ಸುದ್ದಿವಿಜಯ, ಜಗಳೂರು: ಸತ್ಯ, ನ್ಯಾಯನಿಷ್ಠುರತೆ, ಪ್ರಾಮಾಣಿಕತೆ, ಬದ್ಧತೆ ಸರಳ ಸಂಗತಿಗಳ ಮೂಲಕ ಬ್ರಿಟಿಷರ ದರ್ಪ, ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ಮಹಾತ್ಮ ಗಾಂಧೀಜಿ ನಡೆಸಿದ್ದಂಥ ಹೋರಾಟ ವಿಶ್ವಮಾನ್ಯ ಅವರು ಸರ್ವ ಕಾಲಕ್ಕೂ ಅದರ್ಶ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಸೋಮವಾರ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಹಿನ್ನೆಲೆ ಭಾವ ಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಗಾಂಧೀಜಿಯವರ ವ್ಯಕ್ತಿತ್ವ ಆದರ್ಶಗಳು ಸ್ವತಂತ್ರ ಹಾಗೂ ಗಣತಂತ್ರ ಭಾರತದ ಆಧಾರ ಸ್ತಂಭಗಳು. ಅವರ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳುವವರು ಈ ದಿನಗಳಲ್ಲಿ ಇದ್ದಾರೆ. ಮುಂದಿನ ತಲೆಮಾರಿಗೂ ಜೀವಂತ. ಎಲ್ಲರೂ ಗಾಂಧೀಜಿಯ ಹಾದಿಯಲ್ಲಿ ನಡೆಯುವುದು ಅಷ್ಟು ಸುಲಭವಲ್ಲ.ಆದಾಗ್ಯೂ ನಮ್ಮ ಸುತ್ತಲಿನ ಹಲವು ಗಣ್ಯರಲ್ಲಿ ಗಾಂಧೀಜಿಯ ಒಂದಲ್ಲ ಒಂದು ಬಿಂಬಗಳು ಅಡಕವಾಗಿವೆ ಎಂದರು.
ಸತ್ಯ ಅಹಿಂಸೆ ಮತ್ತು ಉಪವಾಸಗಳ ಮೂಲಕ ಬ್ರಿಟಿಷರನ್ನು ಶಸ್ತ್ರಗಳಲ್ಲಿಲ್ಲದೇ ಬಗ್ಗು ಬಡಿದ ಮಹಾನ್ ಚಿಂತಕ. ಅವರ ಆದರ್ಶಗಳಂತೆ ಪ್ರಧಾನಿಯಾಗಿ ದಿಟ್ಟ ಕ್ರಮ ಕೈಗೊಳ್ಳುವಲ್ಲಿ ಮತ್ತು ಭಾರತದ ಏಕತೆ ಸಮಗ್ರತೆಗೆ ಶ್ರಮಿಸಿದ ಮಹಾನ್ ನಾಯಕ ಎಂದರೆ ಲಾಲ್ ಬಹದ್ದೂರ್ ಶಾಸ್ತ್ರ ಅವರು.ಜಗಳೂರು ಪಟ್ಟಣದ ಶಾಸಕ ಜನ ಸಂಪರ್ಕ ಕಚೇರಿಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ಆಚರಣೆ ಮಾಡಲಾಯಿತು.
ಹೋಮ್ ಲೆಸ್ ಹೋಮ್ ಮಿನಿಸ್ಟರ್ ಎಂದೇ ಖ್ಯಾತಿಯಾಗಿದ್ದವರು. ಅಂತಹ ನಿಷ್ಟ, ಪ್ರಾಮಾಣಿಕ ಮಹಾನ್ ನಾಯಕರ ಜನ್ಮದಿನ ಆಚರಿಸುತ್ತಿರುವು ನಮ್ಮ ಸೌಭಾಗ್ಯ ಎಂದರು.
ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಸ್ವಾತಂತ್ರ್ಯ ಸರಮರದಲ್ಲಿ ಮಂದಗಾಮಿಗಳಾಗಿ ಆಂಗ್ಲರನ್ನು ಅಹಿಂಸೆಯ ಅಸ್ತ್ರದ ಮೂಲಕ ತಣಿಸಿದ ಮಹಾನ್ ಹೋರಾಟಗಾರ ಗಾಂಧೀಜಿಯ ಆದರ್ಶವನ್ನು ವಿಶ್ವವೇ ಆಚರಿಸುತ್ತಿರುವುದು ನಮ್ಮ ಭಾರತದ ಹೆಮ್ಮೆ ಎಂದರು.
ಕೆಪಿಸಿಸಿ ಸದಸ್ಯ, ಲೋಕಸಭಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ಅ.2 ರಂದು ವಿಶ್ವಸಂಸ್ಥೆ ಅಹಿಂಸಾ ದಿನವನ್ನು ಗಾಂಧೀಜಿಯವರ ಜನ್ಮದಿನವನ್ನಾಗಿ ಆಚರಿಸುತ್ತಿರುವುದು ಅವರ ಆದರ್ಶ ಸಿದ್ಧಾಂತಗಳಿಂದ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅರುಣ್ ಕಾರಗಿ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಸಿ.ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಮಹೇಶ್ವರಪ್ಪ, ಪಪಂ ಸದಸ್ಯ ರಮೇಶ್‍ರೆಡ್ಡಿ ಮಾತನಾಡಿದರು.
ಈ ವೇಳೆ ಪಪಂ ಸದಸ್ಯ ಅರಿಶಿಣಗುಂಡಿ ಮಂಜುನಾಥ್, ತಾನಾಜಿ ಗೋಸಾಯಿ, ಕಾಂಗ್ರೆಸ್ ಮುಖಂಡ ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಅಹಮದ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.