ಸುದ್ದಿವಿಜಯ, ಜಗಳೂರು: ಪಟ್ಟಣದ ಪ್ರಮುಖ ಸರ್ಕಾರಿ ಬಸ್ ನಿಲ್ದಾಣದ ರಸ್ತೆಯಲ್ಲಿ ಕೋಳಿ ಅಂಗಡಿ ಹಾವಳಿಯಿಂದಾಗಿ ಸುಗಮ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಹೇಳುವವರು ಕೇಳುವವರು ಇಲ್ಲದಂತಾಗಿದೆ.
ಹೌದು, ಪಟ್ಟಣದ ಮಹಾತ್ಮಗಾಂಧೀ ಹೊಸ ನಿಲ್ದಾಣದ ಪಕ್ಕದ ಬೈಪಾಸ್ ಮಾರ್ಗದ KSRTC ರಸ್ತೆಯಲ್ಲಿ ಅನಧಿಕೃತ ಕೋಳಿ ಅಂಗಡಿಗಳ ಹಾವಳಿಯಿಂದಾಗಿ ಸರ್ಕಾರಿ ಬಸ್ ಸಂಚಾರ ಹಾಗು ಪಾದಚಾರಿಗಳಿಗೆ ದಿನ ನಿತ್ಯ ಇನ್ನಿಲ್ಲದ ಕಿರಿಕಿರಿ ಉಂಟಾಗಿದ್ದರೂ ಸಹ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಮ್ಮತ್ತಿಮೇಲೆ ನಡು ರಸ್ತೆಗೆ ಅಂಗಡಿ ತಂದಿರುವುದು ಆಶ್ಚರ್ಯಕರವಾಗಿದೆ.
ಮಾರ್ಗ ಮದ್ಯೆ ಗೂಡಂಗಡಿಗಳು ಇದ್ದರೂ ಸಹ ನಿಯಮ ಮೀರದೆ ಅಂಗಡಿಗಳನ್ನು ಹಾಕಲಾಗಿದೆ. ಆದರೆ ಕೋಳೆ ಅಂಗಡಿ ಮಾಲೀಕರು ಸುಗಮ ರಸ್ತೆಗೆ ಅನುವು ಮಾಡಿಕೊಡದೆ ಸಾರ್ವಜನಿಕರಿಗೆ ದಿನನಿತ್ಯ ಕಿರಿ ಕಿರಿ ಉಂಟು ಮಾಡುತ್ತಿದ್ದರೂ ಸಹ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿರುಗು ನೋಡುತ್ತಿಲ್ಲ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಇತ್ತೀಚಿಗೆ ಶಕ್ತಿ ಉಚಿತ ಪ್ರಯಾಣ ಯೋಜನೆಯಿಂದಾಗಿ ಸಾಕಷ್ಟು ಮಹಿಳೆಯರು ವಿದ್ಯಾರ್ಥಿನಿಯರು ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದು ಅವರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಹಲವರ ಒತ್ತಾಯವಾಗಿದೆ.
ವಿದ್ಯಾರ್ಥಿಗಳು, ಮಹಿಳೆಯರು, ಸಾರ್ವಜನಿಕರು ಬಸ್ ನಿಲ್ದಾಣಕ್ಕೆ ಹೋಗಲು ಮಧ್ಯದಲ್ಲಿ ಮದ್ಯದಂಗಡಿಗಳು ಹೆಚ್ಚಾಗಿರುವದರಿಂದ ಮದ್ಯಪಾನ ಮಾಡುವವರು ಸಹ ಹೆಚ್ಚಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಈ ರಸ್ತೆಯಲ್ಲಿ ಪೊಲೀಸರ ಭದ್ರತೆ ಇಲ್ಲದೇ ಇರುವುದು ಸಹ ಪುಂಡ ಪೋಕರಿಗಳಿಗೆ ಕಡಿವಾಣ ಇಲ್ಲವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.