಿಸಿದ್ದಾರೆ.

ಮರುದಿನ ಅಂದರೆ ಜೂನ್ 5 ರಂದು ಸೋಮವಾರ ಬೆಳಿಗ್ಗೆ ಠಾಣೆಗೆ ಬಂದ ಬಸವಂತ್ ಕುಮಾರ್ ಲಾರಿ ಬಿಡುಗಡೆಗೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆಗ ಪೊಲೀಸರು ಲಾರಿ ಮಾಲೀಕರನ್ನು ಸ್ಥಳಕ್ಕೆ ಕರೆಸುವಂತೆ ಸೂಚಿಸಿದ್ದಾರೆ.

ಮಾಲೀಕರು ಬರುವುದರೊಳಗೆ ಮೊಬೈಲ್ ಠಾಣೆಯಲ್ಲಿಟ್ಟುಕೊಂಡು ಉಪಹಾರ ಸೇವಿಸಿ ಬರುವಂತೆ ಬಸವಂತ್ ಕುಮಾರನಿಗೆ ಸೂಚಿಸಿದ್ದಾರೆ.

ಬೆಳಗ್ಗೆ  9.15 ರ ಸಮಾರಿಗೆ ಠಾಣೆಯಿಂದ ಹೊರ ಹೋದ ಯುವಕ ಬಸವಂತ್ ಕುಮಾರ್ ಮರಳಿ ಠಾಣೆಗೂ ಬಾರದೆ, ಕಟ್ಟಿಗೆಹಳ್ಳಿ ಗ್ರಾಮಕ್ಕೂ ಹೋಗದೇ ಇದ್ದಾಗ ಅತಂಕ್ಕೆ ಒಳಗಾದ ಬಸವಂತ್ ಕುಮಾರ್ ಪೋಷಕರು ಜೂನ್ 8 ರಂದು ಹೊಳಲ್ಕೆರೆ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸುತ್ತಾರೆ.

ಆದಾದ ನಂತರ ಪೊಲೀಸರು, ಪೋಷಕರು ಸಂಬಂಧಕರು, ಸ್ನೇಹಿತರು, ಹಿತೈಷಿಗಳ ಮನೆಗಳಲ್ಲಿ ಹುಡುಕಿದರೂ ಸಿಗದಾಗ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿಗಲಿಗೂ ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಹೊಳಲ್ಕೆರೆ ಪೊಲೀಸರಿಗೆ ನಾಪತ್ತೆಯಾದ ಯುವಕನ ಪತ್ತೆಗೆ ಇನ್ಸ್‌ಪೆಕ್ಟರ್ ರವೀಶ್, ಪಿಎಸ್ಐ ಎಸ್. ಸುರೇಶ್ ನೇತೃತ್ವದಲ್ಲಿ ಪೊಲೀಸ್ ತಂಡಗಳನ್ನು ರಚಿಸಿ ಹುಡುಕಾಟ ಆರಂಭಿಸಿದರು.

ಕಳೆದ 20 ದಿನಗಳಿಂದ ಹುಡುಕಿದರೂ ಯುವಕ ಪತ್ತೆಯಾಗದಿದ್ದರೂ ಪೊಲೀಸರು ತಮ್ಮ ಶತ ಪ್ರಯತ್ನ ಬಿಡಲಿಲ್ಲ.

ಪಿಂಡ ಪ್ರದಾನ ವೇಳೆ ಹುಣಸೇ ಮರದಲ್ಲಿ ಶವ ಪತ್ತೆ:

ನಿನ್ನೆ ಶುಕ್ರವಾರ ಹೊಳಲ್ಕೆರೆ ಚಿತ್ರದುರ್ಗ ರಸ್ತೆಯ ಮುರುಗೇಶ್ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಇರುವ ಸ್ಮಶಾನದಲ್ಲಿ ಏಕಾದಶಿ ನಿಮಿತ್ತ ಸ್ಮಶಾನ ಸ್ವಚ್ಛಗೊಳಿಸಿದ ನಂತರ ಹಿರಿಯರಿಗೆ ಪೂಜೆ ಸಲ್ಲಿಸುವಾಗ ಮಹಿಳೆಯೊಬ್ಬರು ಆಕಸ್ಮಿಕವಾಗಿ ಹುಣಸೇ ಮರದ ಹತ್ತಿರ ಹೋದಾಗ

ಮರದ ಕೊಂಬೆಗೆ ನೇಣುಬಿಗಿದ ರೀತಿಯಲ್ಲಿ ಶವ ಇರುವುದನ್ನು ಗಮನಿಸಿದ ಅವರು ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೈಮೇಲೆ ಹಾಕಿದ್ದ ಶರ್ಟ್, ಲುಂಗಿ, ಚಪ್ಪಲ್ ಆಧರಿಸಿ ಮೃತದೇಹ ಗುರುತು ಹಿಡಿದಿದ್ದಾರೆ. ನಂತರ ಪೋಷಕರಿಗೆ ಮಾಹಿತಿ ನೀಡಿದ್ದು ಪೋಷಕರು ಮೃತ ಯುವಕ ಬಸವಂತ್ ಕುಮಾರನದ್ದು ಎಂದು ಭಾಗಶಃ ಪತ್ತೆಯಚ್ಚಿದ್ದು ಸ್ಥಳಕ್ಕೆ ಎಸ್ಪಿ, ವಿಧಿ ವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲಿಸದ ಬಳಿಕ ಸಾವಿನ ಸುತ್ತದ ಹನುಮಾನಗಲ ಹುತ್ತ ಬಯಲಾಗಲಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!