ಸುದ್ದಿವಿಜಯ,ಜಗಳೂರು: ತಾಲೂಕಿನ ಅಣಬೂರು ಸಮೀಪದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಜನರ ಆತಂಕ ಮನೆ ಮಾಡಿದೆ.
ಹೌದು, ಅಣಬೂರು ದಟ್ಟ ಅರಣ್ಯಪ್ರದೇಶ ವ್ಯಾಪ್ತಿಯಲ್ಲಿದ್ದು, ಅಣಬೂರು ಗುಡ್ಡ ಎಂದಾಕ್ಷಣ ನೆನಪಾಗುವುದು ಕಾಡು ಪ್ರಾಣಿಗಳಾದ ಕರಡಿ, ಚಿರತೆ ಸ್ಥಳವೆಂದು.ಹಾಗಾಗಿ ಇಲ್ಲಿ ಓಡಾಡುವ ಪ್ರತಿಯೊಬ್ಬರಲ್ಲಿ ನಡುಕ ಶುರುವಾಗುತ್ತದೆ.
ಬುಧವಾರ ರಾತ್ರಿ ಬಸ್‌ನಲ್ಲಿ ಪ್ರಯಾಣಿಸುವಾಗ ಆಂಜನೇಯ ದೇವಸ್ಥಾದಿಂದ ಹೊರಗೆ ಜಾಂಬವಂತ ಬರುತ್ತೊರುವುದನ್ನು ಬಸ್ ನಲ್ಲಿದ್ದ ಕೆಲ ಪ್ರಯಾಣಿಕರು ಮೋಬೈಲ್ ದೃಶ್ಯ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದರಿಂದ ಎಲ್ಲರಲ್ಲೂ ಆತಂಕ ಮನೆ ಮಾಡಿದೆ.
ರೈತರಲ್ಲಿ ಆತಂಕ:
ಮಳೆ ಕೊರತೆ ಹಿನ್ನೆಲೆ ರಾತ್ರಿ ಹೊತ್ತು ಹೊಲಗಳಿಗೆ ಹೋಗುವ ರೈತರಿಗೆ ಕರಡಿಗಳ ಕಾಟ ಜೋರಾಗಿದೆ. ಕುಡಿಯಲು ನೀರಿಲ್ಲದ ಕಾರಣ ಜಮೀನುಗಳಿಗೆ ದಾಂಗುಡಿಯಿಡುವ ಕರಡಿಗಳು ಪೈಪ್, ಡ್ರಿಪ್ ಲ್ಯಾಟ್ರಲ್ ಗಳನ್ನು ಕಚ್ಚಿ ಹಾನಿ ಮಾಡುತ್ತಿವೆ. ಅರಣ್ಯಾಧಿಕಾರಿಗಳು ಇತ್ತಕಡೆ ಗಮನಹರಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.