ಸುದ್ದಿವಿಜಯ, ಜಗಳೂರು: ತಾಲೂಕಿನ ಹಿರೇಮಲ್ಲನಹೊಳೆ ಸರಕಾರಿ ಶಾಲೆಯ ಬಿಸಿಯೂಟದಲ್ಲಿ ಕಂಡು ಬಂದ ಹುಳು ಮತ್ತು ಕೂದಲು ಸುದ್ದಿ ಸುದ್ದಿವಿಜಯ ವೆಬ್ನ್ಯೂಸ್ನಲ್ಲಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆಗೆ ಭೇಟಿ ನೀಡಿದ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ದುರಗಪ್ಪ, ಕೇತ್ರ ಶೀಕ್ಷಣಾಧಿಕಾರಿ ಸುರೇಶ್ ರೆಡ್ಡಿ ಭೇಟಿ ನೀಡಿ ಅಡುಗೆ ಸಹಾಯಕರನ್ನು ಬದಲಿಸಲು ಸೂಚನೆ ನೀಡಿದರು.
ಬಹುದಿನಗಳಿಂದ ಶಾಲೆಯಲ್ಲಿ ಅಡುಗೆ ತಾಯಾರಕರು ಅಡುಗೆ ಸರಿಯಾಗಿ ಮಾಡದೆ ಇರುವುದರಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ ತಾಯಾರಿಸಿದ ಮಧ್ಯಾಹ್ನದ ಬಿಸಿಯೂಟ ಮಾಡದೆ ಮನೆಯಿಂದ ಟಿಫನ್ ಬಾಕ್ಸ್ ತರುತ್ತಿದ್ದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಶಾಲೆಗೆ ಬಂದರೂ ಅಡುಗೆ ಸಿಬ್ಬಂದಿ ಬಂದಿರಲಿಲ್ಲ. ಇದನ್ನ ಮನಗಂಡ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಡುಗೆ ಸಹಾಯಕರನ್ನು ತೆಗೆದು ಹಾಕಿ ಹೋಸದಾಗಿ ನೇಮಕ ಮಾಡಿಕೊಳ್ಳಿ. ಈ ಹಿಂದೆ ಯಾವ ಮಾನದಂಡಗಳ ಅಧಾರದಲ್ಲಿ ಆಯ್ಕೆ ಮಾಡಿಕೊಂಡಿದ್ದಿರಿ.
ಯಾವ ಸಮುದಾಯದ ಅಡುಗೆಯವರು ಕೇಲಸ ಮಾಡುತ್ತಿದ್ದರೊ ಅದೆ ಸುಮುದಾಯದವರಿಗೆ ಅವಕಾಶ ಮಾಡಿಕೊಡಿ ಎಂದು ಮುಖ್ಯ ಶಿಕ್ಷಕರಿಗೆ ಹಾಗೂ ಎಸ್ಡಿಎಂಸಿ ಅಧ್ಯಕ್ಷರಿಗೆ, ಗ್ರಾಪಂ ಪಿಡಿಒಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಿಡಿಒ ಅರವಿಂದ್, ಸಿಆರ್ಪಿ ರವಿಪ್ರಕಾಶ್, ಇಸಿಒ ಹನುಮಂತಪ್ಪ, ತಾಲೂಕು ಅಕ್ಷರದಾಸೋಹ ಅಧಿಕಾರಿ ಶ್ರೀನಿವಾಸಗೌಡ, ಕರುನಾಡ ನವ ನಿರ್ಮಾಣ ವೇಧಿಕೆ ರಾಜ್ಯ ಅದ್ಯಕ್ಷ ಮಹಾಲಿಂಗಪ್ಪ, ಮುಖಂಡರಾದ ಚನ್ನಬಸಣ್ಣಗೌಡ, ಬಾಣೇಶ್, ಎಸ್ಡಿಎಂಸಿ ಅದ್ಯಕ್ಷ ಸುರೇಶ್ ಬಾಬು,
ತಳವಾರ್ ರಾಜು, ಹೇಮಾರೆಡ್ಡಿ, ಪ್ರಭು, ತಾಳಿಕೇರಪ್ಪರ, ಮಂಜಣ್ಣ, ಮುಖ್ಯಶಿಕ್ಷಕರಾದ ಪ್ರಕಾಶ್, ತಿರುಮಲ್ಲೇಶ್ವರ ಪ್ರೌಡಶಾಲೆ ಮುಖ್ಯಶಿಕ್ಷಕರಾದ ಪಾಲಯ್ಯ, ಬಸವರಾಜ್ ಮುಂತಾದವರು ಈ ಸಭೆಯಲ್ಲಿ ಉಪಸ್ಥಿತಿಯಿದ್ದರು.