ಸುದ್ದಿವಿಜಯ, ಜಗಳೂರು: ಇದೇ ಜ.22 ರಂದು ಅಯ್ಯೋಧ್ಯೆಯಲ್ಲಿ ಜರುಗಲಿರುವ ಶ್ರೀರಾಮ ಮಂದಿರಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ತಾಲೂಕಿನ ಅರಿಶಿಣಗುಂಡಿ ಗ್ರಾಮದಲ್ಲಿ ಶ್ರೀರಾಮ ಭಕ್ತರು ಮತ್ತು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಮರುಳಸಿದ್ದೇಶ್, ಅಯ್ಯೋಧ್ಯೆಯಲ್ಲಿ ಅಂದು ರಾಮ ಮಂದಿರ ಲೋಕಾರ್ಪಣೆಯಾಗುತ್ತಿದ್ದು, ಆ ದಿನ ಸಂಭ್ರಮಾಚರಣೆ ಮಾಡಲು ತಯಾರಿ ಮಾಡಿಕೊಂಡಿದ್ದೇವೆ. ನಾವೆಲ್ಲ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ.ಜಗಳೂರು ತಾಲೂಕಿನ ಅರಿಶಿಣಗುಂಡಿ ಗ್ರಾಮದಲ್ಲಿ ಶ್ರೀರಾಮ ಭಕ್ತರು ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ಮತ್ತು ಶ್ರೀರಾಮ ಮಂದಿರದ ಫೋಟೋ ವಿತರಣೆ ಮಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ದೇವಸ್ಥಾನ ಸಮಿತಿಯವರು ತಮ್ಮ ಊರುಗಳಲ್ಲಿರುವ ಶ್ರೀರಾಮ ಮತ್ತು ಆಂಜನೇಯ ದೇವಸ್ಥಾನಗಳಲ್ಲಿ ಪೂಜೆ ವಿಧಿ ವಿಧಾನಗಳನ್ನು ನೆರವೇರಿಸಿ ಎಂದು ಮನವಿ ಮಾಡಿದ್ದಾರೆ.
ಹೀಗಾಗಿ ಮನೆ ಮನೆಗೆ ತೆರಳಿ ಶ್ರೀರಾಮ ಚಂದ್ರ ಪ್ರಭುವಿನ ಮೂರ್ತಿ ಲೋಕಾರ್ಪಣೆ ಬಗ್ಗೆ ಜಾಗೃತಿ ಮೂಡಿಸಿ ಪೂಜೆ ಸಲ್ಲಿಸುವಂತೆ ಮನವಿ ಮಾಡುತ್ತಿದ್ದೇವೆ ಎಂದರು.
ಈ ವೇಳೆ ವೆಂಕಟೇಶ್, ಸಿದ್ದೇಶ್, ಆದರ್ಶ, ಗುರುಮೂರ್ತಿ, ಉಮೇಶ್, ಶಿವಕುಮಾರ್, ಸತೀಶ್, ನಾಗರಾಜ್, ಬಸವನಗೌಡ, ಶಿವಕುಮಾರ್ ಸೇರಿದಂತೆ ಅನೇಕರು ಇದ್ದರು.