ಸುದ್ದಿವಿಜಯ, ಜಗಳೂರು: ರಾಜ್ಯದಲ್ಲಿ ಈಗಾಗಲೇ 116 ತಾಲೂಕುಗಳು ಬರಗಾಲ ಎಂದು ಘೋಷಣೆಯಾಗಿದೆ. ರೈತರು ಜೀವನ ನಡೆಸುವುದೇ ಕಷ್ಟವಾಗಿದೆ. ಬಿತ್ತನೆ ಮಾಡಿದ ಬಂಡವಾಳ ಬಂದಿಲ್ಲ ಇದರ ಮಧ್ಯೆ ರಾಷ್ಟ್ರೀಕೃತ ಬ್ಯಾಂಕ್ಗಳು ಮತ್ತು ಖಾಸಗಿ ಬ್ಯಾಂಕ್ಗಳಿಂದ ರೈತರಿಗೆ ನೋಟಿಸ್ ಬರುತ್ತಿದ್ದು ಸರಕಾರ ಬ್ಯಾಂಕ್ಗಳಿಗೆ ನೋಟಿಸ್ ಕಳುಹಿಸದಂತೆ ನಿರ್ದೇಶನ ನೀಡಬೇಕು ಎಂದು ರಾಜ್ಯ ರೈತ ಸಂಘದ (ಹುಚ್ಚವ್ವನಹಳ್ಳಿ ಮಂಜುನಾಥ್) ಬಡದಿಂದ ಶುಕ್ರವಾರ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ರಾಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಶಾಶ್ವತ ಬರಗಾಲದ ಹಣೆಪಟ್ಟಿ ಕಟ್ಟಿಕೊಂಡಿರುವ ಜಗಳೂರು ತಾಲೂಕಿನ ರೈತರು ಬದುಕುವುದೇ ಕಷ್ಟವಾಗಿದೆ.ರಾಜ್ಯ ಸರಕಾರವೂ ಸಹ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಅಂತರ್ಜಲ ಮಟ್ಟ ಕುಸಿದು ಹೋಗಿದೆ. ಬೆಳೆದ ಬೆಳೆಗಳೆಲ್ಲಾ ಒಣಗಿ ಹೋಗಿರುವಾಗ ಸಾಲಕೊಟ್ಟ ಬ್ಯಾಂಕ್ಗಳು ನಿತ್ಯ ರೈತರಿಗೆ ನೋಟಿಸ್ ನೀಡಿ ಸಾಲ ಮರುಪಾವತಿಸಿ ಎಂದು ಮಾನಸೀಕ ಹಿಂಸೆ ನೀಡುತ್ತಿವೆ.
ರೈತರ ಜೊತೆ ಚಲ್ಲಾಟವಾಡುವ ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಸರಕಾರ ನೋಟಿಸ್ ನೀಡದಂತೆ ತಾಕೀತು ಮಾಡಬೇಕು. ಆತ್ಮಹತ್ಯೆ ಜಾಡು ಹಿಡಿದಿರುವ ರೈತನ ನೆರವಿಗೆ ಸರಕಾರಗಳು ಬರಬೇಕು.
ಮುಂದಿನ ಬೆಳೆ ಬರುವವರೆಗೂ ಸಾಲ ಮರುಪಾವತಿಸುವಂತೆ ನೋಟಿಸ್ಗಳನ್ನು ಕಳುಹಿಸುವುದಾಗಲಿ ಅಥವಾ ಒತ್ತಡ ಹೇರುವುದಾಗಲೀ ಮಾಡದಂತೆ ಬ್ಯಾಂಕ್ಗಳ ವ್ಯವಸ್ಥಾಪಕರಿಗೆ ರಾಜ್ಯ ಸರಕಾರ ನಿರ್ದೇಶನ ನೀಡಬೇಕು ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ಕಾನನಕಟ್ಟೆ ತಿಪ್ಪೇಸ್ವಾಮಿ, ತಾಲೂಕು ಕಾರ್ಯದರ್ಶಿ ಚಿರಂಜೀವಿ, ರಾಜನಹಟ್ಟಿ ರಾಜು, ಶರಣಪ್ಪ, ಸಹದೇವರೆಡ್ಡಿ, ಮಡ್ರಳ್ಳಿ ತಿಪ್ಪಣ್ಣ, ಪ್ರಹ್ಲಾದಪ್ಪ, ಹೊನ್ನೂರ್ಆಲಿ ಇತರರು ಇದ್ದರು.
ಜಗಳೂರು ತಹಶೀಲ್ದಾರ್ ಕಚೇರಿ ಮುಂದೆ ರಾಜ್ಯ ರೈತ ಸಂಘದಿಂದ ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಲಾಯಿತು.