ಸುದ್ದಿವಿಜಯ, ಜಗಳೂರು: ಮಳೆಗಾಲದಲ್ಲಿ ಜೋರಾಗಿ ಬೀಸುವ ಗಾಳಿ ಮತ್ತು ರಭಸವಾಗಿ ಬೀಳುವ ಮಳೆಗೆ ವಿದ್ಯುತ್ ತಂತಿಗಳು ಹರಿಸು ಬೀಳುವ ಸಂದರ್ಭಗಳು ಹೆಚ್ಚಿರುತ್ತವೆ. ಅಂತಹ ಸಂದರ್ಭಗಳಲ್ಲಿ ಎಚ್ಚರ ವಹಿಸಬೇಕು ಎಂದು ಬೆಸ್ಕಾಂ ಎಇಇ ಎಂ.ಎಂ.ಸುಧಾಮಣಿ ವಿದ್ಯಾರ್ಥಿಗಳಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಬೆಸ್ಕಾಂ ವತಿಯಿಂದ ವಿದ್ಯುಚ್ಛಕ್ತಿ ಸುರಕ್ಷತೆ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲು ಮತ್ತು ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಚಾಲನೆ ನೀಡಿ ಮಾತನಾಡಿದರು.ಜಗಳೂರು ಪಟ್ಟಣದ ಗುರುಭವನದಲ್ಲಿ ಬೆಸ್ಕಾಂ ವತಿಯಿಂದ ವಿದ್ಯುಚ್ಛಕ್ತಿ ಸುರಕ್ಷತೆ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲು ಮತ್ತು ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ತೇವದ ಕೈಗಳಿಂದ ಸ್ವಿಚ್ ಮುಟ್ಟುವುದು, ಮೊಬೈಲ್, ಐರನ್ ಬಾಕ್ಸ್ ಚಾರ್ಜ್ಗೆ ಹಾಕುವುದು ಮಾಡಬಾರದು. ಮಳೆ ಬೀಳುತ್ತಿರುವಾಗ ಬೀದಿ ದೀಪಗಳನ್ನು ಹೊತ್ತಿಸುವ ಸಮಯದಲ್ಲಿ ಎಚ್ಚರವಹಿಸಬೇಕು. ವಿದ್ಯುತ್ ಸಮಸ್ಯೆ ಸಂಭವಿಸಿದೆ ಬೆಸ್ಕಾಂ ಸಹಾಯ ವಾಣಿ 1902ಕ್ಕೆ ಕರೆ ಮಾಡಿ.
ಜನ ಸಂಖ್ಯೆ ಹೆಚ್ಚಿದಂತೆ ವಿದ್ಯುತ್ ಬೇಡಿಕೆ ಹೆಚ್ಚಿದ್ದು ಅಗತ್ಯಕ್ಕೆ ಬೇಕಾದಷ್ಟು ವಿದ್ಯುತ್ ಮಾತ್ರ ಬಳಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಆರ್ಸಿ ಜಿ.ವೆಂಕಟಬ್ರಹ್ಮಚಾರಿ, ಬಿಇಒ ಈ.ಹಾಲಮೂರ್ತಿ, ಸ.ಕಾ.ಇ. ವೆಂಕಟೇಶ್, ದಾವಣಗೆರೆ ಉಪ ವಿಭಾಗದ ಎಂಜಿನಿಯರ್ ಜಿ.ರಾಮಚಂದ್ರ ಹಾಗೂ ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಬೆಸ್ಕಾಂ ಸಿಬ್ಬಂದಿ ಇದ್ದರು.