ದಾಂಪತ್ಯ ಕಲಹ? ಪತಿ ನೇಣಿಗೆ ಶರಣು, ಪತ್ನಿ ಫಿನಾಯಲ್ ಕುಡಿದು ಆತ್ಮಹತ್ಯೆಗೆ ಯತ್ನ ಆಸ್ಪತ್ರೆಗೆ ದಾಖಲು!

Suddivijaya
Suddivijaya July 12, 2022
Updated 2022/07/12 at 12:37 PM

ಸುದ್ದಿವಿಜಯ, ಜಗಳೂರು:ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಪತ್ನಿ ಫಿನಾಯಿಲ್ ಕುಡಿದು ಆಸ್ಪತ್ರೆಗೆ ಸೇರಿದ ಘಟನೆ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಸೊಕ್ಕೆ ಗ್ರಾಮದ ಮಂಜಪ್ಪ (32) ಮೃತ ಪಟ್ಟಿದ್ದಾರೆ.ಪತ್ನಿ ಲಕ್ಷ್ಮಿಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಂಜಪ್ಪ ಮೂಲತಃ ಶ್ಯಾಗಲೇ ಗ್ರಾಮದವನಾಗಿದ್ದು, ಕಳೆದ 7 ವರ್ಷಗಳ ಹಿಂದೆ ಸೊಕ್ಕೆ ಗ್ರಾಮದ ಲಕ್ಷ್ಮಿ ಅವರನ್ನು ವಿವಾಹವಾಗಿದ್ದ. ಜೀವನಕ್ಕಾಗಿ ದಂಪತಿ ಹೋಟೆಲ್ ನಡೆಸುತ್ತಿದ್ದರು.

ಸೋಮವಾರ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಂಜಪ್ಪ ತನ್ನ ಮನೆಗೆ ಹೋದವನು ಸೀರೆಯಿಂದ ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷ ತಿಳಿದ ಪತ್ನಿಕೂಡ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಗ್ರಾಮಸ್ಥರ ನೆರವಿನಿಂದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇವರಿಗೆ 6 ವರ್ಷದ ತರುಣ್, 3 ವರ್ಷದ ವರುಣ್ ಇಬ್ಬರು ಮಕ್ಕಳಿದ್ದಾರೆ. ಆದರೆ ಅತ್ಮಹತ್ಯೆಗೆ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ. ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಜಗಳೂರು ಪಟ್ಟಣದ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!