ಸುದ್ದಿವಿಜಯ, ಜಗಳೂರು: ಕಲಬುರಗಿಯ ವಕೀಲ ಹಿರಣ್ಣ ಗೌಡ ಎಂಬುವವರನ್ನು ಅಟ್ಟಾಡಿಸಿಕೊಂಡು ಹತ್ಯೆ ಮಾಡಲಾಗಿದ್ದು ಘಟನೆ ಖಂಡಿಸಿ ಪಟ್ಟಣದಲ್ಲಿ ವಕೀಲರ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾರಿಗೆ ಮನವಿ ಸಲ್ಲಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಓಂಕಾರೇಶ್, ರಾಜ್ಯದಲ್ಲಿ ವಕೀಲರ ಮೇಲೆ ಹತ್ಯೆ, ಹಲ್ಲೆ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು ವಕೀಲರಿಗೆ ಭದ್ರತೆ ಇಲ್ಲವಾಗಿದೆ.
ಚಿಕ್ಕಮಗಳೂರಿನಲ್ಲಿ ಪ್ರೀತಮ್ ಮೇಲೆ ಮಾರಣಾಂತಿಕ ಹಲ್ಲೆ ಮಾಸುವ ಮುನ್ನವೇ ದುಷ್ಕರ್ಮಿಗಳು ವಕೀಲ ಹಿರಣ್ಣ ಗೌಡರನ್ನು ಅಟ್ಟಾಡಿಸಿಕೊಂಡು ಕೊಚ್ಚಿ ಕೊಲೆ ಮಾಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ನ್ಯಾಯವಾದಿಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ.ಕೊಲೆ ಆರೋಪಿಗಳನ್ನು ತಕ್ಷಣವೇ ಪತ್ತೆ ಹಚ್ಚಿ ಕೊಲೆಯಾದ ವಕೀಲರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ತನಿಖೆ ವಿಳಂಬ ಮಾಡದೇ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಕೆ.ಎಸ್.ಪಾಟೀಲ್, ಕಾರ್ಯದರ್ಶಿ ಡಿ.ಸಿ.ತಿಪ್ಪೇಸ್ವಾಮಿ, ಸಿ. ಬಸವರಾಜ್, ಎ.ಸಿ.ತಿಪ್ಪೇಸ್ವಾಮಿ. ನಾಗರತ್ನಮ್ಮ, ಇ.ನಾಗಪ್ಪ, ಡಿ.ಶ್ರೀನಿವಾಸ್, ಎಂ.ವಿ.ಶ್ರೀನಿವಾಸ್, ಎಂ.ಎಚ್.ತಿಪ್ಪೇಸ್ವಾಮಿ, ಎಂ.ಜಿ.ಶಿವಕುಮಾರ್, ಕೊಟ್ರೋಶ್, ಸಣ್ಣ ಓಬಯ್ಯ, ವೇದಮೂರ್ತಿ, ಅಶೋಕ್ ಕುಮಾರ್ ಸೇರಿದಂತೆ ನೂರಾರು ವಕೀಲರು ಅಂಬೇಡ್ಕರ್ ವೃತ್ತದಿಂದ ಜಾಥಾ ಮೂಲಕ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
8ಜೆಎಲ್ಆರ್ಚಿತ್ರ2ಎ: ಜಗಳೂರು ಪಟ್ಟಣದಲ್ಲಿ ಕಲಬುರಗಿ ವಕೀಲನ ಹತ್ಯೆ ಖಂಡಿಸಿ ನೂರಾರು ವಕೀಲರು ಪ್ರತಿಭಟನೆ ನಡೆಸಿದರು.